ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ ಎಲ್ಲಾ ಸಹೋದರರು; ಈ ವಿಚಿತ್ರ ಸಂಪ್ರದಾಯವಿರುವುದೆಲ್ಲಿ ಗೊತ್ತಾ…?

ಮದುವೆಗೆ ಚಿತ್ರವಿಚಿತ್ರ ಆಚರಣೆಗಳಿವೆ. ಪ್ರತಿ ಪ್ರದೇಶದಲ್ಲೂ ಈ ಸಂಪ್ರದಾಯಗಳು ವಿಭಿನ್ನವಾಗಿರುತ್ತವೆ. ಕೆಲವು ಆಚರಣೆಗಳು ಶತಮಾನಗಳಿಂದ ನಡೆದುಕೊಂಡು ಬಂದಿವೆ. ಆದರೆ ಒಂದೇ ಹುಡುಗಿಯನ್ನು ಇಬ್ಬರು ಅಥವಾ ಮೂವರು ಮದುವೆಯಾಗುವುದನ್ನು ಕೇಳಿದ್ದೀರಾ? ಭಾರತದ ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶದಲ್ಲಿ ಇಂತಹ ವಿಲಕ್ಷಣ ವಿವಾಹಗಳು ನಡೆಯುತ್ತಿರುತ್ತವೆ.

ಟಿಬೆಟ್‌ನಲ್ಲಿ ಬಹುಕಾಲದಿಂದ ಇಂತಹ ವಿವಾಹ ಪದ್ಧತಿ ನಡೆದುಕೊಂಡು ಬಂದಿದೆ. ಪುಟ್ಟ ದೇಶವಾಗಿರುವುದರಿಂದ ಇಲ್ಲಿ ಜೀವನೋಪಾಯದ ಸಾಧನಗಳು ಕಡಿಮೆ. ಚೀನಾ ಯಾವಾಗಲೂ ಇಲ್ಲಿನ ನಾಗರಿಕರಿಗೆ ತೊಂದರೆ ಕೊಡುತ್ತಲೇ ಇರುತ್ತದೆ. ಟಿಬೆಟಿಯನ್ ಕುಟುಂಬದಲ್ಲಿ ಕನಿಷ್ಠ ಒಬ್ಬರಾದರೂ ಬೌದ್ಧ ಸನ್ಯಾಸಿಯಾಗಲು ಇದೇ ಕಾರಣವೆಂದು ಹೇಳಲಾಗುತ್ತದೆ. ಟಿಬೆಟ್‌ನಲ್ಲಿ ಪಾಲಿಯಾಂಡ್ರಿ ವಿವಾಹ ರೂಢಿಯಲ್ಲಿದೆ. ಇಲ್ಲಿ ಸಹೋದರರೆಲ್ಲ ಒಬ್ಬಳನ್ನೇ ಮದುವೆಯಾಗುವ ವಿಚಿತ್ರ ಸಂಪ್ರದಾಯವಿದೆ.

ಮದುವೆಯ ಸಮಯದಲ್ಲಿ ಹಿರಿಯಣ್ಣ ಎಲ್ಲಾ ಶಾಸ್ತ್ರಗಳನ್ನು ಮಾಡುತ್ತಾನೆ. ಆದರೆ ಆಕೆ ಅಷ್ಟೂ ಸಹೋದರರ ಪತ್ನಿಯಾಗಿರುತ್ತಾಳೆ. ಆದರೆ ಮದುವೆಯ ನಂತರ ಆಕೆ ಯಾರೊಂದಿಗೆ ಸಂಸಾರ ಮಾಡುತ್ತಾಳೆ ಎಂಬುದು ಬಹಿರಂಗವಾಗಿಲ್ಲ. ಆದ್ದರಿಂದಲೇ ಎಲ್ಲಾ ಸಹೋದರರು ತಮ್ಮ ಹೆಂಡತಿಯ ಮಗುವನ್ನು ತಮ್ಮದೇ ಮಗು ಎಂದು ಪರಿಗಣಿಸುತ್ತಾರೆ. ಎಲ್ಲಾ ಸಹೋದರರು ಮಗುವಿನ ಪೋಷಣೆಗೆ ಕೊಡುಗೆ ನೀಡುತ್ತಾರೆ. ಮದುವೆಯ ನಂತರ ಹಿರಿಯಣ್ಣ ಹೆಂಡತಿಯೊಂದಿಗೆ ಕೆಲವು ದಿನಗಳವರೆಗೆ ಇರುತ್ತಾನೆ.

ನಂತರ ಹೆಂಡತಿಯೊಂದಿಗೆ ಕೋಣೆಯಲ್ಲಿ ಯಾರು ಉಳಿಯಬೇಕು ಎಂಬುದನ್ನು ನಿರ್ಧರಿಸಲು ಕ್ಯಾಪ್‌ ಒಂದನ್ನು ಬಾಗಿಲಿಗೆ ನೇತು ಹಾಕಲಾಗುತ್ತದೆ. ಆ ಕ್ಯಾಪ್ ತೆಗೆಯುವವರೆಗೂ ಇತರ ಸಹೋದರರು ಕೋಣೆಗೆ ಪ್ರವೇಶಿಸುವುದಿಲ್ಲ. ಆದರೆ ಈಗ ಟಿಬೆಟ್‌ನಲ್ಲಿ ಇಂತಹ ವಿವಾಹ ಬಹಳ ಅಪರೂಪವಾಗಿದೆ. ಈ ವಿಚಿತ್ರ ರೀತಿಯ ಮದುವೆ ನಡೆದರೂ ಅದನ್ನು ಮುಚ್ಚಿಡುತ್ತಾರೆ, ಅದರ ಬಗ್ಗೆ ಚರ್ಚಿಸುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read