ಏಲಕ್ಕಿ ಸವಿದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಪರಿಮಳವನ್ನು ಹೊಂದಿರುವ ಮಸಾಲೆ ಪದಾರ್ಥ ಏಲಕ್ಕಿ. ಇದು ಭಾರತದಲ್ಲಿ ಹುಟ್ಟಿದರೂ ಇಂದು ವಿಶ್ವಾದ್ಯಂತ ಲಭ್ಯವಿದೆ. ಸಿಹಿ ಮತ್ತು ಖಾರದ ಪಾಕಗಳಲ್ಲೂ ಇದನ್ನು ಬಳಸಲಾಗುತ್ತದೆ.

ಏಲಕ್ಕಿಯ ಬೀಜಗಳು ಮತ್ತು ತೈಲ ಔಷಧೀಯ ಗುಣಗಳನ್ನು ಹೊಂದಿವೆ. ಶತಶತಮಾನಗಳಿಂದಲೂ ಇದನ್ನು ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸಲಾಗುತ್ತಿದೆ.

ಏಲಕ್ಕಿಯಲ್ಲಿರುವ ಮೂತ್ರ ವರ್ಧಕ ಗುಣ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದರಲ್ಲಿರುವ ಕೆಲವು ನಿರ್ದಿಷ್ಟ ಲಕ್ಷಣಗಳು ಕ್ಯಾನ್ಸರ್ ರಕ್ತಕಣಗಳನ್ನು ಹತೋಟಿಯಲ್ಲಿಡುತ್ತವೆ. ಏಲಕ್ಕಿಯಲ್ಲಿನ ಉತ್ಕರ್ಷಣ ನಿರೋಧಕ ಶಕ್ತಿ ದೇಹದಲ್ಲಿನ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.

1. ನಿಂಬೆಹಣ್ಣಿನ ಪಾನಕಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಕುಡಿದರೆ ವಾಂತಿ ಮತ್ತು ತಲೆ ಸುತ್ತುವಿಕೆ ಕಮ್ಮಿಯಾಗುತ್ತದೆ.

2. ಚಾ ಕಾಯಿಸುವಾಗ ಏಲಕ್ಕಿ ಪುಡಿ ಹಾಕಿ ಕುಡಿಯುವುದರಿಂದ ಆಮಶಂಕೆ ಉರಿಮೂತ್ರ ಗುಣವಾಗುವುದು.

3. ಏಲಕ್ಕಿಯನ್ನು ಜೀರಿಗೆ ಕಷಾಯದಲ್ಲಿ ಬೆರೆಸುವುದುರಿಂದ ಸಂಕಟ ನಿವಾರಣೆಯಾಗುತ್ತದೆ.

4. ಹಾಲಿಗೆ ಏಲಕ್ಕಿ ಪುಡಿ ಹಾಕಿ ಕುದಿಸಿ ಅದಕ್ಕೆ ಜೇನುತುಪ್ಪ ಬೆರೆಸಿ ಪ್ರತಿ ರಾತ್ರಿ ಸೇವಿಸುತ್ತಾ ಬಂದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read