ಎಚ್ಚರ…..! ‘ಧೂಮಪಾನ’ ದಿಂದ ಶ್ವಾಸಕೋಶಕ್ಕೆ ಮಾತ್ರವಲ್ಲ ಮೆದುಳಿಗೂ ಆಗುತ್ತೆ ಹಾನಿ

ಧೂಮಪಾನವು ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇದು ಕ್ಯಾನ್ಸರ್, ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳಿಗೆ  ಕಾರಣವಾಗಬಹುದು. ಇದರ ಅರಿವಿದ್ದರೂ ಕೆಲವರು ಧೂಮಪಾನದ ಚಟಕ್ಕೆ ಬೀಳುತ್ತಾರೆ. ಎಷ್ಟೇ ಪ್ರಯತ್ನಪಟ್ಟರೂ ಆ ಅಭ್ಯಾಸವನ್ನು ಬಿಡಲು ಅವರಿಗೆ ಸಾಧ್ಯವಾಗುವುದಿಲ್ಲ. ಧೂಮಪಾನದಿಂದ ಶ್ವಾಸಕೋಶದ ಕಾಯಿಲೆಗಳಿಗೆ ತುತ್ತಾಗುತ್ತಾರೆ ಅನ್ನೋದು ಎಲ್ಲರಿಗೂ ತಿಳಿದಿದೆ.

ಆದರೆ ಈ ಅಭ್ಯಾಸವು ನಮ್ಮ ಮೆದುಳಿಗೆ ಸಹ ಹಾನಿ ಮಾಡುತ್ತದೆ. ಅಧ್ಯಯನವೊಂದರಲ್ಲಿ ಈ ವಿಷಯ ಬಹಿರಂಗವಾಗಿದೆ. ಪ್ರತಿನಿತ್ಯ ಧೂಮಪಾನ ಮಾಡುವುದರಿಂದ ಮೆದುಳಿನ ಗಾತ್ರವೂ ಕಡಿಮೆಯಾಗಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.ಸಂಶೋಧನೆಯ ಪ್ರಕಾರ ಪ್ರತಿದಿನ ಧೂಮಪಾನ ಮಾಡುವವರ ಮೆದುಳು ಧೂಮಪಾನ ಮಾಡದವರಿಗಿಂತ 0.4 ಘನ ಇಂಚುಗಳಷ್ಟು ಚಿಕ್ಕದಾಗಿರುತ್ತದೆ.

ಈ ಸಂಶೋಧನೆಗಾಗಿ, ವಿಜ್ಞಾನಿಗಳು ಯುಕೆ ಬಯೋಬ್ಯಾಂಕ್‌ನವರ ಮೆದುಳಿನ ಸ್ಕ್ಯಾನ್ ಮಾಡಿದ್ದಾರೆ. ಇದರೊಂದಿಗೆ ಧೂಮಪಾನದ ಅಭ್ಯಾಸವನ್ನು ಸಹ ವಿಶ್ಲೇಷಿಸಲಾಗಿದೆ. ಎರಡನೇ ಹಂತದಲ್ಲಿ ಅವರ MRI ಅನ್ನು ಸಹ ಮಾಡಲಾಯಿತು. ಇದರಲ್ಲಿ ಧೂಮಪಾನ ಮಾಡದವರ ಮೆದುಳಿನ ಗಾತ್ರ ಧೂಮಪಾನಿಗಳ ಮೆದುಳಿಗಿಂತ ದೊಡ್ಡದಾಗಿರುವುದು ಪತ್ತೆಯಾಗಿದೆ. ಧೂಮಪಾನದಿಂದ ಮೆದುಳು ಕುಗ್ಗುತ್ತದೆ ಅನ್ನೋದು ದೃಢಪಟ್ಟಿದೆ.

ಮೆದುಳಿನ ಕುಗ್ಗುವಿಕೆ ಎಂದರೇನು ?

ಸೆರೆಬ್ರಲ್ ಕ್ಷೀಣತೆ ಎಂದರೆ ಮೆದುಳಿನ ಕುಗ್ಗುವಿಕೆ. ಇದು ವಯಸ್ಸಿನೊಂದಿಗೆ ಸಂಭವಿಸುತ್ತದೆ. ಇದರ ಲಕ್ಷಣಗಳು-

1. ಸ್ನಾಯು ಹಾನಿ

2. ಮಂದ ದೃಷ್ಟಿ

3. ದಿಗ್ಭ್ರಮೆ

4. ಸಮನ್ವಯದ ಕೊರತೆ

5. ಸ್ನಾಯು ದೌರ್ಬಲ್ಯ

6. ಆಲ್ಝೈಮರ್‌ ಕಾಯಿಲೆ

ಧೂಮಪಾನವನ್ನು ತೊರೆಯುವುದು ಹೇಗೆ ?

1. ನಿಕೋಟಿನ್ ಪ್ಯಾಚ್‌ಗಳನ್ನು ಬಳಸಿ.

2. ಧೂಮಪಾನ ತ್ಯಜಿಸಲು ಇರುವ ಕಾರಣಗಳನ್ನು ಪಟ್ಟಿ ಮಾಡಿಕೊಳ್ಳಿ.

3. ವ್ಯಾಯಾಮ ಮಾಡಿ.

4. ಸಾಧ್ಯವಾದಷ್ಟು ಬ್ಯುಸಿಯಾಗಿರಲು ಪ್ರಯತ್ನಿಸಿ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read