ಎಚ್ಚರ….! ಕ್ರೆಡಿಟ್ ಕಾರ್ಡ್ ಬಿಲ್ ತುಂಬಲು ವಿಳಂಬವಾದರೆ ನಿಮ್ಮ ಜೇಬಿಗೆ ಬೀಳುತ್ತೆ ಕತ್ತರಿ

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಸಾಕಷ್ಟು ಹೆಚ್ಚಾಗಿದೆ. ಜನರು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪೇಮೆಂಟ್‌  ಸೌಲಭ್ಯವನ್ನು ಪಡೆಯುತ್ತಾರೆ. ಇದರಲ್ಲಿ ವಹಿವಾಟು ಕೂಡ ಬಹಳ ಸರಳ. ಕ್ರೆಡಿಟ್ ಕಾರ್ಡ್‌ಗಳಲ್ಲಿರುವ ನಿಗದಿತ ಮಿತಿಯಷ್ಟು ಮೊತ್ತವನ್ನು ಖರ್ಚು ಮಾಡಬಹುದು. ನಂತರ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿಸಬೇಕು. ಬಿಲ್ ಪಾವತಿಸಲು ಕಾಲಾವಕಾಶವಿರುತ್ತದೆ. ನಿಗದಿತ ಸಮಯದೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದಿದ್ದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಈ ದಂಡದಿಂದ ಪಾರಾಗಬೇಕೆಂದರೆ ಈ ಬಗ್ಗೆ ಎಲ್ಲಾ ಮಾಹಿತಿಗಳನ್ನೂ ತಿಳಿದುಕೊಂಡಿರಬೇಕು. ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು 20 ರಿಂದ 50 ದಿನಗಳ ಕಾಲಾವಕಾಶ ನೀಡುತ್ತವೆ. ಈ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಿದರೆ ದಂಡವನ್ನು ತಪ್ಪಿಸಬಹುದು. ಆದರೆ ಅವಧಿ ಮೀರಿದರೆ ಶುಲ್ಕ ವಿಧಿಸಲಾಗುತ್ತದೆ ಮತ್ತು ಬಡ್ಡಿಯೂ ಹೆಚ್ಚಾಗುತ್ತದೆ. ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಒದಗಿಸುವವರು ನಿಮ್ಮ ಬಾಕಿಯ ಮೇಲೆ ಪ್ರತಿ ತಿಂಗಳು ಬಡ್ಡಿ ದರವನ್ನು ಲೆಕ್ಕ ಹಾಕುತ್ತಾರೆ.

ಆದಾಗ್ಯೂ ಬಡ್ಡಿ ದರವನ್ನು ವಾರ್ಷಿಕ ಎಪಿಆರ್ (ವಾರ್ಷಿಕ ಶೇಕಡಾವಾರು ದರ) ರೂಪದಲ್ಲಿ ನಮೂದಿಸಲಾಗಿದೆ. ಇಲ್ಲಿ ದರವು 14 ಪ್ರತಿಶತದಿಂದ 40 ಪ್ರತಿಶತದಷ್ಟಿರಬಹುದು. ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ವಿಫಲವಾದಾಗ ಬಾಕಿ ಉಳಿದಿರುವ ಖಾತೆಯ ಬ್ಯಾಲೆನ್ಸ್‌ಗೆ ಬಡ್ಡಿ ಬರುತ್ತದೆ. ಈ ಬಡ್ಡಿಯನ್ನು ನಿಮ್ಮ ಬಾಕಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಪಾವತಿಯನ್ನು ಎಷ್ಟು ಸಮಯ ವಿಳಂಬಗೊಳಿಸುತ್ತೀರೋ ಅಷ್ಟು ಹೆಚ್ಚಿನ ಬಡ್ಡಿ ಅಥವಾ ವಿಳಂಬ  ಶುಲ್ಕ ಪಾವತಿಸಬೇಕಾಗುತ್ತದೆ. ಕನಿಷ್ಟ ಮೊತ್ತವನ್ನು ಪಾವತಿಸಿದರೂ ಸಹ ಬ್ಯಾಂಕ್ ನಿಮಗೆ ಬಡ್ಡಿಯನ್ನು ವಿಧಿಸುತ್ತದೆ. ಬ್ಯಾಂಕ್‌ಗಳು ಬಾಕಿ ಇರುವ ಖಾತೆಗೆ ಪ್ರತಿದಿನ ಬಡ್ಡಿಯನ್ನು ಲೆಕ್ಕ ಹಾಕುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read