ಉದ್ಯೋಗ ವಾರ್ತೆ : ಆಕಾಶವಾಣಿಯಲ್ಲಿ ‘ಅರೆಕಾಲಿಕ ವರದಿಗಾರ’ರ ಹುದ್ದೆಗಳಿಗೆ ಅರ್ಜಿ ಅಹ್ವಾನ

ಆಕಾಶವಾಣಿ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು ಚಿತ್ರದುರ್ಗ ಮತ್ತು ಚಾಮರಾಜನಗರ ಜಿಲ್ಲೆಗಳ ಅರೆಕಾಲಿಕ ವರದಿಗಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ಪತ್ರಿಕೋದ್ಯಮ, ಸಮೂಹ ಮಾಧ್ಯಮದಲ್ಲಿ ಪದವಿ ಅಥವಾ ಯಾವುದೇ ಪದವಿಯೊಂದಿಗೆ ಮಾಧ್ಯಮದಲ್ಲಿ ಎರಡು ವರ್ಷಗಳ ಅನುಭವ, ಅರ್ಜಿ ಸಲ್ಲಿಸುವ ಕೊನೆಯ ದಿನಕ್ಕೆ ವಯೋಮಿತಿ 24 ರಿಂದ 50 ವರ್ಷದೊಳಗಿರಬೇಕು. ಅರ್ಜಿದಾರರು ಅರ್ಜಿ ಸಲ್ಲಿಸುವ ಜಿಲ್ಲೆಯ ಜಿಲ್ಲಾ ಕೇಂದ್ರದ ನಿವಾಸಿಯಾಗಿರಬೇಕು ಅಥವಾ ಕೇಂದ್ರದಿಂದ 10 ಕಿ.ಮೀ ಒಳಗಿನ ನಿವಾಸಿಯಾಗಿರಬೇಕು. ಕಂಪ್ಯೂಟರ್ ಮತ್ತು ವರ್ಡ್ ಪ್ರಾಸೆಸಿಂಗ್‍ನಲ್ಲಿ ಜ್ಞಾನ ಹೊಂದಿರಬೇಕು. ಸುದ್ದಿ ಸಂಗ್ರಹಕ್ಕೆ ಬೇಕಾದ ಉಪಕರಣಗಳನ್ನು ಹೊಂದಿರಬೇಕು. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಪೂರ್ಣ ವಿವರಗಳು, ಅಗತ್ಯ ದಾಖಲಾತಿಗಳ ಪ್ರತಿಗಳು ಒಳಗೊಂಡ ಅರ್ಜಿಗಳನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಅಥವಾ ಖುದ್ದಾಗಿ ಜುಲೈ 31 ರೊಳಗಾಗಿ ತಲುಪುವಂತೆ The Deputy Director General (E), (Attn: Regional News Unit) Akshvani, Raj Bhavan Road, Bengaluru 560001, ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ 080-22356344 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read