‘ಉದ್ಯೋಗ’ ಬಯಸುವವರು ಅನುಸರಿಸಿ ಈ ಉಪಾಯ

ಕೆಲವೊಂದು ಕೆಲಸವನ್ನು ನಿತ್ಯವೂ ಮಾಡುತ್ತ ಬಂದಲ್ಲಿ ಉದ್ಯೋಗ ಸಿಗುವ ಜೊತೆಗೆ ಯಶಸ್ಸು ನಿಮ್ಮದಾಗುತ್ತದೆ.

ಶಾಸ್ತ್ರಗಳ ಪ್ರಕಾರ ಪ್ರತಿದಿನ ಶಿವಲಿಂಗಕ್ಕೆ ನೀರು ಹಾಗೂ ಅಕ್ಷತೆಯನ್ನು ಅರ್ಪಿಸಬೇಕು. ಶಿವಲಿಂಗಕ್ಕೆ ಹಾಕಿದ ಅಕ್ಷತೆ ಕೆಳಗೆ ಬೀಳದಂತೆ ನೋಡಿಕೊಳ್ಳಿ. ಆದ್ರೆ ಎಂದೂ ಕಡಿಯಾದ ಅಕ್ಷತೆಯನ್ನು ಶಿವಲಿಂಗಕ್ಕೆ ಅರ್ಪಿಸಬೇಡಿ.

ಸಂದರ್ಶನಕ್ಕೆ ಹೋಗುವ ಮೊದಲು ಆಕಳಿಗೆ ಗೋಧಿ ಹಿಟ್ಟು ಹಾಗೂ ಕಾಕಂಬಿಯನ್ನು ಅರ್ಪಿಸಿ. ಹಾಗೆ ಸಂದರ್ಶನಕ್ಕೆ ಹೋಗುವ ಮೊದಲು ಹನುಮಾನ್ ಚಾಲೀಸ್ ಓದಿ ಮನೆ ಬಿಡುವುದರಿಂದ ಒಳ್ಳೆಯದಾಗುತ್ತದೆ.

ಜೀವನದಲ್ಲಿ ಸಫಲತೆ ಕಾಣಲು ಹಾರುತ್ತಿರುವ ಭಜರಂಗಬಲಿಯ ಫೋಟೋವನ್ನು ಮನೆಯಲ್ಲಿಟ್ಟು ಪೂಜೆ ಮಾಡಿ.

ಗಣೇಶ ಚತುರ್ಥಿಯಂದು ಬಲಮುರಿ ಗಣೇಶನ ಫೋಟೋವನ್ನು ತಂದು ಪೂಜೆ ಮಾಡಿ.

ಒಳ್ಳೆ ಕೆಲಸಕ್ಕೆ ಹೋಗುವ ಮೊದಲು ಲವಂಗ ಹಾಗೂ ಅಡಿಕೆಯನ್ನು ತೆಗೆದುಕೊಂಡು ಹೋಗಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read