ಉದ್ಯೋಗದಲ್ಲಿ ಸಮಸ್ಯೆ ಕಾಡಿದ್ರೆ ನಿವಾರಣೆಗಾಗಿ ಅನುಸರಿಸಿ ಈ ʼಉಪಾಯʼ

ಇತ್ತೀಚಿನ ದಿನಗಳಲ್ಲಿ ಉದ್ಯೋಗ ಸಮಸ್ಯೆ ಕಾಡೋದು ಸಾಮಾನ್ಯ. ಎಷ್ಟು ಕಷ್ಟಪಟ್ಟರೂ ಯಶಸ್ಸು ಲಭಿಸೋದಿಲ್ಲ. ಕೆಲಸದ ಜೊತೆ ಅದೃಷ್ಟ ಜೊತೆಗಿದ್ರೆ ಒಳ್ಳೆಯದಾಗುತ್ತದೆ. ಇದಕ್ಕೆ ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ.

ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಬಯಸುವವರು ಸೋಮವಾರ ಬೆಳ್ಳಿ ಉಂಗುರ ಅಥವಾ ಬೆಳ್ಳಿ ಆಭರಣವನ್ನು ಧರಿಸಬೇಕು.

ಪ್ರತಿ ದಿನ ಶಿವನಿಗೆ ಜಲವನ್ನು ಅರ್ಪಿಸಬೇಕು. ಬಡ ವ್ಯಕ್ತಿಗೆ ಕಪ್ಪು ಬಟ್ಟೆಯನ್ನು ದಾನ ಮಾಡಿ. ಈ ಎಲ್ಲ ಕೆಲಸವನ್ನು 9 ದಿನಗಳ ಕಾಲ ಮಾಡಿ. ಸೋಮವಾರದಿಂದ ಕೆಲಸ ಶುರು ಮಾಡಿ.

ಎಂಜಿನಿಯರಿಂಗ್ ಸೇರಿದಂತೆ ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಬಯಸುವವರು ಶನಿವಾರ ಎಡಗೈನ ಮಧ್ಯದ ಬೆರಳಿಗೆ ಕಬ್ಬಿಣದ ಉಂಗುರವನ್ನು ಹಾಕಿಕೊಳ್ಳಿ.

ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ. ಓಂ ಶ ಶನಿಶರೈ ನಮಃ ಮಂತ್ರವನ್ನು ಜಪಿಸಿ. 108 ಬಾರಿ ಈ ಮಂತ್ರವನ್ನು ಜಪಿಸಿ. ಸುಮಾರು 9 ದಿನಗಳ ಕಾಲ ಈ ಕೆಲಸ ಮಾಡಬೇಕು.

ಪೊಲೀಸ್, ಆಡಳಿತ, ಸೈನ್ಯದ ಕೆಲಸ ಬಯಸುವವರು, ಎಡ ಕೈನ ಮಧ್ಯದ ಬೆರಳಿಗೆ ತಾಮ್ರದ ಉಂಗುರವನ್ನು ಹಾಕಿಕೊಳ್ಳಿ. ಪ್ರತಿ ದಿನ ಬೆಳಿಗ್ಗೆ ಹನುಮಂತನಿಗೆ ಕೆಂಪು ಹೂವನ್ನು ಅರ್ಪಿಸಿ. ನಂತ್ರ 9 ಬಾರಿ ಹನುಮಾನ್ ಚಾಲೀಸ್ ಓದಿ.

ಬ್ಯಾಂಕ್, ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವವರು ಪ್ರತಿ ದಿನ ಗಣೇಶನಿಗೆ ಲಡ್ಡು ಅರ್ಪಿಸಿ. ನಂತ್ರ ಒಂದು ಲಡ್ಡನ್ನು ನೀವು ತಿಂದು ಉಳಿದ ಎರಡು ಲಾಡನ್ನು ಜನರಿಗೆ ಹಂಚಿ. ಬುಧವಾರದಿಂದ ಸತತ 9 ದಿನಗಳವರೆಗೆ ಈ ಉಪಾಯ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read