ಉತ್ತರಾಖಂಡದ ಗೌರಿಕುಂಡವೆಂಬ ಪವಿತ್ರ ಕ್ಷೇತ್ರ

ಭಾರತದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳು ಧಾರ್ಮಿಕತೆಯನ್ನು ಸಾರುವುದರ ಜತೆಗೆ ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಅಂತಹ ಪವಿತ್ರ ತಾಣಗಳಲ್ಲಿ ಉತ್ತರಾಖಂಡದ ಗೌರಿಕುಂಡವೂ ಅತ್ಯಂತ ಪ್ರಮುಖವಾಗಿದೆ.

ಏನಿದರ ಇತಿಹಾಸ..?
ಸಮುದ್ರ ಮಟ್ಟದಿಂದ 6000 ಅಡಿಗಳ ಎತ್ತರದಲ್ಲಿರುವ ಗೌರಿ ಕುಂಡವು ಗೌರಿ ಅಥವಾ ಪಾರ್ವತಿಗೆ ಸಂಬಂಧಿಸಿದ ಕ್ಷೇತ್ರವಾಗಿದ್ದು, ಪಾರ್ವತಿಯು ಶಿವನನ್ನು ಒಲಿಸಿಕೊಳ್ಳಲು ಈ ಸ್ಥಳದಲ್ಲಿ ಅತಿ ಕಠಿಣ ತಪಸ್ಸನ್ನು ಆಚರಿಸಿದಳು ಎಂಬ ನಂಬಿಕೆ ಇದೆ. ಅಲ್ಲದೇ ತನ್ನ ಸೇವೆಯ ಮೂಲಕ ಶಿವನನ್ನು ಒಲಿಸಿ ಆ ಮುಕ್ಕಣ್ಣನನ್ನೇ ಗೌರಿ ಕುಂಡಕ್ಕೆ ಸಮೀಪದ ತ್ರಿಯುಗಿ ನಾರಾಯಣ ಕ್ಷೇತ್ರದಲ್ಲಿ ಪಾರ್ವತಿ ವಿವಾಹವಾದಳು ಎಂಬುದು ಪುರಾಣಗಳಿಂದ ತಿಳಿದು ಬರುತ್ತದೆ.

ಗಣಪತಿಯ ಉದ್ಭವ ಇಲ್ಲೇ !
ವಿಶೇಷವೆಂದರೆ ಗೌರಿ ಕುಂಡವು ಗಣಪತಿಯ ಕಥೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದು, ಇಂದು ಹಿಂದೂ ಧರ್ಮದ ಆರಾಧ್ಯ ನಾಯಕನಾದ ಮಹಾ ಗಣಪತಿಯ ಉದ್ಭವ ಇಲ್ಲೇ ಆಗಿದೆ ಎನ್ನುತ್ತದೆ ಇತಿಹಾಸ. ತನ್ನ ಮೈ ಕೊಳೆಯಿಂದ ಗಣಪತಿಯನ್ನು ಸೃಷ್ಟಿಸಿ ಗೌರಿ ಸ್ನಾನಕ್ಕೆ ತೆರಳಿದ್ದು ಇಲ್ಲಿಯೇ. ಇದೇ ಕಾರಣಕ್ಕೆ ಗೌರಿ ಕುಂಡ ಎಂದು ಇಂದಿಗೂ ಖ್ಯಾತವಾಗಿದೆ.

ಪ್ರಯಾಣ ಹೀಗೆ..?
ಭಾರತದ ಉತ್ತರಾಖಂಡ ರಾಜ್ಯದಲ್ಲಿ ರುದ್ರ ಪ್ರಯಾಗ ಜಿಲ್ಲೆಯಲ್ಲಿರುವ ಗೌರಿ ಕುಂಡವು ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು ಕೇದಾರನಾಥಕ್ಕೆ ಸಾಗುವ ದಾರಿಯಲ್ಲಿ ಸಾಗಿದರೆ ಗೌರಿ ಕುಂಡದ ದರ್ಶನವಾಗುತ್ತದೆ. ಇಲ್ಲಿಯವರೆಗೆ ಮಾತ್ರ ಪಕ್ಕಾ ರಸ್ತೆಯಿದ್ದು ಇಲ್ಲಿಂದ ಮುಂದೆ ಕೇದಾರನಾಥವನ್ನು ತಲುಪಲು 14 ಕಿ.ಮೀ. ಗಳಷ್ಟು ಕಾಲುದಾರಿಯಲ್ಲಿ ಪರ್ವತವನ್ನು ಏರುವುದು ಅನಿವಾರ್ಯ. ಒಟ್ಟಿನಲ್ಲಿ ಸದಾ ಚಳಿಯಿರುವ ಈ ಪ್ರದೇಶಕ್ಕೆ ಅದಕ್ಕೆ ಪೂರಕ ವ್ಯವಸ್ಥೆ ಮಾಡಿಕೊಂಡು ಹೊರಡುವುದು ಸೂಕ್ತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read