ಉತ್ತಮ ಆರೋಗ್ಯಕ್ಕಾಗಿ ಮಳೆಗಾಲದಲ್ಲಿ ಈ ʼಆಹಾರʼಗಳಿಂದ ದೂರವಿರಿ

ಮಳೆಗಾಲದಲ್ಲಿ ತಿನ್ನುವ ಆಹಾರದ ಬಗ್ಗೆ ಎಚ್ಚರವಹಿಸಬೇಕು. ಬಾಯಿ ರುಚಿಗೆ ತಿನ್ನಲು ಹೋದರೆ ಕಾಯಿಲೆ ಬೀಳ ಬೇಕಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನದಿರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಮಳೆಗಾಲದಲ್ಲಿ ತಿನ್ನಬಾರದ ಆಹಾರಗಳು ಯಾವುವು ಅನ್ನುವ ಮಾಹಿತಿ ಇಲ್ಲಿದೆ ನೋಡಿ.

ಚಾಟ್‌
ಚಾಟ್‌, ಗೋಲ್‌ ಗಪ್ಪಾ, ಬೇಲ್‌ ಪುರಿ, ದಹಿ ಪುರಿ ಇವುಗಳನ್ನು ಮಳೆಗಾಲದಲ್ಲಿ ತಿನ್ನಬೇಡಿ. ತಳ್ಳುಗಾಡಿಯಲ್ಲಿ ಸಿಗುವ ಈ ಚಾಟ್ಸ್ ಅಂತೂ ಮುಟ್ಟಲೇಬೇಡಿ. ಕಲ್ಮಶ ನೀರು ಕೂಡ ಮಿಕ್ಸ್ ಆಗುವ ಸಾಧ್ಯತೆ ಇದೆ. ಇವುಗಳನ್ನು ತಿನ್ನುವುದರಿಂದ ಹೊಟ್ಟೆ ನೋವು ಬರುವುದು ಖಂಡಿತ.

ಸಮುದ್ರ ಆಹಾರಗಳು ಹಾಗೂ ಹೊಳೆ ಮೀನು

ಈ ಸಮಯದಲ್ಲಿ ಮೀನುಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುವುದರಿಂದ ಮೀನಿನ ಆಹಾರಗಳನ್ನು ತಿನ್ನಬೇಡಿ. ಆಹಾರವನ್ನು ಹಸಿಯಾಗಿ ತಿನ್ನಬೇಡಿ
ಮಳೆಗಾಲದಲ್ಲಿ ಹಸಿ ತರಕಾರಿ ತಿನ್ನುವ ಬದಲು ಬೇಯಿಸಿ ತಿನ್ನುವುದು ಒಳ್ಳೆಯದು. ಕೆಲವೊಮ್ಮೆ ಹಸಿ ತರಕಾರಿ ತಿಂದಾಗ ಹೊಟ್ಟೆ ನೋವು ಬರಬಹುದು.

ಮಶ್ರೂಮ್

ಮಳೆಗಾಲದಲ್ಲಿ ಅಣಬೆಗಳ ಮೇಲೆ ಬೇಗನೆ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವುದರಿಂದ ಇದನ್ನು ತಿಂದಾಗ ಆರೋಗ್ಯ ಸಮಸ್ಯೆ ಬರಬಹುದು.

ಮಾವಿನ ಹಣ್ಣು

ಮಾವಿನ ಹಣ್ಣು ಸೇವನೆ ಮಳೆಗಾಲಕ್ಕೆ ಸೂಕ್ತವಲ್ಲ. ಇದನ್ನು ತಿನ್ನುವುದರಿಂದ ವಾತ, ಕಫ ಸಮಸ್ಯೆ ಬರಬಹುದು.

ಬೀದಿ ಬದಿಯಲ್ಲಿ ಸಿಗುವ ಜ್ಯೂಸ್‌

ಈ ಜ್ಯೂಸ್‌ಗೆ ಬಳಸುವ ನೀರು ಎಷ್ಟು ಶುದ್ಧವಾಗಿರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಬೀದಿ ಬದಿಯ ಜ್ಯೂಸ್ ಕುಡಿಯಲು ಹೋಗಬೇಡಿ.

ಕರಿದ ಪದಾರ್ಥಗಳು

ಕಚೋರಿ, ಸಮೋಸ, ಜಿಲೇಬಿ ಈ ರೀತಿ ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಿ. ಇವುಗಳನ್ನು ತಿನ್ನುವುದರಿಂದ ಹೊಟ್ಟೆ ನೋವಿನ ಸಮಸ್ಯೆ ಬರಬಹುದು.

ಮೊಸರು

ಅಸ್ತಮಾ, ಸೈನಸ್‌ ಸಮಸ್ಯೆ ಇರುವವರು ಮಳೆಗಾಲದಲ್ಲಿ ಮೊಸರು ತಿನ್ನಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read