ಉಚಿತ ವಿದ್ಯುತ್‌ ಭರವಸೆಯಲ್ಲಿದ್ದವರಿಗೆ ಬಿಗ್‌ ಶಾಕ್‌; ದಿಢೀರ್ ವಿದ್ಯುತ್‌ ದರ ಏರಿಕೆ ಮಾಡಿದ ಸಿದ್ದರಾಮಯ್ಯ ಸರ್ಕಾರ

ನೂತನವಾಗಿ ಅಧಿಕಾರಕ್ಕೆ ಬಂದಿರೋ ಸಿಎಂ ಸಿದ್ದರಾಮಯ್ಯ ನೇತೃತ್ವದ‌ ಕಾಂಗ್ರೆಸ್ ಸರ್ಕಾರ ಫ್ರೀಯಾಗಿ ಕರೆಂಟ್‌ ಕೊಡುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಕರ್ನಾಟಕದ ಜನತೆಗೆ ಆಘಾತವಾಗಿದೆ. 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವವರಿಗೆಲ್ಲ ಉಚಿತವಾಗಿ ಕರೆಂಟ್‌ ಕೊಡುವುದಾಗಿ ನೂತನ ಸರ್ಕಾರ ಭರವಸೆ ನೀಡಿತ್ತು.

ಆದ್ರೀಗ ವಿದ್ಯುತ್‌ ದರವನ್ನು ದಿಢೀರನೆ ಏರಿಕೆ ಮಾಡಿದೆ. ಪ್ರತಿ ಯೂನಿಟ್‌ಗೆ 2 ರೂಪಾಯಿ 89 ಪೈಸೆಯಷ್ಟು ವಿದ್ಯುತ್‌ ದರವನ್ನು ಏರಿಕೆ ಮಾಡಲಾಗಿದೆ. 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡುವವರಿಗೆ ಈ ಮೂಲಕ ದರ ಏರಿಕೆಯ ಬರೆ ಎಳೆದಿದೆ ಸರ್ಕಾರ.

ಜೂನ್‌ನಿಂದಲೇ ಪರಿಷ್ಕೃತ ದರ ಜಾರಿಗೆ ಬರುವಂತೆ ಹೆಚ್ಚಳ ಮಾಡಲಾಗಿದೆ. ಇಂಧನ ಹಾಗೂ ವಿದ್ಯುತ್‌ ಖರೀದಿ ವೆಚ್ಚವನ್ನ ಈ ಮೂಲಕ ಜನರಿಂದಲೇ ವಸೂಲಿ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆ ಮಾಡುವವರು ಬಿಲ್‌ ಕಟ್ಟಬೇಕಾಗಿಲ್ಲ ಎಂದು ಸರ್ಕಾರ ಈಗಾಗ್ಲೇ ಹೇಳಿದೆ. ಆದರೆ ಇದರಲ್ಲೂ ಸಾಕಷ್ಟು ಗೊಂದಲಗಳಿದ್ದು, ಅದರ ಬೆನ್ನಲ್ಲೇ ವಿದ್ಯುತ್‌ ದರವನ್ನು ಏರಿಕೆ ಮಾಡಿರೋದು ಸಾರ್ವಜನಿಕರಿಗೆ ನಿರಾಸೆ ಉಂಟು ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read