ಈ 4 ತರಕಾರಿಗಳನ್ನು ಅಪ್ಪಿತಪ್ಪಿಯೂ ಕಬ್ಬಿಣದ ಬಾಣಲೆಯಲ್ಲಿ ಬೇಯಿಸಬೇಡಿ, ಆರೋಗ್ಯದ ಮೇಲಾಗುತ್ತೆ ಗಂಭೀರ ಪರಿಣಾಮ…..!

ಕಬ್ಬಿಣದ ಬಾಣೆಲೆಗಳ ಬಳಕೆ ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯ. ಕಬ್ಬಿಣದ ಬಾಣೆಲೆಗಳಲ್ಲಿ ಮಾಡಿದ ತಿನಿಸುಗಳು ಬಹಳ ರುಚಿಯಾಗಿರುತ್ತವೆ, ಜೊತೆಗೆ ಇದು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಕಬ್ಬಿಣದ ಬಾಣಲೆಯಲ್ಲಿ ಬೇಯಿಸಿದ ಆಹಾರವು ರಕ್ತಹೀನತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ ಕಬ್ಬಿಣವನ್ನು ಪೂರೈಸುತ್ತದೆ. ಆದರೆ ಕೆಲವೊಂದು ಪದಾರ್ಥಗಳನ್ನು ಅಪ್ಪಿತಪ್ಪಿಯೂ ಕಬ್ಬಿಣದ ಬಾಣಲೆಯಲ್ಲಿ ಬೇಯಿಸಬಾರದು. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಟೊಮೆಟೊ

ಟೊಮೆಟೋದಲ್ಲಿ ಸಿಟ್ರಿಕ್‌ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಕಬ್ಬಿಣದ ಪ್ಯಾನ್‌ನಲ್ಲಿ ಟೊಮೆಟೊಗಳನ್ನು ಬೇಯಿಸಿದಾಗ ಅದರಲ್ಲಿರುವ ಆಮ್ಲವು ಕಬ್ಬಿಣದೊಂದಿಗೆ ಪ್ರತಿಕ್ರಿಯಿಸಬಹುದು. ಇದರಿಂದ ತಿನಿಸುಗಳು ಲೋಹೀಯ ರುಚಿಯನ್ನು ಪಡೆದುಕೊಳ್ಳುತ್ತವೆ. ಜೊತೆಗೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಬಹುದು. ಕಬ್ಬಿಣದ ಪ್ಯಾನ್‌ನಲ್ಲಿ ಟೊಮೆಟೊಗಳಂತಹ ಆಮ್ಲೀಯ ಆಹಾರವನ್ನು ಬೇಯಿಸುವುದರಿಂದ ಅದರಲ್ಲಿ ಹೆಚ್ಚುವರಿ ಕಬ್ಬಿಣವನ್ನು ಬಿಡುಗಡೆಯಾಗುತ್ತದೆ. ಇದು ನಮ್ಮ ದೇಹಕ್ಕೆ ಅತಿಯಾಗಿ ಕಬ್ಬಿಣ ಪೂರೈಸುತ್ತದೆ.

ಮೊಸರು

ಕಬ್ಬಿಣದ ಬಾಣಲೆಯಲ್ಲಿ ಮೊಸರು ಅಥವಾ ಇತರ ಡೈರಿ ಉತ್ಪನ್ನಗಳನ್ನು ಬೇಯಿಸುವುದು ಅಥವಾ ಬಿಸಿ ಮಾಡುವುದು ಒಳ್ಳೆಯದಲ್ಲ. ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ ಮತ್ತು ಈ ಕ್ಯಾಲ್ಸಿಯಂ ಕಬ್ಬಿಣದೊಂದಿಗೆ ಪ್ರತಿಕ್ರಿಯಿಸುತ್ತದೆ. ಇದು ಮೊಸರಿನ ರುಚಿಯನ್ನು ಹಾಳುಮಾಡುತ್ತದೆ, ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಮೊಸರನ್ನು ಯಾವಾಗಲೂ ನಾನ್-ಸ್ಟಿಕ್ ಅಥವಾ ಸ್ಟೀಲ್ ಪಾತ್ರೆಗಳಲ್ಲಿ ಬೇಯಿಸಬೇಕು.

ನಿಂಬೆಹಣ್ಣು

ನಿಂಬೆಯಲ್ಲಿ ಕೂಡ ಸಿಟ್ರಸ್ ಅಂಶ ಹೇರಳವಾಗಿರುತ್ತದೆ. ಇದನ್ನು ಕಬ್ಬಿಣದ ಪ್ಯಾನ್‌ನಲ್ಲಿ ಬಿಸಿ ಮಾಡಬಾರದು. ಅಷ್ಟೇ ಅಲ್ಲ ನಿಂಬೆಯ ತಿನಿಸುಗಳನ್ನು ಕಬ್ಬಿಣದ ಪಾತ್ರೆಗಳಲ್ಲಿ ತಯಾರಿಸಬಾರದು. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಕಬ್ಬಿಣದೊಂದಿಗೆ ಪ್ರತಿಕ್ರಿಯಿಸುತ್ತದೆ. ಇದರಿಂದ ಆಹಾರದಲ್ಲಿ ಲೋಹೀಯ ರುಚಿ ಬರಬಹುದು. ಅದರ ಬಣ್ಣವನ್ನು ಸಹ ಬದಲಾಗುತ್ತದೆ. ಈ ಪ್ರತಿಕ್ರಿಯೆಯು ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಸಹ ಕಡಿಮೆ ಮಾಡುತ್ತದೆ. ಆದ್ದರಿಂದ  ಯಾವಾಗಲೂ ಅಡುಗೆ ಸಂಪೂರ್ಣ ಸಿದ್ಧವಾದ ಬಳಿಕ ನಿಂಬೆ ರಸವನ್ನು ಸೇರಿಸಿ, ಸ್ಟೀಲ್ ಅಥವಾ ನಾನ್-ಸ್ಟಿಕ್ ಪಾತ್ರೆಗಳನ್ನು ಬಳಸುವುದು ಉತ್ತಮ.

ಪಾಲಕ್‌ ಸೊಪ್ಪು

ಪಾಲಕ್ ಸೊಪ್ಪನ್ನು ಕಬ್ಬಿಣದ ಬಾಣಲೆಯಲ್ಲಿ ಬೇಯಿಸಬಾರದು.  ಪಾಲಕ್‌ ಸೊಪ್ಪಿನಲ್ಲಿ ಆಕ್ಸಾಲಿಕ್ ಆಮ್ಲವಿರುತ್ತದೆ. ಇದು ಕಬ್ಬಿಣದೊಂದಿಗೆ ಪ್ರತಿಕ್ರಿಯಿಸುತ್ತದೆ. ಇದರಿಂದ ಪಾಲಕ್ ಸೊಪ್ಪಿನ ಬಣ್ಣ ಕೆಡುತ್ತದೆ ಮತ್ತು ಆ ತಿನಿಸು ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read