ಈ ಸುಗಂಧ ದ್ರವ್ಯವನ್ನು ಹೊಕ್ಕಳಿಗೆ ಪ್ರತಿ ದಿನ ಹಚ್ಚಿದ್ರೆ ಬದಲಾಗುತ್ತೆ ‘ಅದೃಷ್ಟ’

ಕೈ ತುಂಬಾ ಹಣ, ಮನೆ, ವಾಹನ ಸೇರಿದಂತೆ ಐಷಾರಾಮಿ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಕೆಲವರು ಕನಸು ನನಸು ಮಾಡಿಕೊಳ್ಳಲು ಯಶಸ್ವಿಯಾದ್ರೆ ಮತ್ತೆ ಕೆಲವರು ನಿರಾಶೆ ಅನುಭವಿಸುತ್ತಾರೆ. ಇದಕ್ಕೆ ಶ್ರಮದ ಜೊತೆ ಅದೃಷ್ಟ, ವಾಸ್ತು ದೋಷವೂ ಕಾರಣವಾಗುತ್ತದೆ. ಒಂದು ಸುಗಂದ ದ್ರವ್ಯ ನಿಮ್ಮ ಹಣೆ ಬರಹ ಬದಲಿಸಬಲ್ಲದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದ್ರ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ.

ಸುಗಂಧ ದ್ರವ್ಯದಲ್ಲಿ ಎಲ್ಲರ ಅಚ್ಚುಮೆಚ್ಚು ಶ್ರೀಗಂಧದ ದ್ರವ್ಯ. ಇದ್ರ ಸುವಾಸನೆ ಬೇರೆಯವರನ್ನು ಆಕರ್ಷಿಸುತ್ತದೆ. ಜೊತೆಗೆ ದೇಹದ ಒಂದು ಅಂಗಕ್ಕೆ ಇದನ್ನು ಹಚ್ಚಿಕೊಳ್ಳುವುದ್ರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬದಲಾಗುತ್ತದೆ. ಶ್ರೀಮಂತರಾಗಲು ನೀವು ಬಯಸಿದ್ದರೆ ಶ್ರೀಗಂಧ ದ್ರವ್ಯದ ಇದೊಂದು ಉಪಾಯವನ್ನು ಪಾಲಿಸಿ, ಬಹುಬೇಗ ಹಣ ಸಂಪಾದಿಸಿ.

ಬೆಳಿಗ್ಗೆ ಸ್ನಾನ ಮಾಡಿ, ಪೂಜೆ ಮುಗಿಸಿದ ಮೇಲೆ ನಿಮ್ಮ ಹೊಕ್ಕಳಿಗೆ ಶ್ರೀಗಂಧದ ದ್ರವ್ಯವನ್ನು ಹಚ್ಚಿಕೊಳ್ಳಿ. ಇದಕ್ಕೆ ಯಾವುದೇ ಬೆರಳನ್ನು ಬಳಸಬಹುದು. ಶ್ರೀಗಂಧದ ದ್ರವ್ಯದ ಬದಲು ಗುಲಾಬಿ ಸುವಾಸನೆಯ ದ್ರವ್ಯವನ್ನೂ ನೀವು ಬಳಸಬಹುದು. ಗುಲಾಬಿ ಲಕ್ಷ್ಮಿಗೆ ಪ್ರಿಯವಾಗಿದ್ದು, ಲಕ್ಷ್ಮಿ ಬೇಗ ಒಲಿಯುತ್ತಾಳೆಂಬ ನಂಬಿಕೆಯಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read