ಈ ಸಮಸ್ಯೆ ನಿವಾರಣೆಗೆ ಬಳಸಿ ಇದ್ದಿಲು

ಇದ್ದಿಲು ಇಂಗಾಲದ ಶುದ್ಧ ರೂಪ. ಕಪ್ಪಗಾಗಿ ಕಾಣುವ ಈ ಇದ್ದಿಲನ್ನು ಚರ್ಮದ ಆರೋಗ್ಯ ಕಾಪಾಡಲು ಬಳಸುತ್ತಾರೆ. ಇದು ಚರ್ಮದಲ್ಲಿರುವ ಕೊಳೆ ಅಂಶವನ್ನು ತೆಗೆದುಹಾಕುತ್ತದೆ. ಅಲ್ಲದೇ ಇದನ್ನು ಬಳಸಿ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅದು ಯಾವುದೆಂಬುದನ್ನು ತಿಳಿದುಕೊಳ್ಳೋಣ.

*ಇದ್ದಿಲಿನಿಂದ ಹಲ್ಲನ್ನು ಬಿಳುಪಾಗಿಸಬಹುದು. ಹಾಗಾಗಿ ಇದ್ದಿಲಿನ ಪುಡಿಯಿಂದ ಹಲ್ಲುಜ್ಜಿ. ಇದು ಹಲ್ಲಿನ ಹಳದಿ ಬಣ್ಣ ನಿವಾರಿಸುತ್ತದೆ.

*ಹೊಟ್ಟೆಯಲ್ಲಿ ಅನಿಲ ಸಮಸ್ಯೆ ಕಾಡುತ್ತಿದ್ದರೆ, ಇದ್ದಿಲನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ. ಇದರಿಂದ ಅನಿಲದ ಸಮಸ್ಯೆ ನಿವಾರಣೆಯಾಗುತ್ತದೆ.

*ಮೊಡವೆಗಳನ್ನು ನಿವಾರಿಸಲು ಇದ್ದಿಲಿಗೆ ತೆಂಗಿನೆಣ್ಣೆ ಬೆರೆಸಿ ಮೊಡವೆಗೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ. ಇದರಿಂದ ಮೊಡವೆಗಳು ನಿವಾರಣೆಯಾಗುತ್ತದೆ.

*ಸೊಳ್ಳೆ ಅಥವಾ ಜೇನುನೋಣ ಕಡಿತದಿಂದ ತುರಿಕೆ ಇದ್ದರೆ ಅದನ್ನು ನಿವಾರಿಸಲು ಇದ್ದಿಲಿನ ಪೇಸ್ಟ್ ನ್ನು ಹಚ್ಚಿ. ಇದರಿಂದ ವಿಷದ ಅಂಶ ಹೊರಹೋಗಿ ತುರಿಕೆ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read