ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡ್ರೆ ತಕ್ಷಣ ಆಸ್ಪತ್ರೆಗೆ ಹೋಗಿ

ವಯಸ್ಸು ಹೆಚ್ಚಾಗ್ತಿದ್ದಂತೆ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು, ತೊಂದರೆಗಳು ಸಾಮಾನ್ಯ. ಆದ್ರೆ ಅನೇಕ ಬಾರಿ ಸಣ್ಣ ಸಮಸ್ಯೆ ದೊಡ್ಡದಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು ಲಕ್ಷಣಗಳು ಕಂಡು ಬರ್ತಿದ್ದಂತೆ ತಕ್ಷಣ ವೈದ್ಯರ ಬಳಿ ತೋರಿಸುವುದು ಒಳ್ಳೆಯದು.

ಕ್ರೀಡೆ, ಕಠಿಣ ಅಭ್ಯಾಸದ ನಂತ್ರ ತಲೆ ಸುತ್ತುವುದು ಸಾಮಾನ್ಯ. ಆದ್ರೆ ಸಾಮಾನ್ಯ ತಾಪಮಾನದಲ್ಲಿ ಸಣ್ಣಪುಟ್ಟ ವ್ಯಾಯಾಮ ಮಾಡಿದ್ರೂ ತಲೆಸುತ್ತುತ್ತದೆ. ಆಗ ಎಚ್ಚರ ವಹಿಸಿ. ಇದು ಹೃದಯ ಸಮಸ್ಯೆಗೆ ಮುನ್ನುಡಿಯಾಗಬಹುದು. ಹಾಗೆ ಸೈನಸ್ ಹಾಗೂ ಕಿವಿ ನೋವಿನ ಸಮಸ್ಯೆಯಾಗಿರಬಹುದು.

ಅತಿಯಾಗಿ ತಿಂದ್ರೆ ಅತಿಸಾರ ಸಾಮಾನ್ಯ. ಆದ್ರೆ ಸಾಮಾನ್ಯ ಆಹಾರ ಸೇವನೆ ನಂತ್ರವೂ ಮಧ್ಯರಾತ್ರಿ ಮಲ ವಿಸರ್ಜನೆ ಸಮಸ್ಯೆ ನಿರಂತರ ಕಾಣ್ತಿದ್ದರೆ ಇದು ಸೋಂಕು ಅಥವಾ ಕರುಳಿನ ಉರಿಯೂತದಿಂದಾಗಿರಬಹುದು.

ಮುಟ್ಟಿನ ವೇಳೆ ಹೆಚ್ಚು ರಕ್ತಸ್ರಾವವಾದ್ರೆ ಎಚ್ಚರ. ಇದು ಫೈಬ್ರಾಯ್ಡ್ ಅಥವಾ ಗರ್ಭಾಶಯದ ಗಡ್ಡೆಯಿಂದ ಆಗಬಹುದು. ಗರ್ಭಾಶಯದ ಗಡ್ಡೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಯಾವುದೇ ಡಯಟ್ ಇಲ್ಲದೆ ನಿರಂತರವಾಗಿ ನಿಮ್ಮ ತೂಕ ಇಳಿಯುತ್ತಿದ್ದರೆ ಎಚ್ಚರ ವಹಿಸಿ. ಮೇದೋಜ್ಜೀರಕ ಗ್ರಂಥಿ, ಹೊಟ್ಟೆ, ಅನ್ನನಾಳ ಅಥವಾ ಶ್ವಾಸಕೋಶದ ಕ್ಯಾನ್ಸರ್ ಗೆ ಇದು ಕಾರಣವಾಗಬಹುದು.

ಇದ್ದಕ್ಕಿದ್ದಂತೆ ಕಣ್ಣುಗಳ ಶಕ್ತಿಯು ಯಾವುದೇ ನೋವು ಇಲ್ಲದೆ ಕಡಿಮೆಯಾಗಲು ಪ್ರಾರಂಭಿಸಿದರೆ, ಅದು ಪಾರ್ಶ್ವವಾಯು ಲಕ್ಷಣವಾಗಿರಬಹುದು. ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read