ಈ ರಾಶಿಯವರು ಇಂದು ಮುಟ್ಟಿದ್ದೆಲ್ಲ ಚಿನ್ನ

 

ಮೇಷ: ಅಂದುಕೊಂಡ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಬಹಳ ದಿನಗಳ ಬಳಿಕ ಪೋಷಕರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಸಂಗಾತಿಯು ಚಿಕ್ಕ ಚಿಕ್ಕ ವಿಷಯಕ್ಕೆ ನಿಮ್ಮ ಮೇಲೆ ಕಿರಿಕಿರಿ ಮಾಡಬಹುದು. ಭೂಮಿ ಖರೀದಿ ಮಾಡುವವರಿಗೆ ಇದು ಶುಭ ದಿನ.

ವೃಷಭ :  ಎಲ್ಲಾ ವಿಚಾರದಲ್ಲಿಯೂ ಋಣಾತ್ಮಕವಾಗಿ ಯೋಚನೆ ಮಾಡುವುದನ್ನು ಮೊದಲು ಬಿಟ್ಟುಬಿಡಿ. ಇದರಿಂದ ನಿಮ್ಮ ನೆಮ್ಮದಿಯೇ ಹಾಳಾಗಲಿದೆ. ಸಾರ್ವಜನಿಕ ಜೀವನದಲ್ಲಿ ನಿಮ್ಮ ಸಂವಹನ ಕೌಶಲ್ಯವು ಪ್ರಶಂಸೆಗೆ ಪಾತ್ರವಾಗಲಿದೆ.

ಮಿಥುನ : ಕಚೇರಿಗೆ ತೆರಳುವ ಮುನ್ನ ಎಲ್ಲಾ ದಾಖಲೆಗಳನ್ನು ನೂರು ಭಾರಿ ಪರಿಶೀಲನೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ಇಂದು ನೀವು ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಇಂದು ಯಾರಿಗೂ ಸಾಲ ನೀಡಬೇಡಿ. ಹಣ ಮರಳಿ ಸಿಗೋದಿಲ್ಲ.

ಕಟಕ :  ಉದ್ಯಮವನ್ನು ವಿಸ್ತರಿಸಬೇಕು ಎಂದುಕೊಂಡವರಿಗೆ ಇದು ಸಕಾಲವಾಗಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಲು ಅವಕಾಶ ಕೂಡಿ ಬರಲಿದೆ. ಸ್ತ್ರೀಯರಿಗೆ ಧನಲಾಭವಿದೆ. ಹಿತಶತ್ರುಗಳಿಂದ ಎಚ್ಚರಿಕೆ ಇರಲಿ.

ಸಿಂಹ :  ಆಸ್ತಿ ವಿಚಾರವಾಗಿ ನಿಮಗೆ ಹಾಗೂ ನಿಮ್ಮ ಸಹೋದರನಿಗೂ ಕಲಹ ಉಂಟಾಗಬಹುದು. ಇದರಿಂದ ಕುಟುಂಬದಲ್ಲಿ ಅಸಮಾಧಾನದ ವಾತಾವರಣ ನಿರ್ಮಾಣವಾಗಲಿದೆ. ಬಹಳ ದಿನಗಳಿಂದ ವೈವಾಹಿಕ ಸಂಬಂಧಕ್ಕೆ ಹುಡುಕಾಡುತ್ತಿರುವವರಿಗೆ ಇದು ಸಕಾಲವಾಗಿದೆ.

ಕನ್ಯಾ:  ಸ್ವಂತ ವ್ಯವಹಾರ ಆರಂಭಿಸಬೇಕು ಎಂದುಕೊಂಡವರಿಗೆ ಇದು ಶುಭ ದಿನವಾಗಿದೆ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ತಂದೆಯು ಪ್ರಮುಖ ಪಾತ್ರ ವಹಿಸಲಿದ್ದಾರೆ. ಕಲಾವಿದರಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ.

ತುಲಾ :  ಸಂದರ್ಶನ ನೀಡಿ ಉದ್ಯೋಗಕ್ಕಾಗಿ ಕಾಯುತ್ತಿರುವ ನೀವಿಂದು ಶುಭ ಸುದ್ದಿಯನ್ನೇ ಕೇಳಲಿದ್ದೀರಿ. ಸಂಗಾತಿಯು ನಿಮಗೆ ಬೆಲೆ ಬಾಳುವ ಆಭರಣವನ್ನು ಉಡುಗೊರೆ ರೂಪದಲ್ಲಿ ನೀಡಲಿದ್ದಾರೆ. ಸ್ವಂತ ವ್ಯವಹಾರ ಆರಂಭಿಸಲಿದ್ದೀರಿ.

ವೃಶ್ಚಿಕ : ಸ್ತ್ರೀಯರಿಗೆ ಈ ದಿನವು ಹೆಚ್ಚು ಮಂಗಳಕರವಾಗಿದೆ. ಈ ದಿನ ನೀವು ಮುಟ್ಟಿದ್ದೆಲ್ಲ ಚಿನ್ನವೇ ಆಗಲಿದೆ. ಸಂಘ ಸಂಸ್ಥೆಗಳನ್ನು ನಡೆಸುತ್ತಿರುವವರು ಸಾರ್ವಜನಿಕ ಜೀವನದಲ್ಲಿ ಮತ್ತಷ್ಟು ಗೌರವ ಸಂಪಾದಿಸಲಿದ್ದಾರೆ. ಸಂತಾನ ಭಾಗ್ಯವಿದೆ.

ಧನು : ವೃತ್ತಿ ಕ್ಷೇತ್ರದಲ್ಲಿ ನೀವು ಮಾಡಿದ ಸಾಧನೆಯು ನಿಮ್ಮ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಭಾರೀ ಬದಲಾವಣೆ ಉಂಟಾಗಲಿದೆ. ಕೃಷಿಕರಿಗೆ ಅನಿರೀಕ್ಷಿತ ಲಾಭ ಕಾದಿದೆ. ಕಂಕಣ ಭಾಗ್ಯವಿದೆ.

ಮಕರ : ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಕಾದಿದೆ. ನಿಮ್ಮ ಹೊಸ ಪ್ರಯತ್ನಗಳಿಗೆ ಸ್ನೇಹಿತರು ಬೆಂಬಲ ನೀಡಲಿದ್ದಾರೆ. ದಾಂಪತ್ಯ ಜೀವನದಲ್ಲಿನ ಬಿಕ್ಕಟ್ಟುಗಳು ಶಮನವಾಗಲಿದೆ. ಮಕ್ಕಳ ಆರೋಗ್ಯದ ಮೇಲೆ ಜಾಗ್ರತೆ ಇರಲಿ.

ಕುಂಭ : ಬಹಳ ದಿನಗಳ ಬಳಿಕ ನೀವಿಂದು ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಇಡೀ ದಿನ ನೀವು ಉಲ್ಲಾಸದಾಯಕವಾಗಿ ಕಳೆಯಲಿದ್ದೀರಿ. ವ್ಯಾಪಾರ ವ್ಯವಹಾರಗಳಲ್ಲಿ ನೆಮ್ಮದಿ ಕಾದಿದೆ. ಸಂಬಂಧಿಕರಿಗೆ ನಿಮ್ಮ ಮೇಲೆ ಉತ್ತಮ ಭಾವನೆ ಮೂಡಲಿದೆ.

ಮೀನ :  ಆಸ್ತಿ ವಿಚಾರವಾಗಿ ಕುಟುಂಬಸ್ಥರ ಜೊತೆ ದೊಡ್ಡ ಕಲಹ ಉಂಟಾಗಲಿದೆ. ವ್ಯಾಪಾರದಲ್ಲಿ ಏರಿಳಿತ ಉಂಟಾಗಲಿದೆ. ಗಡಿಬಿಡಿಯಲ್ಲಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಇದರಿಂದ ಹೆಚ್ಚಿನ ನಷ್ಟವನ್ನು ಅನುಭವಿಸಲಿದ್ದೀರಿ. ಪರಿಸ್ಥಿತಿಯನ್ನು ಚಾಣಾಕ್ಷತನದಿಂದ ಎದುರಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read