ಈ ರಾಶಿಯ ಕೃಷಿಕರಿಗಿದೆ ಇಂದು ಲಾಭ

ಮೇಷ : ವೃತ್ತಿ ಜೀವನದಲ್ಲಿ ಮುನ್ನಡೆ ಕಾದಿದೆ. ಇದರಿಂದ ನೀವು ಸಖತ್​ ಖುಷಿಯಾಗಿ ಇರಲಿದ್ದೀರಿ.

ವಿದ್ಯಾರ್ಥಿಗಳಿಗೆ ಅಂದುಕೊಂಡಿದ್ದು ಈಗ ದಕ್ಕದೇ ಇದ್ದರೂ ಮುಂದಿನ ದಿನಗಳಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸುವಿರಿ. ಕುಟುಂಬದಲ್ಲಿ ಶಾಂತಿಯಿದೆ.

ವೃಷಭ : ಪುತ್ರಿಗೆ ವೈವಾಹಿಕ ಸಂಬಂಧ ಕೂಡಿ ಬಂದಿಲ್ಲ ಎಂದು ಅನೇಕ ವರ್ಷಗಳಿಂದ ತಲೆಕೆಡಿಸಿಕೊಂಡಿದ್ದ ನಿಮಗೆ ಇಂದು ಶುಭ ಸುದ್ದಿ ಕಾದಿದೆ. ನಿಮ್ಮ ಪುತ್ರಿಗೆ ಸೂಕ್ತ ವರನ ಅನ್ವೇಷಣೆ ಆಗಲಿದೆ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.

ಮಿಥುನ : ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಇದರಿಂದ ನಿಮಗೆ ಬೆನ್ನು ನೋವಿನ ಸಮಸ್ಯೆ ಭಾದಿಸಬಹುದು. ಆರ್ಥಿಕ ಸಂಕಷ್ಟದಿಂದ ಪಾರಾಗಲು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.

ಕಟಕ : ಉದ್ಯಮದ ನಿಮಿತ್ತ ದೂರ ಪ್ರಯಾಣ ಮಾಡುವಿರಿ. ಸಂಬಂಧಿಗಳು ಔತಣ ಕೂಟಕ್ಕೆ ನಿಮ್ಮನ್ನು ಆಹ್ವಾನಿಸಲಿದ್ದಾರೆ. ವೃತ್ತಿ ರಂಗದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆಯ ಮಾತುಗಳನ್ನು ಕೇಳುವಿರಿ. ಕೃಷಿಕರಿಗೆ ಲಾಭ ಕಾದಿದೆ.

ಸಿಂಹ : ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮನೆ ನಿರ್ಮಾಣ ಕಾರ್ಯವು ಇಂದಿನಿಂದ ಮತ್ತೆ ಚುರುಕುಗೊಳ್ಳಲಿದೆ. ಸಂಗಾತಿ ನಿಮಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡಲಿದ್ದಾರೆ. ಸೂಪರ್​ ಮಾರ್ಕೆಟ್​​ ಮಾಲೀಕರಿಗೆ ಇಂದು ಬಂಪರ್​ ಲಾಭವಿದೆ.

ಕನ್ಯಾ : ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ಕೆ ಅಡ್ಡಿ ಆತಂಕಗಳು ಎದುರಾಗುವ ಸಾಧ್ಯತೆ ಇದೆ. ಪ್ರೀತಿ ಪಾತ್ರರಿಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡುವಿರಿ. ಬೆನ್ನಿಗೆ ಚೂರಿ ಹಾಕುವವರಿಂದ ಎಚ್ಚರಿಕೆಯಿಂದಿರಿ. ಕಂಕಣ ಭಾಗ್ಯವಿದೆ.

ತುಲಾ : ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆಯ ಪೆಟ್ಟು ಎಂಬ ಮಾತಿದೆ. ಮೇಲಾಧಿಕಾರಿಗಳು ನಿಮ್ಮ ತಪ್ಪುಗಳನ್ನು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಇನ್ನೂ ಎಚ್ಚೆತ್ತುಕೊಳ್ಳದೇ ಹೋದಲ್ಲಿ ನಿಮ್ಮ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಗರ್ಭಿಣಿಯರ ಆರೋಗ್ಯದಲ್ಲಿ ಜಾಗೃತೆ ಇರಲಿ.

ವೃಶ್ಚಿಕ : ಮನಸ್ಸಿನ ಮಾತಿಗೆ ಬೆಲೆ ನೀಡಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪ್ರತಿ ಬಾರಿಯೂ ನೀವು ಅಂದುಕೊಂಡಂತೆ ಪರಿಸ್ಥಿತಿ ಇರಲೇಬೇಕು ಎಂದೇನಿಲ್ಲ. ಹೀಗಾಗಿ ಯಾವುದೇ ಸ್ಥಿತಿಯಲ್ಲೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ.

ಧನು : ಅಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ಮನೆಯ ಹಿರಿಯರು ತುಳಿದ ತಪ್ಪು ದಾರಿಯನ್ನೇ ನೀವು ತುಳಿಯುತ್ತಿದ್ದೀರಿ. ಇದು ಒಳ್ಳೆಯದಲ್ಲ. ಆದಷ್ಟು ತಪ್ಪನ್ನು ತಿದ್ದಿಕೊಳ್ಳಿ. ಸಂಗಾತಿಯು ನಿಮ್ಮೆಲ್ಲ ಕಾರ್ಯಗಳಿಗೆ ಬೆನ್ನೆಲುಬಿನಂತೆ ನಿಲ್ಲಲಿದ್ದಾರೆ. ಕೃಷಿಕರಿಗೆ ಲಾಭವಿದೆ.

ಮಕರ : ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆಯಿದೆ. ಆರೋಗ್ಯದಲ್ಲಿ ಏರು ಪೇರು ಉಂಟಾಗಬಹುದು. ಆದರೆ ಚಿಂತೆ ಬೇಡ. ಮನೆ ಮದ್ದಿನ ಮೂಲಕ ಪರಿಹಾರ ಸಿಗಲಿದೆ. ನವವಿವಾಹಿತರ ನಡುವೆ ಭಿನ್ನಾಭಿಪ್ರಾಯ ಮೂಡಬಹುದು.

ಕುಂಭ : ಕಚೇರಿ ವಿಚಾರದಲ್ಲಿ ಅಡಚಣೆ ಇದ್ದರೂ ಸಹ ಎಲ್ಲವನ್ನೂ ನಿಭಾಯಿಸಲಿದ್ದೀರಿ. ಎಲ್ಲಾ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಿ. ಹಳೆಯ ಸಾಲಗಳು ತೀರಲಿವೆ.

ಮೀನ : ನಿಮ್ಮ ಎದುರು ಒಳ್ಳೆಯ ಮಾತುಗಳನ್ನಾಡಿ ಹಿಂದೆ ನಿಮ್ಮದೇ ಚಾಡಿ ಹೇಳುವವರ ವಿರುದ್ಧ ಅಂತರ ಕಾಯ್ದುಕೊಳ್ಳಿ. ರಾಜಕೀಯ ವ್ಯಕ್ತಿಗಳಿಗೆ ಇಂದು ಉನ್ನತ ಸ್ಥಾನ ಲಭಿಸಲಿದೆ. ವಿವಿಧ ಮೂಲಗಳಿಂದ ಧನ ಸಂಪತ್ತು ಹರಿದು ಬರಲಿದೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read