ಈ ರಾಶಿಯ ಉದ್ಯೋಗ ಅರಸುತ್ತಿರುವವರಿಗ ಇದೆ ಶುಭ ಸುದ್ದಿ

 

ಮೇಷ: ಸಂಗಾತಿಯೊಂದಿಗೆ ಹೊಂದಾಣಿಕೆ ಕಂಡು ಬಾರದ ಕಾರಣ ಕಿರಿಕಿರಿ ಎನಿಸಲಿದೆ. ವಾಹನ ಸಂಚಾರದಿಂದ ದೂರ ಇರುವುದು ಉತ್ತಮ. ನಿಮ್ಮೆಲ್ಲ ಕಾರ್ಯಗಳಿಗೆ ಒಡಹುಟ್ಟಿದವರು ಬೆಂಬಲ ನೀಡಲಿದ್ದಾರೆ. ದುಂದು ವೆಚ್ಚ ಮಾಡಬೇಡಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ವೃಷಭ : ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ಉತ್ತಮ ದಿನವಾಗಿದೆ. ಉದ್ಯೋಗದ ಮೇಲೆ ನಿಮ್ಮ ಸಂಪೂರ್ಣ ಗಮನವನ್ನ ನೀಡಲೇಬೇಕು. ಕಠಿಣ ಪರಿಶ್ರಮವಿಲ್ಲದೇ ಯಾವುದೂ ಸಾಧ್ಯವಿಲ್ಲ ಎಂಬುದು ತಲೆಯಲ್ಲಿರಲಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಾದಿದೆ. ಉದ್ಯೋಗ ಅರಸುತ್ತಿರುವವರು ಶುಭ ಸುದ್ದಿ ಕೇಳಬಹುದು.

ಮಿಥುನ : ನಿಮ್ಮ ಆರೋಗ್ಯ ದುರ್ಬಲವಾಗಿ ಇರೋದ್ರಿಂದ ಸೋಂಕು ಅಥವಾ ಅಲರ್ಜಿಯಿಂದ ಬಳಲುವ ಸಾಧ್ಯತೆ ಇದೆ. ಹೀಗಾಗಿ ಆದಷ್ಟು ಸ್ವಚ್ಛತೆಯನ್ನ ಕಾಪಾಡಿಕೊಳ್ಳಿ. ಆರ್ಥಿಕ ದೃಷ್ಟಿಯಿಂದ ಈ ದಿನ ನಿಮಗೆ ಕೊಂಚ ಭಾರ ಎನಿಸಲೂಬಹುದು. ಬಿಳಿ ಬಣ್ಣ ನಿಮಗೆ ಅದೃಷ್ಟ ತರಲಿದೆ. ಗುರು ರಾಘವೇಂದ್ರನನ್ನ ಆರಾಧಿಸಿ.

ಕಟಕ : ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವನ್ನ ಪೂರ್ಣ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಸಂಗಾತಿಗೆ ಹೆಚ್ಚು ಸಮಯ ನೀಡುತ್ತಿಲ್ಲ ಎಂಬ ಆರೋಪವನ್ನ ಎದುರಿಸಲಿದ್ದೀರಿ. ಮಕ್ಕಳಿಗೆ ಖುಷಿ ನೀಡುವ ಸಲುವಾಗಿ ದುಬಾರಿ ವಸ್ತು ಖರೀದಿ ಮಾಡುತ್ತೀರಿ.

ಸಿಂಹ : ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚನೆ ಮಾಡಿ. ವೈಯಕ್ತಿಕ ಜೀವನದಲ್ಲಿ ಕೆಲ ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ಹೋಟೆಲ್​ ಹಾಗೂ ರೆಸ್ಟಾರೆಂಟ್​ ಉದ್ಯಮಿಗಳಿಗೆ ಇಂದಿನ ದಿನ ಲಾಭದಾಯಕವಾಗಿಲ್ಲ.

ಕನ್ಯಾ : ಸ್ವಂತ ಉದ್ಯಮ ಆರಂಭಿಸಬೇಕು ಎಂಬ ನಿಮ್ಮ ಕನಸು ನನಸಾಗಲು ಹೆಚ್ಚು ದಿನ ಬಾಕಿ ಉಳಿದಿಲ್ಲ. ನೀವು ಮಾಡಿದ ತಪ್ಪಿನಿಂದಾಗಿ ಸಂಗಾತಿಯ ಮನಸ್ಸಿಗೆ ನೋವುಂಟಾಗಲಿದೆ. ಇದರಿಂದ ನಿಮ್ಮ ನೆಮ್ಮದಿ ಹಾಳಾಗಲಿದೆ. ಕಚೇರಿಯಲ್ಲಿ ನಿಮ್ಮ ಸಂಬಳ ಹೆಚ್ಚಾಗಲಿದೆ ಎಂಬ ಶುಭ ಸುದ್ದಿಯನ್ನು ಕೇಳುತ್ತೀರಿ.

ತುಲಾ : ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಕೈಗೊಳ್ಳುವ ನಿರ್ಧಾರಗಳ ಬಗ್ಗೆ ಎಚ್ಚರಿಕೆಯಿಂದಿರಿ. ಕೌಟುಂಬಿಕ ಜೀವನ ಅಷ್ಟೇನು ಚೆನ್ನಾಗಿ ಇರೋದಿಲ್ಲ ಪಿತ್ರಾರ್ಜಿತ ಆಸ್ತಿಗಾಗಿ ದಾಯಾದಿ ಕಲಹ ಉಂಟಾಗಲಿದೆ. ಈ ಹಿಂದೆ ಮಾಡಿದ ಕೈ ಸಾಲಗಳನ್ನ ತೀರಿಸುತ್ತೀರಾ.

ವೃಶ್ಚಿಕ : ಇಂಜಿನಿಯರಿಂಗ್​ ಪದವಿ ಪೂರೈಸಿದವರಿಗೆ ಒಳ್ಳೆಯ ಉದ್ಯೋಗ ಅವಕಾಶ ಹುಡುಕಿಕೊಂಡು ಬರಲಿದೆ. ಕುಟುಂಬ ಸದಸ್ಯರ ಜೊತೆ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಹಿರಿಯರು ನೀಡುವ ಸಲಹೆಗಳನ್ನ ಗಣನೆಗೆ ತೆಗೆದುಕೊಳ್ಳಿ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭವಿದೆ.

ಧನು : ಈ ದಿನದ ಆರಂಭದಲ್ಲಿ ನಿಮ್ಮ ವ್ಯಾಪಾರ ವ್ಯವಹಾರವು ಕೊಂಚ ನಿರಾಶಾದಯಕವಾಗಿ ಇರಲಿದೆ. ಉನ್ನತ ಅಧಿಕಾರಿಗಳು ನಿಮ್ಮನ್ನ ದೂಷಿಸಲು ಅವಕಾಶ ನೀಡಬೇಡಿ. ಕೊಟ್ಟ ಕೆಲಸವನ್ನ ಸರಿಯಾದ ಸಮಯಕ್ಕೆ ಮುಗಿಸುವುದನ್ನ ಕಲಿತುಕೊಳ್ಳಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇದೆ.

ಮಕರ : ಶೀತ ಹಾಗೂ ಜ್ವರದ ಸಮಸ್ಯೆ ನಿಮ್ಮನ್ನ ಭಾದಿಸುವುದರಿಂದ ಆದಷ್ಟು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ದೊಡ್ಡ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಉತ್ಸಾಹ ತೋರಲಿದ್ದೀರಿ. ನೆರೆಮನೆಯವರ ಜೊತೆ ಕೊಂಚ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ.

ಕುಂಭ : ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಶುಭ ಸುದ್ದಿ ಕಾದಿದೆ. ಆರ್ಥಿಕ ದೃಷ್ಟಿಯಿಂದ ಈ ದಿನ ಚೆನ್ನಾಗಿಯೇ ಇರಲಿದೆ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇಲ್ಲ. ಹೀಗಾಗಿ ಮಾನಸಿಕವಾಗಿ ದಣಿಯಲಿದ್ದೀರಿ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ.

ಮೀನ : ವ್ಯಾಪಾರಸ್ಥರ ಪಾಲಿಗೆ ಇದು ಶುಭ ದಿನವಾಗಿದೆ. ಇಂದು ನೀವು ನಿರೀಕ್ಷೆಗೂ ಮೀರಿ ಲಾಭ ಗಳಿಸಲಿದ್ದೀರಿ. ಮನೆಯಲ್ಲಿ ಹಿರಿಯರ ಬೆಂಬಲದಿಂದಾಗಿ ನೀವು ಹಿಡಿದ ಕೆಲಸವು ಯಶಸ್ಸು ಪಡೆಯಲಿದೆ. ದೈಹಿಕ ಆರೋಗ್ಯದ ಮೇಲೆ ಕಾಳಜಿ ಇರಲಿ. ದೂರ ಪ್ರಯಾಣ ಬೇಡ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read