ಈ ರಾಶಿಯವರು ಹೊಸ ಉದ್ಯಮಗಳಿಗೆ ಹೂಡಿಕೆ ಮಾಡಲು ಇಂದು ಶುಭ ದಿನ

ಮೇಷ : ಕಚೇರಿಯಲ್ಲಿ ಇಂದು ಭಯದ ವಾತಾವರಣ ಇರಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆ ಉಂಟಾಗಲಿದೆ.

ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಆಂಜನೇಯನನ್ನು ಪ್ರಾರ್ಥಿಸಿ.

ವೃಷಭ : ವ್ಯಾಪಾರ- ವ್ಯವಹಾರದಲ್ಲಿ ನೀವು ಲಾಭವನ್ನು ಹೊಂದಲಿದ್ದೀರಿ. ಕಚೇರಿಯಲ್ಲಿ ಭಯಪಟ್ಟು ಕೆಲಸ ಮಾಡುವಂತಹ ಸನ್ನಿವೇಶ ಎದುರಾಗಲಿದೆ. ಹತ್ತಿರದ ಸಂಬಂಧಿಗಳ ಭೇಟಿ ಮನಸ್ಸಿಗೆ ಖುಷಿ ಎನಿಸಲಿದೆ. ವಿದ್ಯಾರ್ಥಿಗಳಿಗೆ ದೈವಾನುಗ್ರಹ ಇರಲಿದೆ.

ಮಿಥುನ : ಜಾಗದ ವಿಚಾರಕ್ಕೆ ನೆರೆಮನೆಯವರ ಜೊತೆ ದೊಡ್ಡ ಗಲಾಟೆಯೇ ನಡೆಯಬಹುದು. ಯಾವುದೇ ಸಂದರ್ಭದಲ್ಲಿಯೂ ಮಾತಿನ ಮೇಲೆ ಹಿಡಿತವಿತಲಿ. ಇಂದು ನೀವು ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಲಿದ್ದೀರಿ. ಕುಲದೇವರನ್ನು ಪ್ರಾರ್ಥಿಸಿ.

ಕಟಕ : ಪೂರ್ವಜರ ಆಸ್ತಿಯಿಂದ ನಿಮಗೆ ಲಾಭ ದೊರಕಿದೆ. ನಿಮ್ಮ ಜೀವನ ಸಂಗಾತಿಯಿಂದ ಧನಲಾಭ ಹೊಂದಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಭಾಗ್ಯವಿದೆ. ವ್ಯಾಪಾರ – ವ್ಯವಹಾರಗಳಲ್ಲಿ ಸ್ಥಿರತೆಯನ್ನು ಕಾಣಲಿದ್ದೀರಿ.

ಸಿಂಹ : ಅನಾರೋಗ್ಯದಿಂದ ಬಳಲುತ್ತಿದ್ದವರು ಇಂದು ಚೇತರಿಕೆ ಕಾಣಲಿದ್ದಾರೆ. ಸಹೋದರಿಯು ನಿಮಗೆ ಇಂದು ಉಡುಗೊರೆ ನೀಡಲಿದ್ದಾರೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಒಲವು ತೋರಲಿದ್ದೀರಿ. ಅನಗತ್ಯ ಖರ್ಚು ವೆಚ್ಚಗಳ ಮೇಲೆ ಹಿಡಿತ ಇರಲಿ.

ಕನ್ಯಾ : ನಿರಂತರ ಪ್ರಯಾಣದಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಕುಟುಂಬದಲ್ಲಿನ ಕಿರಿಕಿರಿಗೆ ಪರಿಹಾರ ಸಿಗಲಿದೆ. ಪೋಷಕರಿಂದ ಮಾರ್ಗದರ್ಶನ ಪಡೆದು ಉದ್ಯಮದಲ್ಲಿ ಬದಲಾವಣೆ ಮಾಡಲಿದ್ದೀರಿ.

ತುಲಾ : ಸಹೋದರಿಯು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಹೆಗಲು ನೀಡಲಿದ್ದಾರೆ. ವಾಹನ ಸವಾರಿ ಮಾಡುವಾಗ ಆದಷ್ಟು ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಪತ್ನಿಯಿಂದ ಕೊಂಚ ಕಿರಿಕಿರಿ ಇರಲಿದೆ.

ವೃಶ್ಚಿಕ : ಇಂದು ನೀವು ಯಾರಿಗೂ ಸಾಲ ನೀಡಲು ಹೋಗಬೇಡಿ. ಇವತ್ತು ನೀಡಿದ ಹಣ ಎಂದಿಗೂ ವಾಪಸ್​ ಬರೋದಿಲ್ಲ. ವಿದ್ಯಾರ್ಥಿಗಳು ಆದಷ್ಟು ಎಚ್ಚರವಾಗಿ ಇರಿ. ಸಂಗಾತಿಯು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ನೆರವಾಗಲಿದ್ದಾರೆ. ಶಿವನನ್ನು ಆರಾಧಿಸಿ.

ಧನು: ಉದ್ಯೋಗ ಸಿಗದೇ ಅಲೆದಾಡುತ್ತಿದ್ದ ನಿಮಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಇಂದು ನೀವು ವಾಹನ ಖರೀದಿ ಮಾಡಲಿದ್ದೀರಿ. ಸಂಗಾತಿಯ ಕುಟುಂಬಸ್ಥರ ಜೊತೆ ವಾಗ್ವಾದ ಉಂಟಾಗಬಹುದು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಲಿದ್ದೀರಿ.

ಮಕರ : ಆಧ್ಮಾತ್ಮಿಕ ಕ್ಷೇತ್ರದತ್ತ ಒಲವು ತೋರಲಿದ್ದೀರಿ. ಸಂಗಾತಿಯು ಇಂದು ಅದೃಷ್ಟದಿಂದ ಧನಲಾಭ ಪಡೆಯಲಿದ್ದಾರೆ. ಉದ್ಯಮದಲ್ಲಿ ಸಂಗಾತಿ ಸಾಧಿಸುತ್ತಿರುವ ಯಶಸ್ಸು ನಿಮಗೆ ಸಂತೋಷ ನೀಡಲಿದೆ. ಪೋಷಕರ ಆರೋಗ್ಯದ ಬಗ್ಗೆ ಆದಷ್ಟು ಜಾಗ್ರತೆ ಇರಲಿ.

ಕುಂಭ : ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ಮೂಡಿದ್ದ ವೈಮನಸ್ಯ ದೂರಾಗಲಿದೆ. ಸ್ತ್ರೀಯರಿಗೆ ಧನಲಾಭವಿದೆ. ದುಬಾರಿ ಬೆಲೆಯ ವಸ್ತು ಖರೀದಿ ಮಾಡಲಿದ್ದೀರಿ. ಕಣ್ಣಿನ ಆರೋಗ್ಯ ಕೆಡಲಿದೆ. ವ್ಯಾಪಾರಿಗಳಿಗೆ ಶುಭವಿದೆ.

ಮೀನ : ಕಚೇರಿಯಲ್ಲಿ ನಿಮ್ಮ ಕೆಲಸವು ಮೇಲಾಧಿಕಾರಿಗಳಿಗೆ ಮೆಚ್ಚುಗೆ ಎನಿಸಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಹೊಸ ಉದ್ಯಮಗಳಿಗೆ ಹೂಡಿಕೆ ಮಾಡಲು ಬಯಸುವವರಿಗೆ ಇದು ಶುಭದಿನವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read