ಈ ರಾಶಿಯವರಿಗೆ ಇಂದು ಖುಲಾಯಿಸಲಿದೆ ಅದೃಷ್ಟ

 

ಮೇಷ : ಇಂದು ಕಚೇರಿಯಲ್ಲಿ ಒಳ್ಳೆಯ ವಾತಾವರಣ ಇರಲಿದೆ. ನೀವು ಚಟುವಟಿಕೆಯಿಂದ ಇರಲಿದ್ದೀರಿ. ನಿಮ್ಮೆಲ್ಲ ಕೆಲಸಗಳಿಗೆ ಸಂಗಾತಿಯು ಸಾಥ್​ ನೀಡಲಿದ್ದಾರೆ. ಉದ್ಯಮದಲ್ಲಿ ಗಳಿಸಿದ ಲಾಭವನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಲಿದ್ದೀರಿ.

ವೃಷಭ : ಮಕ್ಕಳ ಓದಿನತ್ತ ಹೆಚ್ಚಿನ ಗಮನ ನೀಡಲೇಬೇಕು. ಇಲ್ಲವಾದಲ್ಲಿ ಮಕ್ಕಳು ತುಂಬಾ ಹಿನ್ನಡೆ ಸಾಧಿಸುವ ಸಾಧ್ಯತೆ ಇದೆ. ದಾಂಪತ್ಯ ಜೀವನವು ಚೆನ್ನಾಗಿ ಇರಲಿದೆ. ಉದ್ಯಮದಲ್ಲಿ ಲಾಭವಿದೆ. ಸಹೋದ್ಯೋಗಿಗಳು ಸಹಾಯ ಮಾಡಲಿದ್ದಾರೆ.

ಮಿಥುನ : ಮಕ್ಕಳ ಒತ್ತಾಯಕ್ಕೆ ಮಣಿದು ಹೊಸ ವಾಹನ ಖರೀದಿ ಮಾಡಲಿದ್ದೀರಿ. ಸಂಗಾತಿಯ ಆರೋಗ್ಯ ಸಂಜೆಯ ಬಳಿಕ ಹದಗೆಡಲಿದೆ. ಇದರಿಂದ ನೀವು ಆತಂಕಕ್ಕೆ ಒಳಗಾಗುವಿರಿ. ಹೊಸ ಉದ್ಯಮಕ್ಕೆ ಹೂಡಿಕೆ ಮಾಡುವವರಿಗೆ ಇದು ಶುಭದಿನವಾಗಿದೆ.

ಕಟಕ : ನಿಮ್ಮ ಉತ್ತಮ ಬುದ್ಧಿಯಿಂದಾಗಿ ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಇಂದು ನಿಮಗೆ ಕುಟುಂಬದಿಂದ ಒಳ್ಳೆಯ ಸುದ್ದಿ ಕೇಳಿ ಬರಲಿದೆ. ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ನಿಮಗೆ ಜಯವಿದೆ.

ಸಿಂಹ : ಕೃಷಿ ಚಟುವಟಿಕೆಗಳಲ್ಲಿ ಇರುವವರಿಗೆ ಇಂದು ತುಸು ಹೆಚ್ಚೇ ಖರ್ಚಾಗಬಹುದು. ಜವಳಿ ಉದ್ಯಮಿಗಳಿಗೆ ಉತ್ತಮ ಹಣಕಾಸಿನ ಲಾಭವಿದೆ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಭಾಗ್ಯವಿದೆ. ಕಲಾವಿದರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ.

ಕನ್ಯಾ : ಮಾತು ಬೆಳ್ಳಿ, ಮೌನ ಬಂಗಾರ ಎಂಬ ಮಾತಿದೆ. ಹೀಗಾಗಿ ಆದಷ್ಟು ಮೌನವಾಗಿ ಇದ್ದಷ್ಟು ಪರಿಸ್ಥಿತಿ ನಿಮ್ಮ ಪರವಾಗಿ ಇರಲಿದೆ. ವ್ಯಾಪಾರಿಗಳಿಗೆ ಇಂದು ಲಾಭವಿದೆ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಸಂಗಾತಿಯಿಂದ ನಿಮಗೆ ಉತ್ತಮ ಉಡುಗೊರೆ ಸಿಗಲಿದೆ.

 ತುಲಾ : ವೃತ್ತಿರಂಗದಲ್ಲಿ ನಿಮಗೆ ಯಶಸ್ಸಿದೆ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಅವಕಾಶ ಹುಡುಕಿಕೊಂಡು ಬರಲಿದೆ. ವೈದ್ಯಕೀಯ ರಂಗದಲ್ಲಿ ಇರುವವರಿಗೆ ಇಂದು ಒತ್ತಡದ ದಿನವಾಗಿರಲಿದೆ. ಬಹಳ ದಿನಗಳಿಂದ ಉದ್ಯೋಗಕ್ಕೆ ಅರಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ.

ವೃಶ್ಚಿಕ : ರಾಜಕೀಯ ವ್ಯಕ್ತಿಗಳಿಗೆ ಇಂದು ಉತ್ತಮ ಸ್ಥಾನ ಮಾನ ಸಿಗಲಿದೆ. ತಾಯಿಯ ಕಟುವಾದ ನುಡಿಯು ನಿಮ್ಮ ಮನಸ್ಸಿಗೆ ಘಾಸಿ ಉಂಟು ಮಾಡುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಲಿದ್ದಾರೆ.

ಧನು : ಹೊಸ ಕಚೇರಿಯ ವಾತಾವರಣಕ್ಕೆ ಹೊಂದಿಕೊಳ್ಳಲಿದ್ದೀರಿ. ಇಂದು ನಿಮಗೆ ಪ್ರಯಾಣ ಶುಭಕರವಾಗಿಲ್ಲ. ಹೀಗಾಗಿ ಆದಷ್ಟು ವಾಹನಗಳಿಂದ ದೂರವೇ ಇರಿ. ಕುಟುಂಬದಲ್ಲಿ ಶುಭ ವಾರ್ತೆ ಕೇಳುವಿರಿ.

 ಮಕರ : ಮಕ್ಕಳು ಓದಿನೆಡೆಗೆ ಹೆಚ್ಚಿನ ಆಸಕ್ತಿ ತೋರಲಿದ್ದಾರೆ. ಇದರಿಂದ ನೀವು ನಿರಾಳತೆ ಅನುಭವಿಸುವಿರಿ. ಇಂದು ನೀವು ಸಂಗಾತಿಯ ಜೊತೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಕೃಷಿಕರಿಗೆ ಇದು ಲಾಭದ ದಿನವಾಗಿದೆ.

ಕುಂಭ : ಇಂದು ನಿಮ್ಮ ಅದೃಷ್ಟ ಖುಲಾಯಿಸಲಿದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯವು ಇಂದು ಪೂರ್ಣಗೊಳ್ಳಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಬೆಲೆಯನ್ನು ಪಡೆಯಲಿದ್ದೀರಿ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ.

ಮೀನ : ದಾಂಪತ್ಯ ಜೀವನದಲ್ಲಿ ಕಿರಿಕಿರಿ ಉಂಟಾಗಲಿದೆ. ಸಂಗಾತಿಯ ಮೇಲೆ ಅನುಮಾನ ಪಡುವುದು ಸೂಕ್ತವಲ್ಲ. ಎಲ್ಲರೊಂದಿಗೆ ಸ್ನೇಹ ಸಂಪಾದಿಸುವಲ್ಲಿ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿದೆ. ಸಾರ್ವಜನಿಕ ಜೀವನದಲ್ಲಿ ಯಶಸ್ಸನ್ನು ಗಳಿಸುವಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read