ಈ ರಾಶಿಯವರಿಗೆ ಇಂದು ಇರಲಿದೆ ಶುಭ ಕಾರ್ಯಗಳಿಗೆ ಅನುಕೂಲ ವಾತಾವರಣ

ಮೇಷ : ತಂದೆಯ ನಡವಳಿಕೆಯು ನಿಮ್ಮ ಮನಸ್ಸಿಗೆ ನೋವುಂಟು ಮಾಡಲಿದೆ. ಚಿಕ್ಕ ಚಿಕ್ಕ ವಿಚಾರಕ್ಕೂ ಸಂಗಾತಿಯ ಮೇಲೆ ರೇಗುವುದನ್ನು ನಿಲ್ಲಿಸಿ. ಇದರಿಂದ ನಿಮಗೆ ಕೌಟುಂಬಿಕ ಜೀವನಕ್ಕೆ ಹೆಚ್ಚು ಮಹತ್ವ ನೀಡಲು ಸಾಧ್ಯವಾಗದೇ ಹೋಗಬಹುದು.

ವೃಷಭ : ಶುಭ ಕಾರ್ಯಗಳಿಗೆ ಅನುಕೂಲ ವಾತಾವರಣ ಇರಲಿದೆ. ಇಂದು ನಿಮಗೆ ಅನಿರೀಕ್ಷಿತ ಮೂಲದಿಂದ ಧನಾಗಮನವಾಗಲಿದೆ. ಮನೆ ನಿರ್ಮಾಣ ಮಾಡುವತ್ತ ಮನಸ್ಸು ಮಾಡಲಿದ್ದೀರಿ. ಸಂಗಾತಿಯು ನಿಮ್ಮೆಲ್ಲ ಪ್ರಯತ್ನಗಳಿಗೆ ಹೆಗಲಾಗಲಿದ್ದಾರೆ.

 ಮಿಥುನ : ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರಿ. ಇಂದು ನಿಮಗೆ ಅನಾರೋಗ್ಯ ಸಮಸ್ಯೆ ಕಾಡಬಹುದು. ತಾಯಿಯಿಂದ ಧನಾಗಮನವಿದೆ. ವ್ಯಾಪಾರ – ವ್ಯವಹಾರಗಳಲ್ಲಿ ಚೇತರಿಕೆ ಕಂಡು ಬರಲಿದೆ.

ಕಟಕ : ತಾಯಿಯ ಮನೆಯ ಕಡೆಯಿಂದ ಆಸ್ತಿ ಸಿಗಲಿದೆ. ವಾಹನ ಖರೀದಿ ಮಾಡುವವರಿಗೆ ಇಂದು ಶುಭ ದಿನ, ಮನೆಯ ಕಿರಿಯ ಸದಸ್ಯರಿಂದ ಶುಭ ಸುದ್ದಿಯನ್ನು ಕೇಳುವಿರಿ. ಉದ್ಯೋಗದಲ್ಲಿ ಸ್ವಲ್ಪ  ಒತ್ತಡ ಎನಿಸಲಿದೆ.

ಸಿಂಹ : ಪರೋಪಕಾರಿಯಾದ ನಿಮ್ಮ ಮನಸ್ಸಿಗೆ ನಿಮ್ಮಿಂದ ಸಹಾಯ ಪಡೆದವರೇ ಘಾಸಿ ಉಂಟು ಮಾಡಲಿದ್ದಾರೆ. ಸಂಗಾತಿಯ ನಡುವಳಿಕೆಯು ನಿಮ್ಮ ಮನಸ್ಸಿಗೆ ನೋವುಂಟು ಮಾಡಲಿದೆ. ಹೊಸ ಉದ್ಯೋಗಾವಕಾಶವೊಂದು ನಿಮ್ಮನ್ನು ಅರಸಿ ಬರಲಿದೆ. ಧನಾಗಮನವಿದೆ.

ಕನ್ಯಾ : ನೀವು ಬಸ್ಸು ಹೋದಮೇಲೆ ಟಿಕೆಟ್​​ ತೆಗೆದುಕೊಳ್ಳುವುದು ನಿಮಗೆ ಕರಗತವಾದಂತೆ ಕಾಣುತ್ತಿದೆ. ನೀವು ವಿಳಂಬ ಮಾಡಿ ಬಳಿಕ ಕಾಲವನ್ನು ದೂಷಿಸಬೇಡಿ. ಪ್ರಯತ್ನಂ ಸರ್ವ ಸಿದ್ಧಿ ಸಾಧನಂ ಎಂಬ ಮಾತು ತಲೆಯಲ್ಲಿ ಇರಲಿ. ಸಂಗಾತಿಯೊಂದಿಗೆ ವಾಗ್ವಾದ ಉಂಟಾಗಬಹುದು.

ತುಲಾ : ಉದ್ಯಮದಲ್ಲಿ ಲಾಭವಿದೆ. ಆದರೆ ಉದ್ಯಮದ ನಿಮಿತ್ತ ಅತಿಯಾದ ಪ್ರಯಾಣ ಕೈಗೊಂಡ ನೀವು ತೀವ್ರವಾಗಿ ದಣಿಯುವಿರಿ. ಇದರಿಂದ ಅನಾರೋಗ್ಯ ಸಮಸ್ಯೆ ಕೂಡ ಉಂಟಾಗಬಹುದು. ಸಂಗಾತಿಯೊಂದಿಗೆ ವಾಗ್ವಾದ ನಡೆಯಲಿದೆ.

ವೃಶ್ಚಿಕ : ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಅತಿಯಾದ ದುಶ್ಚಟವು ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಉಂಟು ಮಾಡಲಿದೆ. ಅನಗತ್ಯ ವಿಚಾರಕ್ಕೆ ಕೋಪ ಬೇಡ. ಸಹೋದರನ ಆರ್ಥಿಕ ಸಂಕಷ್ಟಕ್ಕೆ ಹೆಗಲಾಗುವಿರಿ. ಮನೆಯ ಹೆಣ್ಣು ಮಕ್ಕಳಿಂದ ಲಾಭ ಕಾದಿದೆ.

ಧನು : ಮನೆ ನಿರ್ಮಾಣ ಕಾರ್ಯದ ಬಗ್ಗೆ ಕುಟುಂಬದಲ್ಲಿ ಚರ್ಚೆ ನಡೆಸುವಿರಿ. ಸಂಗಾತಿಯಿಂದ ಕಿರಿಕಿರಿ ಇರಲಿದೆ. ದಾಂಪತ್ಯ ಜೀವನದಲ್ಲಿ ಮೂರನೇ ವ್ಯಕ್ತಿಯಿಂದ ಬಿರುಕು ಉಂಟಾಗಲಿದೆ. ವ್ಯಾಪಾರದಿಂದ ಲಾಭವಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಜಾಗೃತೆ ಇರಲಿ.

ಮಕರ : ಸ್ತ್ರೀಯರು ಇಂದು ಅಪಾರ ನೋವನ್ನು ಅನುಭವಿಸಲಿದ್ದಾರೆ. ಪತ್ರ ವ್ಯವಹಾರಗಳಲ್ಲಿ ಜಯವಿದೆ. ಉದ್ಯೋಗದ ನಿಮಿತ್ತ ದೂರ ಪ್ರಯಾಣ ಕೈಗೊಳ್ಳಬೇಕಾಗಿ ಬರಬಹುದು.

ಕುಂಭ : ಸ್ಥಿರಾಸ್ಥಿಯಿಂದ ಲಾಭವಿದೆ. ಕುಟುಂಬದ ಜೊತೆ ಉತ್ತಮ ಸಮಯ ಕಳೆಯುವಿರಿ. ಪುತ್ರಿಗೆ ವೈವಾಹಿಕ ಸಂಬಂಧ ಕೂಡಿ ಬರಲಿದೆ. ಅಂದುಕೊಂಡ ಕಾರ್ಯಗಳು ನೆರವೇರಲಿದೆ. ಮಹಿಳಾ ಮಿತ್ರರು ಸಹಾಯ ಮಾಡಲಿದ್ದಾರೆ.

ಮೀನ : ಮೋಜು ಮಸ್ತಿಯಿಂದ ಹಣವನ್ನು ಹಾಳು ಮಾಡಬೇಡಿ. ಶೀತ ಹಾಗೂ ಕೆಮ್ಮಿನಿಂದ ಬಳಲಲಿದ್ದೀರಿ. ವ್ಯಾಪಾರಿಗಳಿಗೆ ಇದು ಅದೃಷ್ಟದ ದಿನವಾಗಿದೆ. ಪತ್ರ ವ್ಯವಹಾರಗಳಲ್ಲಿ ತೊಂದರೆ ಕಾದಿದೆ. ಪೋಷಕರಿಗೆ ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read