ಈ ರಾಶಿಯವರಿಗಿದೆ ಇಂದು ಹಿರಿಯರಿಂದ ಲಾಭ

ಮೇಷ ರಾಶಿ

ನಿಗದಿತ ಕಾರ್ಯಗಳೆಲ್ಲ ಸುಲಭವಾಗಿ ಪೂರ್ಣಗೊಳ್ಳಲಿವೆ. ಆದ್ರೆ ನಿಮ್ಮ ಪ್ರಯತ್ನ ತಪ್ಪು ದಿಸೆಯಲ್ಲಿ ಹೋದಂತೆ ಗೋಚರವಾಗುತ್ತದೆ. ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೀರಿ. ತೀರ್ಥಯಾತ್ರೆ ಮಾಡುವ ಯೋಗವಿದೆ.

ವೃಷಭ ರಾಶಿ

ಅಂದುಕೊಂಡ ಕಾರ್ಯ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದೇ ಇರುವುದರಿಂದ ಹತಾಶೆ ಆವರಿಸುತ್ತದೆ. ಯಶಸ್ಸು ಸಿಗಲು ಕೊಂಚ ವಿಳಂಬವಾಗಲಿದೆ. ಇಂದು ಹೊಸ ಕಾರ್ಯವನ್ನು ಆರಂಭಿಸಬೇಡಿ.

ಮಿಥುನ ರಾಶಿ

ಇವತ್ತು ದಿನದ ಆರಂಭ ಅತ್ಯಂತ ಆರಾಮದಾಯಕವಾಗಿಯೂ ಮತ್ತು ಸ್ಪೂರ್ತಿದಾಯಕವಾಗಿಯೂ ಇರುತ್ತದೆ. ಮಿತ್ರರ ಜೊತೆಗೆ ಪಾರ್ಟಿಗೆ ತೆರಳಲು ಪ್ಲಾನ್ ಹಾಕಿಕೊಳ್ಳಬಹುದು.

ಕರ್ಕ ರಾಶಿ

ಇವತ್ತು ಇಡೀ ದಿನ ನಿಮ್ಮ ಮೂಡ್ ಚೆನ್ನಾಗಿರುತ್ತದೆ. ಕುಟುಂಬದವರೊಂದಿಗೆ ಸಂತೋಷವಾಗಿ ಕಾಲ ಕಳೆಯಲು ಅವಕಾಶ ಸಿಗುತ್ತದೆ. ನಿಗದಿತ ಕೆಲಸ ಪೂರ್ಣವಾಗಲಿದೆ, ಯಶಸ್ಸು ಸಿಗಲಿದೆ.

ಸಿಂಹ ರಾಶಿ

ಸಾಹಿತ್ಯ ಮತ್ತು ಲೇಖನದಲ್ಲಿ ಹೊಸ ಪ್ರಯತ್ನ ಮಾಡಲಿದ್ದೀರಿ. ಪ್ರಿಯ ವ್ಯಕ್ತಿಯೊಂದಿಗಿನ ಭೇಟಿ ಸುಖಮಯವಾಗಿರುತ್ತದೆ. ಮಕ್ಕಳ ಬಗ್ಗೆ ಶುಭ ಸಮಾಚಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ.

ಕನ್ಯಾ ರಾಶಿ

ಇಂದು ಆರೋಗ್ಯ ಕೊಂಚ ಏರುಪೇರಾಗಲಿದೆ. ಮನಸ್ಸು ಕೂಡ ಚಿಂತಾಗ್ರಸ್ಥವಾಗಿರುತ್ತದೆ. ತಾಯಿಯೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಆತ್ಮೀಯರ ಜೊತೆಗೆ ವಾದ- ವಿವಾದ, ಮುನಿಸು ಉಂಟಾಗಲಿದೆ.

ತುಲಾ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಅನುಕೂಲಕರ ದಿನ. ಭಾಗ್ಯ ವೃದ್ಧಿ ಮತ್ತು ಧನ ಲಾಭದ ಸಾಧ್ಯತೆ ಇದೆ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ವಿದೇಶದಿಂದ ಶುಭ ಸಮಾಚಾರ ಬರಲಿದೆ.

ವೃಶ್ಚಿಕ ರಾಶಿ

ಮನೆಯಲ್ಲಿ ಸುಖ-ಶಾಂತಿ ತುಂಬಿರುತ್ತದೆ. ಮಿತ್ರರು ಮತ್ತು ಸಂಬಂಧಿಕರ ಆಗಮನವಾಗಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಆಭರಣ ಮತ್ತು ಸುಗಂಧ ದ್ರವ್ಯಗಳನ್ನು ಖರೀದಿಸಲಿದ್ದೀರಿ.

ಧನು ರಾಶಿ

ಆರೋಗ್ಯ ಸುಧಾರಿಸಲಿದೆ. ಓದಿನಲ್ಲಿ ಯಶಸ್ಸು ಸಿಗುತ್ತದೆ. ವಿದೇಶದಲ್ಲಿ ನಡೆಸಿರುವ ವ್ಯಾಪಾರದಿಂದ ಲಾಭವಿದೆ. ಧಾರ್ಮಿಕ ಮತ್ತು ಮಂಗಳ ಕಾರ್ಯ ನಡೆಸಿಕೊಡಲಿದ್ದೀರಿ. ಮಿತ್ರರ ಭೇಟಿಯಿಂದ ಆರ್ಥಿಕ ಲಾಭ ದೊರೆಯಲಿದೆ.

ಮಕರ ರಾಶಿ

ವ್ಯವಹಾರದಲ್ಲಿ ಹೊರಗಿನವರ ಹಸ್ತಕ್ಷೇಪವಿರುತ್ತದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಶತ್ರುಗಳಿಂದ ತೊಂದರೆಯಾಗಬಹುದು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಬಾಧಿಸುತ್ತವೆ.

ಕುಂಭ ರಾಶಿ

ಹೊಸ ಕಾರ್ಯ ಆರಂಭಿಸಲು ಶುಭ ದಿನ. ಅವಿವಾಹಿತರಿಗೆ ವಿವಾಹ ಯೋಗವಿದೆ. ಸಂಗಾತಿ ಮತ್ತು ಮಕ್ಕಳಿಂದ ಶುಭ ಸಮಾಚಾರ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಸುಖದ ಅನುಭವವಾಗಲಿದೆ.

ಮೀನ ರಾಶಿ

ಇಂದು ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಪದೋನ್ನತಿ ಯೋಗವಿದೆ. ವ್ಯಾಪಾರಿಗಳಿಗೆ ಬಾಕಿ ಹಣ ದೊರೆಯಲಿದೆ. ಹಿರಿಯರಿಂದ ಲಾಭವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read