ಈ ರಾಶಿಯವರಿಗಿದೆ ಇಂದು ವೃತ್ತಿ ಜೀವನದಲ್ಲಿ ಉತ್ತಮ ಅವಕಾಶ

ಮೇಷ : ಉದ್ಯಮದ ವಿಚಾರದಲ್ಲಿ ಈ ದಿನ ನಿಮಗೆ ಸವಾಲಿನದ್ದಾಗಿರಲಿದೆ. ಕಾರ್ಯಕ್ಷೇತ್ರದಲ್ಲಿ ಹೊಸ ಅನುಭವಗಳನ್ನು ಪಡೆಯಲಿದ್ದೀರಿ. ಸೋಮಾರಿತನದಿಂದಾಗಿ ವಿದ್ಯಾರ್ಥಿಗಳು ಒಳ್ಳೆಯ ಅವಕಾಶಗಳಿಂದ ವಂಚಿತರಾಗಲಿದ್ದಾರೆ.

ವೃಷಭ : ಕಾರ್ಯಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ. ಇಂದು ನೀವು ಹೊಸ ಜನರನ್ನು ಭೇಟಿಯಾಗಲಿದ್ದೀರಿ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಭಾದಿಸಲಿದೆ. ಆದರೆ ಮನೆಮದ್ದಿನ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು. ಸಂಜೆ ಸಮಯವನ್ನು ಕುಟುಂಬಸ್ಥರ ಜೊತೆ ಕಳೆಯಲಿದ್ದೀರಿ.

ಮಿಥುನ : ಆಸ್ತಿ ವಿಚಾರದಲ್ಲಿ ಪ್ರಭಾವಿ ವ್ಯಕ್ತಿಗಳನ್ನೇ ಎದುರು ಹಾಕಿಕೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಇದರಿಂದ ನೀವು ಆತಂಕಕ್ಕೆ ಒಳಗಾಗುವಿರಿ. ಹೊಸ ಕೆಲಸವನ್ನು ಆರಂಭಿಸಲು ಇದು ಯೋಗ್ಯವಾದ ದಿನವಾಗಿದೆ. ಸಂಗಾತಿಯು ನಿಮ್ಮೊಂದಿಗೆ ಉತ್ತಮ ಕ್ಷಣವನ್ನು ಕಳೆಯಲಿದ್ದಾರೆ.

ಕಟಕ : ರಾಜಕೀಯ ವಿರೋಧಿಗಳಿಂದ ಕಾಟವನ್ನು ಎದುರಿಸುವಿರಿ. ಕುಟುಂಬಕ್ಕೆಂದೇ ಸಮಯ ಮೀಸಲಿಟ್ಟರೆ ಮಾತ್ರ ವೈಯಕ್ತಿಕ ಜೀವನವು ಸಂತಸಮಯವಾಗಿ ಇರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ತಕ್ಕ ಯಶಸ್ಸಿದೆ.

ಸಿಂಹ : ಹೊಸ ಅವಕಾಶಗಳು ನಿಮ್ಮನ್ನು ಅರಸಿ ಬರಲಿದೆ. ಆದರೆ ಯಾವುದೇ ಕೆಲಸದಲ್ಲೂ ಅತಿಯಾದ ಆತುರ ಕೂಡ ಒಳ್ಳೆಯದಲ್ಲ. ಇದರಿಂದ ನೀವೇ ಮುಂದೆ ಪಶ್ಚಾತಾಪಕ್ಕೆ ಒಳಗಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಕಡಿಮೆಯಾಗಲಿದೆ. ಇದರಿಂದ ನಿಮಗೆ ಮಾನಸಿಕವಾಗಿ ಕುಗ್ಗಿದಂತೆ ಭಾಸವಾಗಲಿದೆ.

ಕನ್ಯಾ : ತಂದೆಯ ಮಾರ್ಗದರ್ಶನದಿಂದ ವ್ಯವಹಾರದಲ್ಲಿ ಒಳ್ಳೆಯ ಲಾಭವನ್ನು ಗಳಿಸಲಿದ್ದೀರಿ. ವಿದ್ಯಾರ್ಥಿಗಳ ಕಠಿಣ ಅಭ್ಯಾಸಕ್ಕೆ ಜಯವಿದೆ. ಕುಟುಂಬದಲ್ಲಿನ ಸಂತೋಷವನ್ನು ಹಾಳು ಮಾಡುವಂತ ಸುದ್ದಿಯೊಂದು ಕಿವಿಗೆ ಬಂದಪ್ಪಳಿಸಲಿದೆ.

ತುಲಾ : ಧಾರ್ಮಿಕ ಕಾರ್ಯಕ್ಕೆ ಹಣವನ್ನು ಖರ್ಚು ಮಾಡಲಿದ್ದೀರಿ. ಕಿರಿಯ ಪುತ್ರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಆಸ್ತಿ ವ್ಯವಹಾರದಲ್ಲಿ ನಿಮಗೆ ಇಂದು ಲಾಭವಿದೆ. ಮನೆಯ ನವೀಕರಣ ಕಾರ್ಯವನ್ನು ಮಾಡಲಿದ್ದೀರಿ. ಅಂದುಕೊಂಡ ಕಾರ್ಯಗಳನ್ನು ಮಾಡಲು ವಿಘ್ನ ಎದುರಾಗುವ ಸಾಧ್ಯತೆ ಇದೆ.

ವೃಶ್ಚಿಕ : ವ್ಯವಹಾರ ಕ್ಷೇತ್ರದಲ್ಲಿ ಅದೃಷ್ಟ ಇಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಕಚೇರಿ ಕೆಲಸದಲ್ಲಿ ನಿಮ್ಮ ಯಶಸ್ಸನ್ನು ಕಾಣಲಾಗದ ವಿರೋಧಿಗಳು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಆದಷ್ಟು ಎಚ್ಚರವಾಗಿರಿ. ತಾಯಿಯ ಆರೋಗ್ಯ ಹದಗೆಡಲಿದೆ. ಇದರಿಂದ ನೀವು ಚಿಂತೆಗೆ ಒಳಗಾಗುವಿರಿ.

ಧನು : ಸಂಬಂಧಿಗಳ ಜೊತೆ ಹಲವು ವರ್ಷಗಳ ಹಿಂದೆ ಮುರಿದುಬಿದ್ದಿದ್ದ ಸಂಬಂಧವು ಇಂದು ಮತ್ತೆ ಹಸನಾಗಲಿದೆ. ವಿದ್ಯಾರ್ಥಿಗಳಿಗೆ ಯಾವುದೇ ಕಾರ್ಯದಲ್ಲಿ ಅಡಚಣೆ ಇರುವುದಿಲ್ಲ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಸಂಗಾತಿಯ ಬೆಂಬಲವಿದೆ.

ಮಕರ : ಮುಂದೆ ಚೆನ್ನಾಗಿದ್ದು ಬೆನ್ನ ಹಿಂದೆ ಚೂರಿ ಹಾಕುವ ಜನರ ವಿರುದ್ಧ ಎಚ್ಚರಿಕೆಯಿಂದಿರಿ. ಕುಟುಂಬದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ಅನಿವಾರ್ಯತೆ ಇದೆ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ. ಸಹೋದರರಿಂದ ಆರ್ಥಿಕ ಸಹಾಯ ಪಡೆಯಲಿದ್ದೀರಿ.

ಕುಂಭ : ಭವಿಷ್ಯದ ಬಗ್ಗೆ ಸಂಗಾತಿಯ ಜೊತೆ ಚರ್ಚೆ ನಡೆಸಲಿದ್ದೀರಿ. ಕಚೇರಿಯಲ್ಲಿಂದು ನಿಮಗೆ ಹೊಸ ಜವಾಬ್ದಾರಿಗಳು ಸಿಗಲಿದೆ. ವ್ಯವಹಾರ ಲೋಕದಲ್ಲಿ ಆದಷ್ಟು ತಾಳ್ಮೆಯಿಂದಿರಿ. ದೈನಂದಿನ ವೆಚ್ಚ ಹೆಚ್ಚಲಿದೆ. ವೈವಾಹಿಕ ಜೀವನದಲ್ಲಿ ನೆಮ್ಮದಿಯಿದೆ.

ಮೀನ: ನಿಮ್ಮ ಸೋಮಾರಿತನದಿಂದಾಗಿ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶವನ್ನು ಕಳೆದುಕೊಳ್ಳುವಿರಿ. ವ್ಯವಹಾರ ಲೋಕದಲ್ಲಿ ಇರುವವರಿಗೆ ಇಂದು ಲಾಭವಿದೆ. ಅನಗತ್ಯ ಖರ್ಚು ಒಳ್ಳೆಯದಲ್ಲ. ವಿದ್ಯಾರ್ಥಿಗಳಿಗೆ ಇಂದು ಓದಿನಲ್ಲಿ ಹಿನ್ನಡೆಯಾಗಲಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read