ಈ ರಾಶಿಯವರಿಗಿಂದು ಕನಸು ನನಸಾಗಲಿದೆ

ಮೇಷ : ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಹಣಕಾಸಿನ ವಿಚಾರದಲ್ಲಿಯೂ ನಿಮಗಿದು ಉತ್ತಮ ದಿನ. ಬಹುದಿನಗಳಿಂದ ಕಾಣುತ್ತಿದ್ದ ಕನಸೊಂದು ನನಸಾಗಲಿದೆ. ಮಾನಸಿಕವಾಗಿ ನೆಮ್ಮದಿ ಇದೆ.

ವೃಷಭ : ಕೆಲವು ವಿಚಾರಗಳಲ್ಲಿ ನಷ್ಟ ತಲೆದೋರಬಲ್ಲದು. ಸಂಗಾತಿಯಿಂದ ಉತ್ತಮ ಸಲಹೆಗಳನ್ನ ಪಡೆಯಲಿದ್ದೀರಿ. ಉದ್ಯೋಗಸ್ಥರಿಗೆ ಉತ್ತಮ ದಿನವಾಗಲಿದೆ. ವಿನಾಕಾರಣ ಇನ್ನೊಬ್ಬರ ಮೇಲೆ ಸಂಶಯ ತಾಳಬೇಡಿ.

ಮಿಥುನ : ಕಚೇರಿ ಕೆಲಸದಲ್ಲಿ ಕಿರಿಕಿರಿ ಇರಲಿದೆ. ಪೋಷಕರು ನಿಮ್ಮ ಬಗ್ಗೆ ಹೆಮ್ಮೆ ಪಡಲಿದ್ದಾರೆ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇದೆ. ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗೋ ಸಾಧ್ಯತೆ ಇರೋದ್ರಿಂದ ಕಾಳಜಿಯಿಂದಿರಿ.

ಕಟಕ : ಹಣಕಾಸಿನ ವಿಚಾರದಲ್ಲಿ ನಿಮಗಿದು ಉತ್ತಮ ದಿನವಾಗಿರಲಿದೆ. ಸಾಮಾಜಿಕ ಜೀವನದಲ್ಲಿ ಗೌರವ ಪಡೆಯಲಿದ್ದೀರಿ. ಹಿಡಿದ ಕೆಲಸವನ್ನ ಮಾಡಿಯೇ ತೀರುವ ನಿಮ್ಮ ಗುಣ ನಿಮ್ಮನ್ನ ಕಾಪಾಡಲಿದೆ. ಪೋಷಕರೊಂದಿಗೆ ಅನಗತ್ಯ ವಾದ ಬೇಡ.

ಸಿಂಹ : ಖಾಸಗಿ ಕಂಪನಿಯ ನೌಕರರು ತಮ್ಮ ಕಾರ್ಯವಿಧಾನವನ್ನ ಬದಲಾವಣೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ದೂರ ಪ್ರಯಾಣ ಮಾಡೋದು ಒಳ್ಳೆಯದಲ್ಲ. ಬಂಧುಗಳೊಂದಿಗೆ ಆಸ್ತಿ ವಿಚಾರವಾಗಿ ಮೂಡಿದ್ದ ವೈಮನಸ್ಸು ನಿವಾರಣೆಯಾಗಲಿದೆ.

ಕನ್ಯಾ: ಪ್ರಯತ್ನದಲ್ಲಿ ಯಶಸ್ಸನ್ನ ಕಾಣಲಿದ್ದೀರಿ. ನೌಕರಿಯನ್ನ ಬದಲಾವಣೆ ಮಾಡುವ ಸಂದರ್ಭ ಎದುರಾಗಬಹುದು. ಹಿರಿಯರ ಆರೋಗ್ಯದ ಮೇಲೆ ಕಾಳಜಿ ವಹಿಸಿ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಸೂಚನೆ ಸಿಗಲಿದೆ.

ತುಲಾ : ಕಷ್ಟದಲ್ಲಿ ನಿಮ್ಮ ಸಹಾಯಕ್ಕೆ ಧಾವಿಸಿದವರ ಜೊತೆ ನಿಷ್ಠೆಯಿಂದಿರಿ. ಉದ್ಯಮಿಗಳಿಗೆ ಇಂದು ಶುಭದಿನ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಎಲ್ಲರ ಮಾತಿಗೂ ಕಿವಿಗೊಟ್ಟಲ್ಲಿ ನಿಮ್ಮ ನೆಮ್ಮದಿಯನ್ನ ನೀವೇ ಕೈಯಾರೆ ಹಾಳು ಮಾಡಿಕೊಳ್ತಿರಾ ಅನ್ನೋದನ್ನ ಮರೆಯಬೇಡಿ.

ವೃಶ್ಚಿಕ : ಇಂದಿನ ದಿನ ನಿಮಗೆ ಮಿಶ್ರ ಫಲ ನೀಡಲಿದೆ. ಕಚೇರಿಯಲ್ಲಿ ಪ್ರತಿಸ್ಪರ್ಧಿಗಳು ನಿಮ್ಮನ್ನ ಹಿಮ್ಮೆಟ್ಟಿಸುವ ಸಾಧ್ಯತೆ ಇದೆ. ಸಿಟ್ಟಿನ ಕೈಗೆ ಬುದ್ಧಿಕೊಟ್ಟು ಪತ್ನಿ ಜೊತೆ ಅನವಶ್ಯಕ ಜಗಳ ಮಾಡುತ್ತೀರಾ. ಉದ್ಯಮದಲ್ಲಿ ಇರುವವರಿಗೆ ಸಾಮಾನ್ಯ ದಿನವಾಗಿರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ.

ಧನು : ನಿಮ್ಮ ಶಾಂತ ಸ್ವಭಾವದಿಂದ ಕಷ್ಟದ ಪರಿಸ್ಥಿತಿಯೂ ಬೆಣ್ಣೆಯಂತೆ ಕರಗಲಿದೆ. ಪತಿಯ ಅನಿರೀಕ್ಷಿತ ಉಡುಗೊರೆ ನೋಡಿ ನೀವು ಖುಷಿಯಾಗುತ್ತೀರಾ. ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರಾಜಕಾರಣಿಗಳಿಗೆ ಇದು ಉತ್ತಮ ದಿನವಾಗಿರಲಿದೆ.

ಮಕರ : ನವವಿವಾಹಿತರಿಗೆ ಇದು ಉತ್ತಮ ದಿನವಾಗಿದೆ. ಜವಳಿ ಉದ್ಯಮಿಗಳಿಗೆ ಲಾಭ ಕಾದಿದೆ. ನಿಮ್ಮ ಪ್ರಾಮಾಣಿಕತೆ ಎಲ್ಲರ ಮನಸ್ಸನ್ನ ಗೆಲ್ಲಲಿದೆ. ಪ್ರಯತ್ನಂ ಸರ್ವ ಸಿದ್ದಿ ಸಾಧನಂ ಎಂಬ ಮಾತು ಸದಾ ನಿಮ್ಮ ತಲೆಯಲ್ಲಿರಲಿ.

ಕುಂಭ : ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಕಂಡು ಬರಲಿದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಅಹಂಕಾರಿ ಎಂಬ ಪಟ್ಟ ಸಿಗಬಹುದು. ವೃತ್ತಿ ಕ್ಷೇತ್ರದಲ್ಲಿ ಕೆಲ ತೊಡಕುಗಳು ಎದುರಾಗಲಿದೆ.

ಮೀನ : ದಿನದ ಆರಂಭ ಕೊಂಚ ಕಿರಿಕಿರಿ ಎನಿಸಿದರೂ ನಂತರದಲ್ಲಿ ಯಾವುದೇ ಸಮಸ್ಯೆ ಇರೋದಿಲ್ಲ. ವ್ಯಾಪಾರಿಗಳಿಗೆ ಇದು ಉತ್ತಮ ದಿನವಾಗಿದೆ. ಹೂಡಿಕೆ ಮಾಡಬೇಕು ಎಂದುಕೊಂಡವರು ಇಂದು ತಮ್ಮ ಮುಂದಿನ ಹೆಜ್ಜೆ ಇಡಬಹುದಾಗಿದೆ. ಮಕ್ಕಳಿಗೆ ಉತ್ತಮ ಅವಕಾಶವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read