ಈ ರಾಶಿಯವರಿಗಿಂದು ಇರಲಿದೆ ಅನುಕೂಲಕರ ಸಮಯ

ಮೇಷ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಮಧ್ಯಾಹ್ನದ ನಂತರ ಹೊಸ ಕಾರ್ಯ ಆರಂಭಿಸಬೇಡಿ. ಮಾತು ಮತ್ತು ವ್ಯವಹಾರದ ಮೇಲೆ ಹಿಡಿತವಿರಲಿ. ಕೋಪ ಮತ್ತು ದ್ವೇಷವನ್ನು ಕಡಿಮೆ ಮಾಡಿಕೊಳ್ಳಿ.

ವೃಷಭ ರಾಶಿ

ಮಧ್ಯಾಹ್ನದ ನಂತರ ಭರಪೂರ ಮನರಂಜನೆ ಸಿಗಲಿದೆ. ಪ್ರೀತಿಪಾತ್ರರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಉಡುಪು ಹಾಗೂ ಗೃಹೋಪಯೋಗಿ ವಸ್ತುಗಳಿಗಾಗಿ ಹಣ ಖರ್ಚಾಗಲಿದೆ. ಗೌರವ-ಪ್ರತಿಷ್ಠೆ ವೃದ್ಧಿಸಲಿದೆ.

ಮಿಥುನ ರಾಶಿ

ದೇಹ ಮತ್ತು ಮನಸ್ಸಿಗೆ ಅಸ್ವಸ್ಥತೆಯ ಅನುಭವವಾಗಲಿದೆ. ಹೊಸ ಕಾರ್ಯ ಆರಂಭಕ್ಕೆ ಯೋಜನೆ ರೂಪಿಸಲಿದ್ದೀರಿ. ಆದ್ರೆ ಕೆಲಸ ಆರಂಭಿಸಬೇಡಿ. ಮಾನಹಾನಿ ಸಂಭವಿಸುವ ಸಾಧ್ಯತೆಯೂ ಇದೆ.

ಕರ್ಕ ರಾಶಿ

ಭೂಮಿ ಮತ್ತು ವಾಹನಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಮಧ್ಯಾಹ್ನದ ನಂತರ ಸುಖ-ಶಾಂತಿಯ ಯೋಗವಿದೆ. ಸ್ನೇಹಿತರ ಸಹಕಾರ ದೊರೆಯುತ್ತದೆ. ಸಂಬಂಧಿಗಳೊಂದಿಗೆ ಮಹತ್ವದ ವಿಷಯ ಚರ್ಚಿಸಲಿದ್ದೀರಿ.

ಸಿಂಹ ರಾಶಿ

ಹೊಸ ಕಾರ್ಯ ಆರಂಭಿಸಲು ಶುಭ ಸಮಯ. ಹೂಡಿಕೆದಾರರಿಗೆ ಇಂದು ಶುಭ ದಿನ. ಮಧ್ಯಾಹ್ನದ ನಂತರ ಸಹನೆಯಿಂದಿರಿ. ಮಾನಸಿಕ ಹತಾಶೆಯ ಅನುಭವವಾಗಬಹುದು. ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಮಧ್ಯಾಹ್ನದ ನಂತರ ಸಮಯ ಅನುಕೂಲಕರವಾಗಿದೆ. ಸಹೋದರರು, ಸಂಬಂಧಿಗಳೊಂದಿಗೆ ಮಹತ್ವದ ವಿಷಯ ಚರ್ಚಿಸಲಿದ್ದೀರಿ.

ತುಲಾ ರಾಶಿ

ಬಟ್ಟೆ, ಅಲಂಕಾರಿಕ ಸಾಮಗ್ರಿ ಮತ್ತು ಮನರಂಜನೆಗಾಗಿ ಹಣ ಖರ್ಚಾಗಲಿದೆ. ಮಧ್ಯಾಹ್ನದ ನಂತರ ಮನಸ್ಸಿನಲ್ಲಿ ಸಂದಿಗ್ಧತೆ ಉಂಟಾಗಬಹುದು. ಇದರಿಂದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ವಾದ-ವಿವಾದಗಳಿಂದ ದೂರವಿರಿ.

ವೃಶ್ಚಿಕ ರಾಶಿ

ಮಧ್ಯಾಹ್ನದ ನಂತರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೀರಿ. ಆರ್ಥಿಕ ವಿಷಯದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ. ಕೈಗೊಂಡ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ.

ಧನು ರಾಶಿ

ಉದ್ಯೋಗದಲ್ಲಿ ಪದೋನ್ನತಿ ಯೋಗವಿದೆ. ಮಿತ್ರರೊಂದಿಗೆ ಸುತ್ತಾಡಲಿದ್ದೀರಿ. ವ್ಯಾಪಾರಿಗಳಿಗೆ ಲಾಭವಿದೆ. ಅಸಮಂಜಸ ಕೆಲಸ ಮತ್ತು ವರ್ತನೆ ನಿಮ್ಮನ್ನು ಸಮಸ್ಯೆಯಲ್ಲಿ ಸಿಲುಕಿಸಬಹುದು. ಅಧಿಕ ಯೋಚನೆಯಿಂದ ಮನಸ್ಸು ವಿಚಲಿತಗೊಳ್ಳಬಹುದು.

ಮಕರ ರಾಶಿ

ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಮಧ್ಯಾಹ್ನದ ನಂತರ ಮಿತ್ರರನ್ನು ಭೇಟಿಯಾಗಲಿದ್ದೀರಿ. ಸುಂದರ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಆದಾಯ ವೃದ್ಧಿಸಲಿದೆ. ವ್ಯಾಪಾರಿಗಳಿಗೆ ಲಾಭವಿದೆ.

ಕುಂಭ ರಾಶಿ

ಇಂದು ಹೊಸ ಕಾರ್ಯವನ್ನು ಪ್ರಾರಂಭಿಸಬಹುದು. ದೀರ್ಘ ಪ್ರಯಾಣ ಅಥವಾ ಧಾರ್ಮಿಕ ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಮೀನ ರಾಶಿ

ಮಾತು ಮತ್ತು ವರ್ತನೆ ಬಗ್ಗೆ ಸಂಯಮ ವಹಿಸಿ. ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳಿತು. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ರಹಸ್ಯ ವಿದ್ಯೆಗಳ ಬಗ್ಗೆ ತಿಳಿದುಕೊಳ್ಳಲು ಸಮಯ ಅನುಕೂಲಕರವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read