ಈ ರಾಶಿಯವರನ್ನು ಇಂದು ಹುಡುಕಿಕೊಂಡು ಬರಲಿದೆ ಉತ್ತಮ ಅವಕಾಶ

 

ಮೇಷ : ಯಾರದ್ದೇ ಜಗಳದಲ್ಲಿ ಅನವಶ್ಯಕವಾಗಿ ಮೂಗು ತೂರಿಸಬೇಡಿ. ಇದರಿಂದ ನೀವು ಭಾರೀ ತೊಂದರೆಗೆ ಸಿಲುಕಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಷೇರು ಮಾರುಕಟ್ಟೆಯಲ್ಲಿ ಪ್ರಗತಿ ಕಾಣಲಿದ್ದೀರಿ. ಹೊಸ ಉದ್ಯಮ ಆರಂಭಕ್ಕೆ ಮುಂದಡಿ ಇಡಲಿದ್ದೀರಿ.

ವೃಷಭ : ಶತ್ರುಗಳು ನಿಮ್ಮ ಎದುರು ಮಂಡಿಯೂರಲಿದ್ದಾರೆ. ಅಪರಿಚಿತರಿಂದ ಸಹಾಯವನ್ನು ಪಡೆಯಲಿದ್ದೀರಿ. ನಿಮ್ಮ ಕಾರ್ಯಕ್ಷಮತೆಯು ಮೇಲಾಧಿಕಾರಿಗಳ ಗಮನಕ್ಕೆ ಬರಲಿದೆ. ಕಲಾವಿದರಿಗೆ ಉತ್ತಮ ಅವಕಾಶ ಸಿಗಲಿದೆ. ಪೀಠೋಪಕರಣಗಳ ಖರೀದಿ ಮಾಡಲಿದ್ದೀರಿ.

ಮಿಥುನ: ಖರ್ಚಿನಲ್ಲಿ ಹಿಡಿತ ಸಾಧಿಸದ ಹೊರತು ಆರ್ಥಿಕ ಸ್ಥಿತಿ ಸುಧಾರಣೆ ಇಲ್ಲ, ಸ್ತ್ರೀಯರ ಪಾಲಿಗೆ ಇದು ಲಾಭದ ದಿನವಾಗಿದೆ. ಸಂಗಾತಿಯು ನಿಮಗಾಗಿ ಬೆಲೆ ಬಾಳುವ ಉಡುಗೊರೆ ಖರೀದಿಸಲಿದ್ದಾರೆ. ನಿರ್ಮಾಣ ಹಂತದಲ್ಲಿರುವ ಮನೆಯ ಕಾರ್ಯ ಪೂರ್ಣಗೊಳ್ಳಲಿದೆ. ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ.

ಕಟಕ : ವಿದ್ಯಾರ್ಥಿಗಳು ಓದಿನ ಕಡೆಗೆ ಶ್ರದ್ಧೆ ತೋರಿಸುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ನೀವು ಅಂದುಕೊಂಡ ಗುರಿಯನ್ನು ಸಾಧಿಸಲಾರಿರಿ. ಉದ್ಯಮದಲ್ಲಿ ನಿರೀಕ್ಷಿತ ಲಾಭ ಹೊಂದಲಿದ್ದೀರಿ. ಉತ್ತಮ ಅವಕಾಶವೊಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ.

ಸಿಂಹ : ನಿಮ್ಮ ಕನಸಿನ ಹುದ್ದೆಯನ್ನು ಅಲಂಕರಿಸಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಕೃಷಿಕರಿಗೆ ಇದು ಲಾಭದಾಯಕ ದಿನವಾಗಿದೆ. ಮನೆಯಲ್ಲಿ ವಾಸ್ತು ದೋಷ ಪರಿಹಾರ ಮಾಡಲು ಓಡಾಡುವಿರಿ. ಆಸ್ತಿ ವಿಚಾರದಲ್ಲಿ ಮನಸ್ತಾಪ ಉಂಟಾಗಲಿದೆ.

ಕನ್ಯಾ: ಕೌಟುಂಬಿಕ ಜೀವನವು ಒತ್ತಡಮಯವಾಗಲಿದೆ. ಸಂಗಾತಿ ನಿಮ್ಮ ಮಾತನ್ನು ಕೇಳದೇ ಇರಬಹುದು. ಸಂಗಾತಿ ದರ್ಪದ ಮಾತು ನಿಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಲಿದೆ. ತಾಯಿಯ ಅನಾರೋಗ್ಯ ಸಮಸ್ಯೆಯು ನಿಮ್ಮ ಇಂದಿನ ಸಂತೋಷವನ್ನು ಹಾಳು ಮಾಡಲಿದೆ.  ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡುವಿರಿ.

ತುಲಾ : ಆರ್ಥಿಕ ಜೀವನದಲ್ಲಿ ಸುಧಾರಣೆ ಕಂಡು ಬರಲಿದೆ. ದುಡಿಮೆ ನ್ಯಾಯದ ಮಾರ್ಗದಲ್ಲಿ ಇರುವಂತೆ ನೋಡಿಕೊಳ್ಳಿ. ಮೋಸದ ಕೆಲಸ ಮಾಡುವಾಗ ದೇವರು ನೋಡುತ್ತಿರುತ್ತಾನೆ ಎಂಬ ಭಯವಿರಲಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ.

ವೃಶ್ಚಿಕ : ಕುಟುಂಬ ಸದಸ್ಯರ ಜೊತೆ ಸೇರಿ ಕುಲ ದೇವರ ದರ್ಶನ ಮಾಡುವ ಬಗ್ಗೆ ಚರ್ಚೆ ಮಾಡಲಿದ್ದೀರಿ. ಆಸ್ತಿ ವಿಚಾರವಾಗಿ ದಾಯಾದಿ ಕಲಹ ಬೂದಿ ಮುಚ್ಚಿದ ಕೆಂಡದಂತೆ ಇರಲಿದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡಲಿದ್ದೀರಿ. ಸಂಗಾತಿ ಮೇಲೆ ಅನಗತ್ಯ ಅನುಮಾನ ಬೇಡ.

ಧನು : ಸಹೋದ್ಯೋಗಿಗಳ ಜೊತೆ ಅತಿಯಾದ ಸಲುಗೆ ಸಲ್ಲದು. ಪುತ್ರ ಮಮಕಾರದಿಂದ ಕುರುಡರಾಗಿದ್ದೀರಿ. ಪ್ರತ್ಯಕ್ಷ ಕಂಡರೂ ಪರಿಸ್ಥಿತಿಯನ್ನು ಅವಲೋಕಿಸಿ ನೋಡಿ. ಕಠಿಣ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದೀತು.

ಮಕರ : ಉದ್ಯಮದಲ್ಲಿ ಸಹವರ್ತಿಗಳ ಜೊತೆ ಭಿನ್ನಾಭಿಪ್ರಾಯ ಮೂಡಲಿದೆ. ರಾಜಕೀಯ ವ್ಯಕ್ತಿಗಳಿಗೆ ಸಾರ್ವಜನಿಕ ಜೀವನದಲ್ಲಿ ಮನ್ನಣೆ ಸಿಗಲಿದೆ. ಮನೆಯಲ್ಲಿ ಆಭರಣ ಖರೀದಿ ಮಾಡಲಿದ್ದೀರಿ. ಪೋಷಕರ ಜೊತೆ ವಾದಕ್ಕೆ ಇಳಿಯದಿರಿ.

ಕುಂಭ : ಕಚೇರಿಯಲ್ಲಿ ನಿಮ್ಮ ಕಾಲೆಳೆಯುವವರಿದ್ದಾರೆ. ಹೆಜ್ಜೆ ಇಡುವ ಮುನ್ನ ಜಾಗ್ರತೆ ಇರಲಿ. ಈ ದಿನ ನಿಮಗೆ ಅಷ್ಟೇನು ಉತ್ತಮವಾಗಿ ಇರೋದಿಲ್ಲ. ಮನೆಯಲ್ಲಿ ನಡೆಯಬೇಕಿದ್ದ ಶುಭ ಕಾರ್ಯ ಸ್ಥಗಿತಗೊಳ್ಳಲಿದೆ. ಹೋಟೆಲ್​ ಉದ್ಯಮಿಗಳಿಗೆ ತಕ್ಕ ಮಟ್ಟಿಗೆ ಲಾಭವಿದೆ.

ಮೀನ : ಈವರೆಗೆ ನೀವು ಅನುಭವಿಸಿದ ಸಮಸ್ಯೆಗಳು ಕೊನೆಗೊಳ್ಳುವ ಕಾಲ ಇದಾಗಿದೆ. ವ್ಯಾವಹಾರಿಕ ಹಿನ್ನಡೆ, ಆರೋಗ್ಯ ಸಮಸ್ಯೆಯಿಂದ ಮುಕ್ತಿ ಕಾಣಲಿದ್ದೀರಿ. ಪೌಷ್ಟಿಕ ಆಹಾರ ಸೇವನೆ ಮಾಡಿ. ಸಮಸ್ಯೆ ಬಂದ ಮೇಲೆ ಒದ್ದಾಡೋದಕ್ಕಿಂತ ಮೊದಲೇ ಮುಂಜಾಗ್ರತೆ ವಹಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read