ಈ ರಾಶಿಯ ಸ್ತ್ರೀಯರಿಗೆ ಕಾದಿದೆ ಇಂದು ಧನಲಾಭ

 

ಮೇಷ : ಕಚೇರಿ ಕೆಲಸಕ್ಕೆಂದು ವಿದೇಶ ಪ್ರಯಾಣ ಕೈಗೊಂಡ ನೀವು ಅತಿಯಾಗಿ ದಣಿಯಲಿದ್ದೀರಿ. ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ನಿಮಗಿಂತ ಕೆಳ ಹಂತದಲ್ಲಿ ಕೆಲಸ ಮಾಡುವವರ ಮೇಲೆ ದರ್ಪ ತೋರಬೇಡಿ.

ವೃಷಭ: ಇಂದು ನೀವು ಪ್ರಭಾವಿ ವ್ಯಕ್ತಿಗಳ ಸಂಪರ್ಕವನ್ನು ಸಾಧಿಸಲಿದ್ದೀರಿ. ಈ ವ್ಯಕ್ತಿಯು ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಡಲಿದ್ದಾರೆ. ವೃತ್ತಿ ಜೀವನದಲ್ಲಿ ಯಶಸ್ಸು ಕಾದಿದೆ.

ಮಿಥುನ : ಉದ್ಯಮದಲ್ಲಿ ನಿಮಗೆ ಉತ್ತಮ ಫಲಿತಾಂಶ ಸಿಗಲಿದೆ. ಸಂಬಳಕ್ಕೆ ಕೆಲಸ ಮಾಡುವವರು ಇಂದು ಹೆಚ್ಚಿನ ಒತ್ತಡ ಎದುರಿಸಬೇಕಾದೀತು. ಮನೆಯಲ್ಲಿ ಚಿನ್ನ ಖರೀದಿ ಮಾಡಲಿದ್ದಾರೆ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಭಾಗ್ಯವಿದೆ.

ಕಟಕ : ವಿದ್ಯಾರ್ಥಿಗಳ ಪ್ರಯತ್ನಗಳು ಅವರ ಕೈ ಹಿಡಿಯಲಿದೆ. ಎಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ನಿಮ್ಮ ಸಂಸ್ಕಾರವನ್ನು ಮರೆಯಬೇಡಿ. ನಿಮ್ಮ ಅತಿಯಾದ ಕೋಪದಿಂದ ಸಂಗಾತಿಗೆ ನಿಮ್ಮ ಮೇಲೆ ಜಿಗುಪ್ಸೆ ಮೂಡಬಹುದು.

ಸಿಂಹ : ಸಾರ್ವಜನಿಕ ವಲಯದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಉದ್ಯಮದಲ್ಲಿ ನಿಮಗೆ ಆತ್ಮವಿಶ್ವಾಸ ಹೆಚ್ಚಲಿದೆ. ಭೂ ವಾಜ್ಯಗಳು ಸರಿ ಹೋಗಲಿವೆ. ನೀವು ಪಟ್ಟಿರುವ ಕನಸು ಈಡೇರುವ ಕಾಲ ಸನ್ನಿಹಿತವಾಗಲಿದೆ. ನೀವು ಅತಿಯಾದ ನಂಬಿದ ವ್ಯಕ್ತಿಯೇ ನಿಮಗೆ ನೋವುಂಟು ಮಾಡಬಹುದು.

ಕನ್ಯಾ : ವೈದ್ಯಕೀಯ ರಂಗದಲ್ಲಿ ಇರುವವರು ಇಂದು ಮೆಚ್ಚುಗೆ ಗಳಿಸಲಿದ್ದಾರೆ. ಗೆಳೆಯರ ಗುಂಪಿನಲ್ಲಿ ನಿಮಗೆ ಡಿಮ್ಯಾಂಡ್​ ಹೆಚ್ಚಲಿದೆ. ಉತ್ತಮ ಜನರ ಸಂಪರ್ಕ ಸಾಧಿಸಲಿದ್ದೀರಿ. ಸಂಗಾತಿಯು ತಮ್ಮ ತಪ್ಪಿಗೆ ನಿಮ್ಮಲ್ಲಿ ಕ್ಷಮೆ ಯಾಚಿಸಲಿದ್ದಾರೆ.

ತುಲಾ : ಏನೋ ಮಾಡಲು ಹೋಗಿ ಇರೋದನ್ನೂ ಕಳೆದುಕೊಳ್ಳಬೇಡಿ. ಮೂಗಿನ ನೇರಕ್ಕೆ ಯೋಚನೆ ಮಾಡೋದನ್ನು ನಿಲ್ಲಿಸಿ. ಇದರಿಂದ ನಿಮಗೂ ನಷ್ಟವಿದೆ. ನಿಮ್ಮ ಆದಾಯ ಹೆಚ್ಚಾಗಲಿದೆ. ಹಣ ಸಂಪಾದನೆಗೆ ಹೊಸ ಮಾರ್ಗ ಹುಡುಕಲಿದ್ದೀರಿ.

ವೃಶ್ಚಿಕ : ಸಂಗಾತಿಯ ನಿರ್ಲಕ್ಷ್ಯ ಬುದ್ಧಿಯು ನಿಮಗೆ ಹತಾಶೆ ಮೂಡುವಂತೆ ಮಾಡಲಿದೆ. ಇದು ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕಿಗೆ ಕಾರಣವಾಗಬಹುದು. ಮಕ್ಕಳ ಓದಿನ ಖರ್ಚಿಗಾಗಿ ಇಂದು ಹೆಚ್ಚು ಹಣ ಖರ್ಚಾಗಲಿದೆ. ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಪ್ರಗತಿ ಇದೆ.

ಧನು : ಅಧಿಕಾರಿಗಳೊಂದಿಗೆ ಯಾವುದೇ ಕಾರಣಕ್ಕೂ ಘರ್ಷಣೆಗೆ ಇಳಿಯಬೇಡಿ. ಹಾಗಾದಲ್ಲಿ ಮಾತ್ರ ನಿಮಗೆ ಪ್ರಗತಿ ಇದೆ. ನಿಮ್ಮ ಹಿತಶತ್ರುಗಳು ನಿಮ್ಮ ವಿರುದ್ಧ ಕತ್ತಿ ಮಸೆಯಲಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶ ಸಿಗಲಿದೆ.

ಮಕರ : ನಿಮ್ಮ ಇಷ್ಟಾರ್ಥಗಳು ಒಂದೊಂದಾಗಿಯೇ ನೆರವೇರಲಿದೆ. ವ್ಯಾಪಾರಿಗಳಿಗೆ ಇಂದು ಲಾಭವಿದೆ. ವಿದೇಶಕ್ಕೆ ಹೋಗಬೇಕು ಎಂಬ ನಿಮ್ಮ ಕನಸು ನನಸಾಗುವ ದಿನಗಳು ಹೆಚ್ಚು ದೂರವಿಲ್ಲ.

ಕುಂಭ : ಉದ್ಯಮ ವಿಸ್ತರಣೆ ಮಾಡುವ ಬಗ್ಗೆ ಪೋಷಕರೊಂದಿಗೆ ಚರ್ಚೆ ನಡೆಸುವಿರಿ. ಮನೆಯಲ್ಲಿ ನಿಮ್ಮ ಮದುವೆ ವಿಚಾರದ ಪ್ರಸ್ತಾಪ ಕೇಳಿ ಬರಲಿದೆ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡಲಿದ್ದೀರಿ. ಆರೋಗ್ಯದ ಮೇಲೆ ಜಾಗ್ರತೆ ಇರಲಿ.

ಮೀನ : ಯಾರೋ ತಪ್ಪು ಮಾಡ್ತಿದ್ದಾರೆ ಎಂದು ನೀವೂ ಮಾಡಿದರೆ ನಿಮಗೂ ಅವರಿಗೂ ವ್ಯತ್ಯಾಸ ಇರೋದಿಲ್ಲ. ನಿಮ್ಮ ಆತ್ಮಸಾಕ್ಷಿಗೆ ಧಕ್ಕೆ ಉಂಟಾಗುವಂತಹ ಘಟನೆಗಳು ಕಚೇರಿಯಲ್ಲಿ ನಡೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read