ಈ ದೇಶಗಳಲ್ಲಿ ಕೋಳಿ ಮೊಟ್ಟೆ ಅತ್ಯಂತ ದುಬಾರಿ, ಬೆಚ್ಚಿ ಬೀಳಿಸುತ್ತೆ ಮೊಟ್ಟೆಯ ಬೆಲೆ…..!

ಜಗತ್ತಿನ ಮೂಲೆ ಮೂಲೆಯಲ್ಲೂ ಕೋಳಿಮೊಟ್ಟೆಗಳನ್ನು ಸೇವನೆ ಮಾಡಲಾಗುತ್ತದೆ. ಹಾಗಂತ ಮೊಟ್ಟೆಗಳ ಬೆಲೆ ಎಲ್ಲಾ ದೇಶಗಳಲ್ಲಿ ಒಂದೇ ತೆರನಾಗಿಲ್ಲ. ಕೆಲವು ದೇಶಗಳಲ್ಲಿ ಮೊಟ್ಟೆಗಳು ಬಹಳ ದುಬಾರಿ. ಅಲ್ಲಿನ ಬೆಲೆ ಕೇಳಿದ್ರೆ ಜನಸಾಮಾನ್ಯರು ಬೆಚ್ಚಿಬೀಳ್ತಾರೆ.

ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ಪ್ರತಿ ಕ್ರೇಟ್ ಮೊಟ್ಟೆಯ ಬೆಲೆಯನ್ನು ಡಾಲರ್‌ ಲೆಕ್ಕದಲ್ಲಿ ಹಂಚಿಕೊಂಡಿದೆ. ಅದರ ಪ್ರಕಾರ ವಿಶ್ವದಲ್ಲೇ ಅತ್ಯಂತ ದುಬಾರಿ ಮೊಟ್ಟೆ ಸಿಗೋದು ಸ್ವಿಡ್ಜರ್ಲೆಂಟ್‌ನಲ್ಲಿ. ಮೊಟ್ಟೆ ಅತ್ಯಂತ ಅಗ್ಗವಾಗಿ ಭಾರತದಲ್ಲಿ ದೊರೆಯುತ್ತದೆ.

ಸ್ವಿಡ್ಜರ್ಲೆಂಡ್‌ನಲ್ಲಿ ಮೊಟ್ಟೆ ತಿನ್ನಬೇಕಂದ್ರೆ ಭಾರೀ ಮೊತ್ತವನ್ನು ಖರ್ಚು ಮಾಡಬೇಕು. ಇಲ್ಲಿ ಒಂದು ಕ್ರೇಟ್ ಬೆಲೆ ಏಳು ಡಾಲರ್, ಅಂದರೆ ಸುಮಾರು 550 ರೂಪಾಯಿಗಿಂತಲೂ ಹೆಚ್ಚು.

ಒಂದು ಕ್ರೇಟ್‌ ಮೊಟ್ಟೆಯ ಬೆಲೆ ನ್ಯೂಜಿಲೆಂಡ್‌ನಲ್ಲಿ 5.43 ಡಾಲರ್, ಡೆನ್ಮಾರ್ಕ್‌ನಲ್ಲಿ 4.27 ಡಾಲರ್‌, ಉರುಗ್ವೆಯಲ್ಲಿ 4.07 ಡಾಲರ್‌, ಅಮೆರಿಕದಲ್ಲಿ 4.31 ಡಾಲರ್‌ ಇದೆ. ಈ ದೇಶಗಳಲ್ಲಿ ಭಾರತೀಯ ಕರೆನ್ಸಿ ಪ್ರಕಾರ ಕ್ರೇಟ್‌ಗೆ ಸುಮಾರು 350 ರೂಪಾಯಿ ಇದೆ.

ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ಕೋಳಿ ಮೊಟ್ಟೆ ಭಾರತದಲ್ಲಿ ಸಿಗುತ್ತದೆ. ಇಲ್ಲಿ ಒಂದು ಕ್ರೇಟ್ ಬೆಲೆ 0.94 ಡಾಲರ್ ಅಂದರೆ ಸುಮಾರು 78 ರೂಪಾಯಿ. ಒಂದು ಮೊಟ್ಟೆಗೆ ಸುಮಾರು 6 ರೂಪಾಯಿಯಷ್ಟಿದೆ.

ರಷ್ಯಾದಲ್ಲಿ ಮೊಟ್ಟೆಯ ಬೆಲೆ 1.01 ಡಾಲರ್‌, ಪಾಕಿಸ್ತಾನದಲ್ಲಿ 1.05 ಡಾಲರ್‌, ಇರಾನ್‌ನಲ್ಲಿ 1.15 ಡಾಲರ್‌ ಮತ್ತು ಬಾಂಗ್ಲಾದೇಶದಲ್ಲಿ 1.12 ಡಾಲರ್‌ ಇದೆ. ಇದರರ್ಥ ಈ ದೇಶಗಳಲ್ಲಿ ಭಾರತೀಯ ಕರೆನ್ಸಿ ಲೆಕ್ಕದಲ್ಲಿ ಮೊಟ್ಟೆಗಳ ಪ್ರತಿ ಕ್ರೇಟ್‌ಗೆ ಸುಮಾರು 100 ರೂಪಾಯಿ ಖರ್ಚು ಮಾಡಬೇಕಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read