ಈ ಚುನಾವಣೆ ಅಭಿವೃದ್ಧಿ ಹಾಗೂ ಪಾಪದ ಹಣದ ಮಧ್ಯೆ ನಡೆಯುತ್ತಿರುವ ಫೈಟ್; ಕಾಂಗ್ರೆಸ್ ವಿರುದ್ಧ ಸಚಿವ ವಿ.ಸೋಮಣ್ಣ ವಾಗ್ದಾಳಿ

ಬಿಜೆಪಿ ಮೇಲೆ ಮುನಿಸಿಕೊಂಡ ವಿ.ಸೋಮಣ್ಣ - Eesanje News

ಬೆಂಗಳೂರು: ಗೋವಿಂದರಾಜನಗರದಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸವೇ ಪಕ್ಷಕ್ಕೆ ಶ್ರೀರಕ್ಷೆಯಾಗಲಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಕಾಂಗ್ರೆಸ್ ನಿಂದ ನಿಂತಿರುವ ಅಪ್ಪ-ಮಗನ ಕೊಡುಗೆ ಶೂನ್ಯ. ಅಪ್ಪನೂ 15 ವರ್ಷ ಏನೂ ಮಾಡಿಲ್ಲ, ಮಗನೂ 9 ವರ್ಷ ಏನೂ ಮಾಡಿಲ್ಲ. ಈಗ ಮತ್ತೆ ಬಂದಿದ್ದಾರೆ. ಕಾಂಗ್ರೆಸ್ ಇಂತವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ ಎಂದು ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ವಿರುದ್ಧ ಸೋಮಣ್ಣ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಈ ಚುನಾವಣೆ ಅಭಿವೃದ್ಧಿ ಹಾಗೂ ಪಾಪದ ಹಣದ ಮಧ್ಯೆ ನಡೆಯುತ್ತಿದೆ. ಅಪ್ಪ-ಮಕ್ಕಳು ಸಾವಿರಾರು ಜನರಿಗೆ ವಂಚನೆ ಮಾಡಿದ್ದಾರೆ ತಾವರೆಕೆರೆಯಿಂದ ಹಿಡಿದು ದೊಡ್ಡಆಲದ ಮರದವರೆಗೂ ಹೋದರೆ ಇವರ ಬಣ್ಣ ಬಯಲಾಗುತ್ತದೆ. ಅಂತವರಿಗೆ ಕಾಂಗ್ರೆಸ್ ಮಣೆ ಹಾಕಿ ಅಭ್ಯರ್ಥಿಗಳನ್ನಾಗಿ ಮಾಡಿದೆ. ಕಾಂಗ್ರೆಸ್ ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read