‘ಈಗ ಮದುವೆಯಾಗಿ, ನಂತರ ಪಾವತಿಸಿ’; ಹೊಸ ಯೋಜನೆ ಜಾರಿ

ನವದೆಹಲಿ: ಈಗ ಖರೀದಿಸಿ, ನಂತರ ಪಾವತಿಸಿ ಆಯ್ಕೆಯು ನಿಮಗೆ ಹೊಸದೇನಾಗಿ ಇರಲಿಕ್ಕಿಲ್ಲ, ಅಂದರೆ ಮಾಸಿಕ ಕಂತಿನಲ್ಲಿ ದುಡ್ಡನ್ನು ತುಂಬುವ ಇಎಂಐ ಅವಕಾಶವನ್ನು ಇದು ಕಲ್ಪಿಸುತ್ತದೆ.

ಫೋನ್‌ಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ಇತರ ದೊಡ್ಡ ವಸ್ತುಗಳನ್ನು ಖರೀದಿ ಮಾಡುವ ಸಂದರ್ಭದಲ್ಲಿಯಾಗಿರಬಹುದು ಅಥವಾ ದೊಡ್ಡ ಪ್ರಮಾಣದ ಭಾರತೀಯ ವಿವಾಹ ಸಂಪ್ರದಾಯ ಮತ್ತು ಹೋಟೆಲ್ ವಸತಿ, ಅಡುಗೆ, ಅಲಂಕಾರಗಳು, ಆಭರಣಗಳು, ಉಡುಪುಗಳು, ಆಟೋಮೊಬೈಲ್‌ಗಳು, ದ್ವಿಚಕ್ರ ವಾಹನಗಳು ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ದುಬಾರಿ ವಸ್ತುಗಳ ಖರೀದಿ ಸಮಯದಲ್ಲಿ ಇಂಥ ವಹಿವಾಟು ಸಾಮಾನ್ಯ.

ಅಂಥದ್ದೇ ಒಂದು ಹೊಸ ಯೋಜನೆ ಈಗ ಶುರುವಾಗಿದೆ ಈಗ ಮದುವೆಯಾಗಿ, ನಂತರ ಪಾವತಿಸಿ ಎನ್ನುವ ಯೋಜನೆ ಇದಾಗಿದೆ. ಮದುವೆಯ ಸಂದರ್ಭದಲ್ಲಿ ಆಗುವ ಹೆಚ್ಚುವರಿ ಖರ್ಚನ್ನು ನಿಭಾಯಿಸಲು ಅನುಕೂಲವಾಗುವ ಯೋಜನೆ ಇದಾಗಿದೆ.

“ಭಾರತದಲ್ಲಿ ಅಂದಾಜು $4 ಟ್ರಿಲಿಯನ್ ಮಾರುಕಟ್ಟೆಯಿದ್ದು, ಇದರದಲ್ಲಿ ಮದುವೆಗಳು ನಾಲ್ಕನೇ-ದೊಡ್ಡ ಉದ್ಯಮವಾಗಿದೆ. ಈ ವರ್ಷ, ಸುಮಾರು 35 ಲಕ್ಷ ಜೋಡಿಗಳು ವಿವಾಹವಾಗಿದ್ದಾರೆ. ಇಂಥವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಾಗೂ ಏಕಕಾಲದಲ್ಲಿ ಉಳಿತಾಯವನ್ನು ಉತ್ತೇಜಿಸುವ ಸಲುವಾಗಿ ಇದು ಒಳ್ಳೆಯ ಯೋಜನೆಯಾಗಿದೆ ಎನ್ನುತ್ತಾರೆ ಸಂಕಾಶ್ ಸಹ-ಸಂಸ್ಥಾಪಕ ಅಭಿಲಾಶಾ ನೇಗಿ ದಹಿಯಾ.

ಇದಲ್ಲದೆ, ಸಾಲದ ಮೊದಲ ಆರು ತಿಂಗಳ ಶೂನ್ಯ ಬಡ್ಡಿದರಗಳ ಕಾರಣದಿಂದಾಗಿ MNPL ಬ್ಯಾಂಕ್ ಸಾಲಗಳಿಗಿಂತ ಹೆಚ್ಚು ಆಕರ್ಷಕವಾದ ಹಣಕಾಸು ರೂಪವಾಗಿದೆ. ಆದರೆ, ನೀವು ಒಂದು ವರ್ಷದ ಅವಧಿಯನ್ನು ಆರಿಸಿದರೆ, ನಿಮಗೆ ತಿಂಗಳಿಗೆ 1 ಪ್ರತಿಶತವನ್ನು ವಿಧಿಸಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read