ಇಲ್ಲಿದೆ 9 ಪತ್ನಿಯರನ್ನು ಮೆಂಟೇನ್‌ ಮಾಡ್ತಿರೋ ಬ್ರೆಜಿಲ್‌ ಯುವಕನ ಫಿಟ್ನೆಸ್‌ ರಹಸ್ಯ…!

ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನ ಮಹತ್ವದ ಘಟ್ಟ. ಬ್ರೆಜಿಲ್‌ನಲ್ಲಿ ಒಬ್ಬ ಭೂಪ, ಬರೋಬ್ಬರಿ 9 ಯುವತಿಯರನ್ನು ಮದುವೆಯಾಗಿದ್ದಾನೆ. ಒಂಭತ್ತು ಪತ್ನಿಯರನ್ನು ಈತ ಹೇಗೆ ನೋಡಿಕೊಳ್ತಾನೆ ? ಎಲ್ಲರೊಂದಿಗೆ ಬೆರೆತು ಹೇಗಿರ್ತಾನೆ ? ಅವರನ್ನೆಲ್ಲ ಮೈಂಟೇನ್‌ ಮಾಡಲು ಆತನಿಗೆ ಎನರ್ಜಿ ಎಲ್ಲಿಂದ ಬರುತ್ತೆ ಅನ್ನೋದು ಸಾಕಷ್ಟು ಜನರಿಗೆ ಇರುವ ಕುತೂಹಲ. ಆತನ ಜೀವನ ಶೈಲಿ ಹೇಗಿದೆ ? ಫಿಟ್ನೆಸ್‌ಗಾಗಿ ಅವನು ಏನು ತಿಂತಾನೆ ಅನ್ನೋದನ್ನೆಲ್ಲ ನೋಡೋಣ.

ಈ ವ್ಯಕ್ತಿಯ ಹೆಸರು ಆರ್ಥರ್ ಓ ಉರ್ಸೊ, ಆತ ವೃತ್ತಿಯಲ್ಲಿ ಮಾಡೆಲ್. 9 ಮದುವೆಯಾಗುವ ಮೂಲಕ ಆರ್ಥರ್‌  ಇಂಟರ್ನೆಟ್‌ನಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ. ಸದ್ಯ 9 ಪತ್ನಿಯರ ಪೈಕಿ ಒಬ್ಬಳು ಮಾತ್ರ ಆತನನ್ನು ಬಿಟ್ಟು ಹೋಗಿದ್ದಾಳಂತೆ. ಆರ್ಥರ್ ತನ್ನ ಪತ್ನಿಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಾನೆ. ಎಲ್ಲ ಹೆಂಡತಿಯರ ಜೊತೆ ಮಲಗಲು ಮಾಸ್ಟರ್ ಬೆಡ್ ಮಾಡಿಕೊಂಡಿದ್ದಾನೆ.

ಆರ್ಥರ್‌ನನ ಡಯಟ್‌

ಆರ್ಥರ್ ತನ್ನ ಫಿಟ್ನೆಸ್ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾನೆ.  ಭಾರೀ ವ್ಯಾಯಾಮ ಮತ್ತು ಕಠಿಣ ಆಹಾರ  ಕ್ರಮವನ್ನು ಅನುಸರಿಸುತ್ತಾನೆ. ಕಾರ್ಬೋಹೈಡ್ರೇಟ್‌ಗಳೊಂದಿಗೆ ಹೆಚ್ಚಿನ ಫೈಬರ್ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವನ್ನು ತೆಗೆದುಕೊಳ್ಳುತ್ತಾನೆ. ಮೊಟ್ಟೆಯ ಬಿಳಿಭಾಗ ಆತನಿಗೆ ಪ್ರೋಟೀನ್‌ನ ಮುಖ್ಯ ಮೂಲವಾಗಿದೆ. ಇದರ ಹೊರತಾಗಿ ಕೊಬ್ಬಿನ ಮೀನು, ಕೆಂಪು ಮಾಂಸ ಮತ್ತು ಚೀಸ್ ಅನ್ನು ಸಹ ತಿನ್ನುತ್ತಾನೆ. ಫೈಬರ್ ಪಡೆಯಲು ಬೊಕ್ಚಾಯ್, ಲೆಟಿಸ್ ಮತ್ತು ಅನೇಕ ರೀತಿಯ ಹಣ್ಣು-ತರಕಾರಿಗಳನ್ನು ಸೇವಿಸುತ್ತಾನೆ.

ದೇಹವನ್ನು ಸದೃಢವಾಗಿಡಲು ಕಠಿಣ ವ್ಯಾಯಾಮ ಮಾಡ್ತಾನೆ. ಹಾಗಾಗಿಯೇ ಆತನ ಸ್ನಾಯುಗಳು ಟೋನ್ಡ್‌ ಆಗಿವೆ. ಅವರು ಕ್ಯಾಲೊರಿಗಳನ್ನು ಬರ್ನ್ ಮಾಡಲು ವೇಯ್ಟ್‌ ಲಿಫ್ಟಿಂಗ್‌ ಮಾಡ್ತಾನೆ. ಕಾರ್ಡಿಯೋ ಮೂಲಕ ಬೆವರು ಹರಿಸ್ತಾನೆ. ಈತನ ಪತ್ನಿಯರು ಕೂಡ ಫಿಟ್ನೆಸ್‌ನಲ್ಲಿ ಕಡಿಮೆಯೇನಿಲ್ಲ. ಆರ್ಥರ್‌ ಜೊತೆಗೆ ಅವರೂ ಜಿಮ್‌ನಲ್ಲಿ ಕಸರತ್ತು ನಡೆಸ್ತಾರೆ. ಇದರ ಜೊತೆಗೆ ಸೈಕ್ಲಿಂಗ್ ಮತ್ತು ಸ್ವಿಮ್ಮಿಂಗ್‌ ಮೂಲಕ ಫಿಟ್ನೆಸ್‌ ಕಾಯ್ದುಕೊಂಡಿದ್ದಾರೆ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read