ಇಲ್ಲಿದೆ ಟಿಕೆಟ್ ಘೋಷಣೆಯಾದ ಬಳಿಕ ಮೂರೂ ಪಕ್ಷಗಳಿಂದ ಹೊರಬಂದ ಪ್ರಮುಖರ ಪಟ್ಟಿ….!

ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಪರ್ವ ಸಹಜವಾಗಿದ್ದು, ಟಿಕೆಟ್ ಘೋಷಣೆಯಾದ ಬಳಿಕ ಅವಕಾಶ ವಂಚಿತ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಅನೇಕ ಪ್ರಮುಖರು ತಾವಿರುವ ಪಕ್ಷವನ್ನು ತೊರೆದಿದ್ದಾರೆ. ಅಂತವರ ಪಟ್ಟಿ ಇಲ್ಲಿದೆ.

ಅತಿ ಹೆಚ್ಚು ಮಂದಿ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಪುಟ್ಟಣ್ಣ, ಬಾಬುರಾವ್ ಚಿಂಚನಸೂರು, ಎಂ.ಪಿ. ಕುಮಾರಸ್ವಾಮಿ, ಗೂಳಿಹಟ್ಟಿ ಶೇಖರ್, ಎನ್.ವೈ. ಗೋಪಾಲಕೃಷ್ಣ, ಲಕ್ಷ್ಮಣ ಸವದಿ, ಆರ್. ಶಂಕರ್, ಶಶಿಕಾಂತ ನಾಯಕ್, ದೊಡ್ಡನಗೌಡ ಪಾಟೀಲ್ ನರಿಬೋಳ, ಮಾಜಿ ಸಂಸದ ಸೊಗಡು ಶಿವಣ್ಣ ರಾಜೀನಾಮೆ ನೀಡಿದ್ದಾರೆ.

ಇನ್ನು ಕಾಂಗ್ರೆಸ್ಸಿನಲ್ಲಿದ್ದ ರಘು ಆಚಾರ್, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ಮಾಜಿ ಶಾಸಕರಾದ ನಾಗರಾಜ ಛಬ್ಬಿ, ನಂದಿಹಳ್ಳಿ ಹಾಲಪ್ಪ, ವೈ.ಎಸ್.ವಿ. ದತ್ತ ರಾಜೀನಾಮೆ ನೀಡಿದ್ದಾರೆ.

ಜೆಡಿಎಸ್ ಗೆ ಶ್ರೀನಿವಾಸ ಗುಬ್ಬಿ, ಕೆ.ಎಸ್. ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ ಗುಡ್ ಬೈ ಹೇಳಿದ್ದು, ಇನ್ನುಳಿದಂತೆ ಬಿಜೆಪಿ ಶಾಸಕರುಗಳಾದ ಅನಿಲ್ ಬೆನಕೆ, ನೆಹರು ಓಲೇಕರ್, ಮಹಾದೇವಪ್ಪ ಯಾದವಾಡ ಪಕ್ಷ ತೊರೆಯುವ ಕುರಿತು ಬೆಂಬಲಿಗರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read