ಇಡ್ಲಿ ಜೊತೆ ‘ಕಡಲೆಬೀಜದ ಚಟ್ನಿ’ ಮಾಡಿ ಸವಿಯಿರಿ

ಇಡ್ಲಿ ಮಾಡಿದಾಗ ರುಚಿಕರವಾದ ಚಟ್ನಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ತೆಂಗಿನಕಾಯಿ ಬಳಸದೇ ಮಾಡುವ ರುಚಿಕರವಾದ ಕಡಲೆಬೀಜದ ಚಟ್ನಿ ಇದೆ ಮಾಡಿ ರುಚಿ ನೋಡಿ.

½ ಕಪ್ ಕಡಲೆಬೀಜವನ್ನು ಹುರಿದುಕೊಳ್ಳಿ. ನಂತರ ಒಂದು ಪ್ಯಾನ್ ಗೆ 1 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ¼ ಟೀ ಸ್ಪೂನ್ ಜೀರಿಗೆ, ¼ ಟೀ ಸ್ಪೂನ್ ಉದ್ದಿನಬೇಳೆ ಹಾಕಿ ಅದು ಪರಿಮಳ ಬರುತ್ತಿದ್ದಂತೆ ಸಾಂಬಾರ ಈರುಳ್ಳಿ 4 ಹಾಕಿ ತುಸು ಫ್ರೈ ಮಾಡಿ.

ತದನಂತರ ಅದಕ್ಕೆ 3 ಒಣಮೆಣಸು, ¼ ಟೀ ಸ್ಪೂನ್ ಅಚ್ಚ ಖಾರದ ಪುಡಿ, ಸಣ್ಣ ತುಂಡು ಹುಣಸೆಹಣ್ಣು ಹಾಕಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಇದಕ್ಕೆ ಕಡಲೆಬೀಜ, ಉಪ್ಪು ನೀರು ಸೇರಿಸಿಕೊಂಡು ರುಬ್ಬಿಕೊಳ್ಳಿ. ಇಡ್ಲಿ, ದೋಸೆ ಮಾಡಿದಾಗ ಈ ಚಟ್ನಿ ಚೆನ್ನಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read