ಟಾಲಿವುಡ್ ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಇಂದು 63ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಟಾಲಿವುಡ್ ಸೇರಿದಂತೆ ಹಲವಾರು ಭಾಷೆಯ ಸಿನಿತಾರೆಯರು ನಂದಮೂರಿ ಬಾಲಕೃಷ್ಣ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಮತ್ತೊಂದೆಡೆ ಅವರ ನಟನೆಯ ಬಹುನಿರೀಕ್ಷಿತ ‘ಭಗವಂತ ಕೇಸರಿ’ ಚಿತ್ರದ ಟೀಸರ್ ಇಂದು ಬೆಳಿಗ್ಗೆ 10.19 ಕ್ಕೆ ರಿಲೀಸ್ ಆಗಲಿದೆ. ಟೀಸರ್ ಅನ್ನು ಯೂಟ್ಯೂಬ್ ಸೇರಿದಂತೆ 108 ಥಿಯೇಟರ್ ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.
ಅನಿಲ್ ರವಿ ಪುಡಿ ನಿರ್ದೇಶನದ ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಸೇರಿದಂತೆ ಕಾಜಲ್ ಅಗರ್ವಾಲ್, ಸ್ಯಾಂಡಲ್ ವುಡ್ ನಟಿ ಶ್ರೀ ಲೀಲಾ ಹಾಗೂ ರವಿ ರಾಮ್ ಪಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ತಮನ್ ಸಂಗೀತ ಸಂಯೋಜನೆ ನೀಡಿದ್ದಾರೆ.
https://twitter.com/Shine_Screens/status/1667237659339792384?ref_src=twsrc%5Etfw%7Ctwcamp%5Etweetembed%7Ctwterm%5E1667237659339792384%7Ctwgr%5E7fd2c6d990abb054aa3364a0d4c4b1cbf26dbe24%7Ctwcon%5Es1_&ref_url=https%3A%2F%2Ftv9kannada.com%2Fentertainment%2Fnandamuri-balakrishna-birthday-balayya-starrer-108th-movie-titled-bhagavantha-kesari-teaser-releasing-today-mdn-597901.html