ಇಂದು ಬಿಡುಗಡೆಯಾಗಲಿದೆ ‘ಅಗ್ರಸೇನಾ’ ಚಿತ್ರದ ವಿಡಿಯೋ ಹಾಡು

ಜೂನ್ 23ರಂದು ರಾಜ್ಯಾದ್ಯಂತ ತೆರೆಕಾಣಲಿರುವ ‘ಅಗ್ರಸೇನಾ’ ಚಿತ್ರದ ‘ಚಂದಿರ’ ಎಂಬ ವಿಡಿಯೋ ಹಾಡೊಂದನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಮಾಡಲಿದ್ದಾರೆ.

ಮುರುಗೇಶ್ ಕಣ್ಣಪ್ಪ ನಿರ್ದೇಶನದ ಈ ಸಿನಿಮಾದಲ್ಲಿ ಅಮರ್ ವಿರಾಜ್ ನಾಯಕನಾಗಿ ಅಭಿನಯಿಸಿದ್ದಾರೆ.

ಶ್ರೀಮತಿ ವೈಷ್ಣವಿ ಸಿನೆಮಾಸ್ ಬ್ಯಾನರ್ ನಡಿ ಮಮತಾ ಜಯರಾಮ್ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಮರ್ ವಿರಾಜ್ ಗೆ ಜೋಡಿಯಾಗಿ ರಚನಾ ಅಭಿನಯಿಸಿದ್ದಾರೆ.

ಇದೊಂದು ಆಕ್ಷನ್ ಲವ್ ಸ್ಟೋರಿ ಡ್ರಾಮಾ ಕಥಾಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರಕ್ಕೆ ಎಂಎಸ್ ತ್ಯಾಗರಾಜ್ ಸಂಗೀತವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read