ಆಸ್ಪತ್ರೆಗೆ ದಾಖಲಾಗಿದ್ದ ಒಡತಿಗಾಗಿ ವಾರ್ಡ್ ಮುಂದೆ ಕಾದು ನಿಂತಿದ್ದ ಶ್ವಾನ….!

ನಾಯಿಗಳ ಸ್ವಾಮಿನಿಷ್ಠೆ ಎಲ್ಲರಿಗೂ ತಿಳಿದಿರುವಂತದ್ದೆ. ಈಗಾಗಲೇ ಇದನ್ನು ನಿರೂಪಿಸುವಂತಹ ಹಲವು ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಅಲ್ಲದೆ ಹಾಲಿವುಡ್ ನಲ್ಲೂ ನಾಯಿಗಳ ಸ್ವಾಮಿನಿಷ್ಠೆ ಕುರಿತ ನೈಜ ಕಥೆಯನ್ನಾಧರಿಸಿದ ಚಲನಚಿತ್ರ ಮೂಡಿ ಬಂದಿತ್ತು.

ಇದೀಗ ಇಂತಹ ಪ್ರಕರಣಗಳಿಗೆ ಮತ್ತೊಂದು ಸೇರ್ಪಡೆ ಎಂಬಂತೆ ನಾಯಿಯೊಂದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಒಡತಿಗಾಗಿ ನರ್ಸಿಂಗ್ ಹೋಂ ನ ವಾರ್ಡ್ ಮುಂದೆ ನಾಲ್ಕು ದಿನಗಳ ಕಾಲ ಕಾದು ನಿಂತಿದೆ. ಅಲ್ಲದೆ ಒಡತಿ ಮೃತಪಟ್ಟ ಬಳಿಕ ಆಹಾರವನ್ನೂ ಸೇವಿಸುತ್ತಿಲ್ಲ ಎನ್ನಲಾಗಿದೆ.

ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಎಂಬವರು ಪಪ್ಪಿ ಹೆಸರಿನ ನಾಯಿಯನ್ನು ಸಾಕಿದ್ದು, ಅದಕ್ಕೆ ಎಂಟು ತಿಂಗಳ ಪ್ರಾಯ. ಇತ್ತೀಚೆಗೆ ನಾಗರತ್ನ ಅವರು ಆಸ್ಪತ್ರೆಗೆ ದಾಖಲಾಗಿದ್ದು ಈ ವೇಳೆ ಪಪ್ಪಿ ವಾರ್ಡ್ ಮುಂದೆ ಕಾದು ನಿಂತಿದೆ. ಶುಕ್ರವಾರ ರಾತ್ರಿ ನಾಗರತ್ನ ತೀರಿಕೊಂಡ ಬಳಿಕ ಪಪ್ಪಿ ಆಹಾರವನ್ನೂ ಸೇವಿಸುತ್ತಿಲ್ಲ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read