ಆರ್ಥಿಕ ವೃದ್ಧಿಗೆ ಮನೆಯಲ್ಲಿಡಿ ಈ ಗಿಡ

ಹಣ ಗಳಿಕೆಗಾಗಿ ಕೆಲವರು ಹಗಲಿರುಳು ಕೆಲಸ ಮಾಡ್ತಾರೆ. ನಿರೀಕ್ಷೆಯಂತೆ ಕೈಗೆ ಹಣ ಬರುತ್ತದೆ. ಆದ್ರೆ ಕೈನಲ್ಲಿ ತುಂಬಾ ಸಮಯ ನಿಲ್ಲುವುದಿಲ್ಲ. ಇದ್ರಿಂದ ಬೇಸರವಾಗೋದು ಸಹಜ.

ಕೆಲವರು ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟನ್ನು ಮನೆಗೆ ತರುತ್ತಾರೆ. ಆದ್ರೆ ಮನಿ ಪ್ಲಾಂಟ್ ಗಿಂತ ಕ್ರಾಸುಲ್ಲಾ ಗಿಡ ಮತ್ತಷ್ಟು ಪ್ರಯೋಜನಕಾರಿ ಎಂಬುದು ಅನೇಕರಿಗೆ ತಿಳಿದಿಲ್ಲ.

ಕ್ರಾಸುಲ್ಲಾವನ್ನು ಮನಿ ಟ್ರೀ ಎಂದೂ ಕರೆಯುತ್ತಾರೆ. ಕ್ರಾಸುಲ್ಲಾಗೆ ವಾಸ್ತು ಶಾಸ್ತ್ರದಲ್ಲಿ ಬಹಳ ಮಹತ್ವವಿದೆ. ಇದು ಹಣವನ್ನು ತನ್ನತ್ತ ಆಕರ್ಷಿಸುತ್ತದೆ ಎಂಬ ನಂಬಿಕೆಯಿದೆ. ಗಾಢ ಹಸಿರಿನ ಬಣ್ಣದಲ್ಲಿ ಇದ್ರ ಎಲೆಗಳಿರುತ್ತವೆ. ಎಲೆಗಳು ಚಿಕ್ಕದಾಗಿರುತ್ತವೆ.

ಇದನ್ನು ಬೆಳೆಸುವುದು ತುಂಬ ಸುಲಭ. ಸಣ್ಣ ಗಿಡವನ್ನು ಕುಂಡ ಅಥವ ನೆಲಕ್ಕೆ ಹಾಕಿದ್ರೆ ಸಾಕು. ತಾನಾಗಿಯೇ ಗಿಡ ಬೆಳೆಯುತ್ತದೆ. ಇದನ್ನು ಬಿಸಿಲು ಅಥವಾ ನೆರಳು ಎರಡರಲ್ಲೂ ಬೆಳೆಸಬಹುದು.

ಇದು ಸಕಾರಾತ್ಮಕ ಶಕ್ತಿ ಹಾಗೂ ಹಣವನ್ನು ಆಕರ್ಷಿಸುತ್ತದೆಯಂತೆ. ಮನೆಯ ಮುಖ್ಯದ್ವಾರದ ಎಡ ಭಾಗಕ್ಕೆ ಇಡಬೇಕು. ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡದಂತೆ ಇದು ತಡೆಯುತ್ತದೆ. ಜೊತೆಗೆ ಮನೆಯಲ್ಲಿ ಆರ್ಥಿಕ ವೃದ್ಧಿ ಕಾಣಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read