ಸುಂದರವಾಗಿ ಕಾಣಬೇಕೆಂದು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ನಗು ನಿಮ್ಮ ಸೌಂದರ್ಯಕ್ಕೆ ಪೂರಕವಾಗಿದೆ.
ನಗುವ ಗಂಡಸರನ್ನು, ಅಳುವ ಹೆಂಗಸರನ್ನು ನಂಬಬಾರದು ಎಂದೆಲ್ಲಾ ಹೇಳುತ್ತಾರೆ. ಆದರೆ, ಆ ಮಾತೆಲ್ಲಾ ಹಳೆದಾಯ್ತು.
ನಗುವೇ ಆರೋಗ್ಯ ಎಂಬುದು ಈಗಿನ ಟ್ರೆಂಡ್. ಜಾಸ್ತಿ ನಗಿ ಖುಷಿಯಾಗಿರಿ. ಆರೋಗ್ಯವನ್ನೂ ಕಾಪಾಡಿಕೊಳ್ಳಿ ಎಂದು ಹೆಚ್ಚಾಗಿ ಹೇಳಲಾಗುತ್ತದೆ.
ಸುಂದರವಾದ ನಗುವಿನಿಂದ ಎಂತಹವರನ್ನೂ ಆಕರ್ಷಿಸಬಹುದಾಗಿದೆ. ಸೌಂದರ್ಯದ ಉತ್ತಮ ಲಕ್ಷಣಗಳಲ್ಲಿ ನಗು ಕೂಡ ಸೇರಿದೆ.
ನಗುವ ಸಂದರ್ಭದಲ್ಲಿ ಮುಖ ಅರಳುತ್ತದೆ. ಮುಗುಳ್ನಗೆ ಸಂತೋಷ ಮತ್ತು ಶಾಂತಿಯನ್ನು ಅಭಿವ್ಯಕ್ತಪಡಿಸುತ್ತದೆ.
ಮುಗುಳ್ನಗೆ ಆಕರ್ಷಣೆಯ ಸಂಕೇತವಾಗಿದೆ. ಸ್ನೇಹ ಸಂಬಂಧಗಳನ್ನು ಹೆಚ್ಚಿಸುವ ಜೊತೆಗೆ ಆತ್ಮೀಯತೆ ಬೆಳೆಸುತ್ತದೆ. ಆಭರಣಗಳಿಗಿಂತ ಸಹಜವಾದ ನಗು ಆಕರ್ಷಕ ಎನ್ನುತ್ತಾರೆ ಕೆಲವರು.
ನಗುವಿನಿಂದ ಮಾನಸಿಕ ಒತ್ತಡ, ಆತಂಕ, ಉದ್ವೇಗ ದೂರವಾಗುತ್ತವೆ. ಆತ್ಮಸ್ಥೈರ್ಯ, ಉತ್ಸಾಹ ಹೆಚ್ಚಾಗುತ್ತದೆ. ಆದರೆ, ನಗು ಹಿತಮಿತವಾಗಿರಬೇಕು. ಮತ್ತೊಬ್ಬರು ನಿಮ್ಮನ್ನು ನೋಡಿ ನಗುವಂತಾಗಬಾರದು.
You Might Also Like
TAGGED:smile-face-health-beauty