ಆಯಾಸ ದೂರ ಮಾಡುತ್ತೆ ʼಅನಾನಸ್ʼ

ಅನಾನಸ್ ಹಣ್ಣು ಕೇವಲ ಬಾಯಿಗೆ ರುಚಿ ಕೊಡುವುದು ಮಾತ್ರವಲ್ಲ, ಮೆದುಳಿಗೂ ಉಪಯುಕ್ತವಾದುದು. ಮೆದುಳಿಗೆ ಅಗತ್ಯವಾದ ಮ್ಯಾಂಗನೀಸ್, ಪ್ರೋಟೋಸ್ ಹಾಗೂ ಗ್ಲುಕೋಸ್ ನಂತಹ ನೈಸರ್ಗಿಕ ಸಕ್ಕರೆ ಅಂಶಗಳನ್ನು ಅನಾನಸ್ ಒಳಗೊಂಡಿದೆ.

ಇದನ್ನು ಹಸಿಯಾಗಿಯೂ ಸೇವಿಸಬಹುದು, ಬೇರೆ ಹಣ್ಣುಗಳೊಂದಿಗೆ ಬೆರೆಸಿಯೂ ತಿನ್ನಬಹುದು. ರಸವನ್ನು ಕುಡಿಯಬಹುದು. ಈ ಅನಾನಸ್ ಹಣ್ಣನ್ನು ಹೇಗೆ ಸೇವಿಸಿದರೂ ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ಶರೀರಕ್ಕೆ ಸೇರುತ್ತವೆ.

ಊಟದ ನಂತರ ಅನಾನಸ್ ಹಣ್ಣಿಗೆ ಸ್ವಲ್ಪ ಉಪ್ಪು, ಕರಿಮೆಣಸಿನ ಪುಡಿ ಉದುರಿಸಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಕಾಳುಮೆಣಸಿನ ಪುಡಿ ಹಚ್ಚಿ ಅನಾನಸ್ ಸೇವಿಸುವುದರಿಂದ ಆಮ್ಲ ಪಿತ್ತ ನಿವಾರಣೆಯಾಗುತ್ತದೆ. ಅನಾನಸ್ ಹಣ್ಣಿನ ನಿಯಮಿತ ಸೇವನೆಯು ಗಂಟಲು ಬೇನೆಯನ್ನು ದೂರವಿಡುತ್ತದೆ. ‌

ಪಿತ್ತಕೋಶ ಊತ, ಮೂತ್ರ ಕಟ್ಟುವಿಕೆ, ಕಣ್ಣಿನ ಸುತ್ತ ಊದುವಿಕೆ ಮುಂತಾದ ಸಮಸ್ಯೆಗಳನ್ನು ಈ ಅನಾನಸ್ ಹಣ್ಣನ್ನು ಸೇವಿಸುವುದರಿಂದ ನಿವಾರಿಸಬಹುದು.

ಅನಾನಸ್ ತಿಂದು ಹಾಲು ಕುಡಿದರೆ ಬೇರಾವ ಅಡ್ಡ ಪರಿಣಾಮಗಳೂ ಉಂಟಾಗುವುದಿಲ್ಲ. ದಿನವಿಡೀ ಚೈತನ್ಯದಿಂದ ಇರುವಂತೆ ನೋಡಿಕೊಳ್ಳುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read