ಆಪರೇಶನ್‌ ಮಾಡಿ ಬ್ಲೇಡ್‌ ಹೊಟ್ಟೆಯಲ್ಲೇ ಬಿಟ್ಟ ವೈದ್ಯರು….! ಮಹಿಳಾ ರೋಗಿಯ ಕಥೆ ಏನಾಯ್ತು ಗೊತ್ತಾ ?

ವೈದ್ಯರನ್ನು ದೇವರ ಇನ್ನೊಂದು ರೂಪ ಎಂದೇ ಎಲ್ಲರೂ ಪರಿಗಣಿಸ್ತಾರೆ. ಆದರೆ ಡಾಕ್ಟರ್‌ಗಳಿಂದ್ಲೇ ಕೆಲವೊಮ್ಮೆ ಭಾರೀ ಪ್ರಮಾದಗಳು ನಡೆದುಹೋಗುತ್ತವೆ. ಬ್ರಿಟನ್‌ನಲ್ಲಿ ಮಹಿಳೆಯೊಬ್ಬಳಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೊಟ್ಟೆಯಲ್ಲಿ ಬ್ಲೇಡ್‌ ಬಿಟ್ಟಿದ ಪ್ರಕರಣ  ಬೆಳಕಿಗೆ ಬಂದಿದೆ.

ವೈದ್ಯರ ತಪ್ಪಿನಿಂದ ಮಹಿಳೆಯ ಪ್ರಾಣಕ್ಕೇ ಅಪಾಯ ಎದುರಾಗಿತ್ತು. ಲಂಡನ್‌ನ ನಿವಾಸಿಯಾಗಿರೋ ಮಹಿಳೆಯೊಬ್ಬಳು ಇತ್ತೀಚೆಗೆ ಇಲ್ಲಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ಅಂಡಾಶಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು.

ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮಹಿಳೆ ಮನೆಗೆ ತೆರಳಿದ್ದಾಳೆ. ವೈದ್ಯರು ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಹೇಳಿದ್ದರು. ಆದರೆ ಆಕೆಗೆ ನೋವು ಕಡಿಮೆಯಾಗಲೇ ಇಲ್ಲ, ದಿನದಿಂದ ದಿನಕ್ಕೆ ನೋವು ಹೆಚ್ಚಾಗುತ್ತಲೇ ಇತ್ತು. ಮತ್ತೆ ವೈದ್ಯರನ್ನು ಸಂಪರ್ಕಿಸಿದಾಗ ಆಕೆಗೆ ಪೇಯ್ನ್‌ ಕಿಲ್ಲರ್‌ ಕೊಟ್ಟು ಕಳಿಸಿದ್ದಾರೆ. ಆದರೆ ನೋವು ಕೊಂಚವೂ ಕಡಿಮೆಯಾಗದೇ ಇದ್ದಾಗ ಶಸ್ತ್ರಚಿಕಿತ್ಸೆಯಾಗಿ ಐದು ದಿನಗಳ ನಂತರ ಮಹಿಳೆಯನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರ ತಂಡ ಮತ್ತೆ ತಪಾಸಣೆ ನಡೆಸಿದೆ.

ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಆಕಸ್ಮಿಕವಾಗಿ ಚಿಕ್ಕ ಬ್ಲೇಡ್ ಉಳಿದಿರುವುದನ್ನು ಸ್ಕ್ಯಾನಿಂಗ್‌ನಲ್ಲಿ ವೈದ್ಯರು ಪತ್ತೆ ಮಾಡಿದ್ದಾರೆ. ಇದೇ ಕಾರಣಕ್ಕೆ ಮಹಿಳೆಗೆ ಅಸಹನೀಯ ನೋವು ಕಾಣಿಸಿಕೊಂಡಿತ್ತು. ಮಹಿಳೆಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ನಡೆಸಿ ಈ ಬ್ಲೇಡ್ ಅನ್ನು ವೈದ್ಯರು ಹೊರತೆಗೆದಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಎರಡು ಬಾರಿ ಮಹಿಳೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯ್ತು. ಅಷ್ಟೇ ಅಲ್ಲ ಸಾಕಷ್ಟು ನೋವುಂಡ ಮಹಿಳೆ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read