ಅಸಹಾಯಕಳಾಗಿ ಕುಳಿತ ವೃದ್ಧೆ ತಲೆ ಮೇಲೆ ನೀರು ಸುರಿದ ಸೊಸೆ; ಆಘಾತಕಾರಿ ವಿಡಿಯೋ ವೈರಲ್

ತಮ್ಮ ಪುತ್ರ 30 ಕೋಟಿ ರೂಪಾಯಿ ಆಸ್ತಿ ಹೊಂದಿದ್ದರೂ ಸಹ ಒಂದೊತ್ತಿನ ಊಟವನ್ನೂ ನೀಡುತ್ತಿಲ್ಲವೆಂಬ ಕಾರಣಕ್ಕೆ ಪತ್ರ ಬರೆದಿಟ್ಟು ವೃದ್ಧ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂರು ದಿನಗಳ ಹಿಂದಷ್ಟೇ ನಡೆದಿತ್ತು. ಹಿರಿಯರನ್ನು ಕುಟುಂಬಸ್ಥರೇ ಕಡೆಗಣಿಸುತ್ತಿರುವ ಇಂದಿನ ದಿನಗಳಲ್ಲಿ ಮತ್ತೊಂದು ಶಾಕಿಂಗ್ ವಿಡಿಯೋ ಈಗ ಬಹಿರಂಗವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ವೃದ್ಧ ಮಹಿಳೆಯೊಬ್ಬರು ಅಸಹಾಯಕರಾಗಿ ಮನೆಯ ಹೊರಗಡೆ ಕುಳಿತಿದ್ದು, ಸೊಸೆ ಎಂದು ಹೇಳಲ್ಪಡುವ ಮತ್ತೊಬ್ಬಾಕೆ ಚೊಂಬಿನಲ್ಲಿ ನೀರು ತರುತ್ತಾಳೆ. ವೃದ್ಧೆಯನ್ನು ನಿಂದಿಸುತ್ತಾ ತಲೆ ಮೇಲೆ ನೀರು ಸುರಿದು ಒಳ ಹೋಗುತ್ತಾಳೆ.

ಈ ದೃಶ್ಯಾವಳಿಯನ್ನು ಪಕ್ಕದ ಮನೆಯವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ವೃದ್ಧೆ ತಲೆ ಮೇಲೆ ನೀರು ಸುರಿದ ಮಹಿಳೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಅಲ್ಲದೆ ಆಕೆಯನ್ನು ಬಂಧಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

https://youtu.be/sX71hG9PDzo

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read