ಅಯ್ಯಪ್ಪ ಸ್ವಾಮಿ ಅರವಣ ಪ್ರಸಾದಕ್ಕೆ ಹೈಕೋರ್ಟ್ ಬ್ರೇಕ್

ಕೇರಳ: ಶಬರಿಮಲೆ ಅಯ್ಯಪ್ಪನ ಪ್ರಸಾದ ಯಾರಿಗೆ ಇಷ್ಟ ಇಲ್ಲ ಹೇಳಿ. ಶಬರಿಮಲೆಯ ಈ ಬೆಲ್ಲದ ಪಾಯಸ ಅಂದ್ರೆ ಎಲ್ಲರಿಗೂ ಇನ್ನಿಲ್ಲದ ಇಷ್ಟ. ಆದ್ರೆ ನಾವು ನೀವು ತಿನ್ನೋ ಈ ಪಾಯಸ ಪಾಯ್ಸನ್ ಆಗಿದ್ಯಂತೆ..? ಇಂಥಹದೊಂದು ಆಘಾತಕಾರಿ ವಿಚಾರವನ್ನು ಕೇರಳದ ಹೈಕೋರ್ಟ್ ಹೇಳಿದೆ. ಡಬ್ಬದಲ್ಲಿ ಬರುವ ಅವರಣ ಪಾಯಸದಲ್ಲಿ ಕೀಟನಾಶಕ ಇದೆ. ಇನ್ಮುಂದೆ ಏಲಕ್ಕಿ ಸಹಿತದ ಪ್ರಸಾದಕ್ಕೆ ಕೋರ್ಟ್ ತಡೆ ನೀಡಿದೆ.

ಹೌದು, ಬೆಲ್ಲದ ಸಿಹಿ ಪಾಯಸದಲ್ಲಿ 21 ರೀತಿಯ ಕೀಟನಾಶಕದ ಮಿಶ್ರಣ ಆಗಿದೆ. ಹೀಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವನ್ನು ನಿರ್ವಹಿಸುವ ಟ್ರಾವಾಂಕೋರ್ ದೇವಸ್ವಂ ಮಂಡಳಿಗೆ ಅರವಣ ಪ್ರಸಾದ ವಿತರಣೆಯನ್ನು ತಕ್ಷಣ ನಿಲ್ಲಿಸುವಂತೆ ಕೇರಳ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ‌

ಭಾರತೀಯ ಆಹಾರ ಸುರಕ್ಷೆ ಮತ್ತು ಮಾನಕಗಳ ಪ್ರಾಧಿಕಾರವು ತನ್ನ ಪ್ರಯೋಗಾಲಯದಲ್ಲಿ ಅಯ್ಯಪ್ಪಸ್ವಾಮಿ ಪ್ರಸಾದಕ್ಕೆ ಬಳಕೆಯಾಗುವ ಏಲಕ್ಕಿಯನ್ನು ತಪಾಸಣೆಗೆ ಒಳಪಡಿಸಿದಾಗ ರಾಸಾಯನಿಕ ಮಿಶ್ರಣ ಏಲಕ್ಕಿಯಲ್ಲಿ ಇದೆಯಂತೆ. ಹೀಗಾಗಿ ಪ್ರಸಾದ ಉತ್ಪಾದನೆ ಹಾಗೂ ಮಾರಾಟ ಸ್ಥಗಿತಗೊಳಿಸುವಂತೆ ಹೈಕೋರ್ಟ್ ಆದೇಶ ಮಾಡಿದೆ.

ಇನ್ಮುಂದೆ ಶಬರಿಮಲೆ ಪ್ರಸಾದದಲ್ಲಿ ಏಲಕ್ಕಿ ಸ್ಮೆಲ್ ಇರಲ್ಲ. ಯಾಕೆಂದ್ರೆ ಪ್ರಸಾದಕ್ಕೆ ಏಲಕ್ಕಿ ಬಳಸದಿರಲು ದೇವಸ್ಥಾನ ಮಂಡಳಿ ನಿರ್ಧಾರ ಮಾಡಿದೆ. ಹೈಕೋರ್ಟ್ ತೀರ್ಪು ಹೊರ ಬರ್ತಿದ್ದಂತೆ ಏಲಕ್ಕಿ ಮಿಶ್ರಣ ಸ್ಥಗಿತ ಮಾಡಿದೆ. ಪ್ರಸಾದದಲ್ಲಿ ಏಲಕ್ಕಿ ಹಾಕುವುದಿಲ್ಲ ಎಂದು ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ನಿನ್ನೆ ಸಂಜೆಯಿಂದಲೇ ಪ್ರಸಾದ ವಿತರಣೆಯಲ್ಲಿ ಒಂದಿಷ್ಟು ವ್ಯತ್ಯಾಸ ಆಗಿದೆ ಎಂದು ಹೇಳಲಾಗುತ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read