‘ಅನ್ಯಾಯಕಾರಿ ಬ್ರಹ್ಮ’ ಹಾಡಿಗೆ ದೇಗುಲದ ಬಳಿ ಹೆಜ್ಜೆ ಹಾಕಿ ಅಳಲು ತೋಡಿಕೊಂಡ ಹುಡುಗರು…! ವಿಡಿಯೋ ವೈರಲ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಾರಿ ಗಮನ ಸೆಳೆದಿರುವ ‘ಅನ್ಯಾಯಕಾರಿ ಬ್ರಹ್ಮ’ ಜನಪದ ಹಾಡು ದಿನಕ್ಕೊಂದು ರೂಪದಲ್ಲಿ ವೈರಲ್ ಆಗುತ್ತಲೇ ಇದೆ. ಇದೀಗ ಹುಡುಗರ ಗುಂಪೊಂದು ದೇವಸ್ಥಾನದ ಬಳಿ ನಿಂತು ಈ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸುದ್ದಿಯಾಗಿದೆ.

ಸುಂದರ ಸನ್ಯಾಸಿ ಹುಡುಗರು ಈ ಹಾಡಿಗೆ ಆಂಜನೇಯನ ಗುಡಿಯ ಮೆಟ್ಟಿಲುಗಳ ಮೇಲೆ ನಿಂತು ಹೆಜ್ಜೆ ಹಾಕಿದ್ದು, ಈಗಲಾದರೂ ಹೆಣ್ಣುಮಕ್ಕಳು ಕರುಣೆ ತೋರಿಸಿ ಎಂಬ ಮಾತು ವೈರಲ್ ಆಗುತ್ತಿದೆ. ಕರುಣೆ ಇರುವ ಹೆಣ್ಣುಮಕ್ಕಳು ಈ ಸುಂದರ ಹುಡುಗರ ಕಡೆಗೆ ಕಣ್ಣು ಬಿಡಬಾರದೇ ? ಎಂದು ಹೇಳಲಾಗುತ್ತಿದೆ.

ಶ್ರೇಷ್ಠ ಜಾನಪದ ಕಲಾವಿದ ಡಾ.ಮಳವಳ್ಳಿ ಮಹಾದೇವಸ್ವಾಮಿ ಹಾಡಿರುವ ಅರ್ಜುನ ಜೋಗಿ ಜಾನಪದ ಕಥನ ಕಾವ್ಯದ ಆಯ್ದ ಸಾಲುಗಳ ಅನ್ಯಾಯಕಾರಿ ಬ್ರಹ್ಮ ಆಧುನಿಕ ನೃತ್ಯ ಸಂಯೋಜನೆಯ ವಿಡಿಯೋ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read