ಅತ್ಯಂತ ಕೊಳಕು ರೈಲುಗಳಿವು….! ಪ್ರಯಾಣ ಮಾಡಿದ್ರೆ ಕಂಗಾಲಾಗೋದು ಗ್ಯಾರಂಟಿ

ಪ್ರತಿದಿನ ಸಾವಿರಾರು ರೈಲುಗಳು ಭಾರತದಲ್ಲಿ ಓಡಾಡುತ್ತವೆ. ಅವುಗಳ ನಿರ್ವಹಣೆ ರೈಲ್ವೆ ಇಲಾಖೆಯದ್ದು. ಆದರೆ ಅನೇಕ ರೈಲುಗಳಲ್ಲಿ ಸ್ವಚ್ಛತೆಯ ಕೊರತೆಯಿದೆ. ದೇಶದ ಅತ್ಯಂತ ಕೊಳಕು ರೈಲುಗಳು ಯಾವುವು ಅನ್ನೋದನ್ನು ನೋಡೋಣ.

ಈ ರೈಲುಗಳಲ್ಲಿ ಸ್ವಚ್ಛತೆಯಿಲ್ಲ ಎಂಬ ಬಗ್ಗೆ ಗರಿಷ್ಠ ದೂರುಗಳು ಬರುತ್ತವೆ. ನೀವೇನಾದ್ರೂ ಈ ರೈಲುಗಳಲ್ಲಿ ಪ್ರಯಾಣಿಸುವ ಯೋಜನೆಯಲ್ಲಿದ್ದರೆ ಅದನ್ನು ಕೈಬಿಡುವುದು ಒಳಿತು. ಸಹರ್ಸಾ-ಅಮೃತಸರ ಗರೀಬ್ ರಥ ರೈಲು ಅತ್ಯಂತ ಕೊಳಕು ಟ್ರೈನ್‌ಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಈ ರೈಲು ಪಂಜಾಬ್‌ನಿಂದ ಸಹರ್ಸಾಗೆ ಹೋಗುತ್ತದೆ. ರೈಲಿನಲ್ಲಿ ಜನಸಂದಣಿ ವಿಪರೀತವಾಗಿದ್ದು, ಸಂಪೂರ್ಣ ಗಬ್ಬೆದ್ದು ಹೋಗಿದೆ. ರೈಲುಗಳಲ್ಲಿ ಕೋಚ್‌ನಿಂದ ಸಿಂಕ್ ಮತ್ತು ಟಾಯ್ಲೆಟ್ ಸೀಟ್‌ವರೆಗೆ, ಕ್ಯಾಬಿನ್‌ನಲ್ಲೂ ಕೊಳಕು ಹರಡುತ್ತದೆ. ಅತ್ಯಂತ ಕೊಳಕು ರೈಲುಗಳ  ಪಟ್ಟಿಯಲ್ಲಿ ಈ ರೈಲಿನ ಹೆಸರನ್ನು ಸೇರಿಸಲಾಗಿದೆ. ಇದಲ್ಲದೇ ಹೊಲಸು ತುಂಬಿರುವ ಇಂತಹ ಹಲವು ರೈಲುಗಳಿವೆ.

ಜೋಗ್ಬಾನಿ-ಆನಂದ ವಿಹಾರ್ ಸೀಮಾಂಚಲ್ ಎಕ್ಸ್‌ಪ್ರೆಸ್ ರೈಲು, ಶ್ರೀ ಮಾತಾ ವೈಷ್ಣೋದೇವಿ-ಬಾಂದ್ರಾ ಸ್ವರಾಜ್ ಎಕ್ಸ್‌ಪ್ರೆಸ್ ರೈಲು, ಬಾಂದ್ರಾ-ಶ್ರೀ ಮಾತಾ ವೈಷ್ಣೋದೇವಿ ಸ್ವರಾಜ್ ಎಕ್ಸ್‌ಪ್ರೆಸ್ ರೈಲು, ಫಿರೋಜ್‌ಪುರ-ಅಗರ್ತಲಾ ತ್ರಿಪುರ ಸುಂದರಿ ಎಕ್ಸ್‌ಪ್ರೆಸ್ ರೈಲು ಹೀಗೆ ಅನೇಕ ಟ್ರೈನ್‌ಗಳು ಕೊಳಕಾಗಿವೆ. ಈ ರೈಲುಗಳ ಬಗ್ಗೆ ಇಲಾಖೆಗೆ  ಸಾಕಷ್ಟು ದೂರುಗಳು ಬರುತ್ತವೆ. ಇದಲ್ಲದೆ ಆನಂದ್ ವಿಹಾರ್-ಜೋಗ್ಬಾನಿ ಸೀಮಾಂಚಲ್ ಎಕ್ಸ್‌ಪ್ರೆಸ್, ಅಮೃತಸರ ಕ್ಲೋನ್ ವಿಶೇಷ ರೈಲು, ಅಜ್ಮೀರ್-ಜಮ್ಮು ತಾವಿ ಎಕ್ಸ್‌ಪ್ರೆಸ್ ರೈಲು, ನವದೆಹಲಿ-ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಕೂಡ ಸ್ವಚ್ಛವಾಗಿಲ್ಲ.

ರೈಲುಗಳಲ್ಲಿ ಸ್ವಚ್ಛತೆಯ ಕೊರತೆ ಇರುವ ಬಗ್ಗೆ 1000ಕ್ಕೂ ಹೆಚ್ಚು ದೂರುಗಳು ಬಂದಿವೆ. ರಾಜಧಾನಿ ಎಕ್ಸ್ ಪ್ರೆಸ್ ರೈಲು ಕೂಡ ಸ್ವಚ್ಛತೆಯ ಕೊರತೆಯನ್ನು ಎದುರಿಸುತ್ತಿದೆ. ಈ ಕೊಳೆಯನ್ನು ತೆಗೆಯಲು ಈಗ ರೈಲಿನಲ್ಲಿ ಬೋರ್ಡ್ ಹೌಸ್ ಕೀಪಿಂಗ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರಯಾಣಿಕರು ದೂರು ನೀಡಿದ ತಕ್ಷಣ ಅದನ್ನು ವಿಲೇವಾರಿ ಮಾಡಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read