ಅತಿಯಾದ ಪ್ರೋಟೀನ್ ಸೇವನೆಯಿಂದ ದೇಹಕ್ಕೆ ಆಗುತ್ತದೆ ಇಂಥಾ ಅಪಾಯ…!

ರೋಗಗಳನ್ನು ದೂರವಿಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೊಂದಿರುವುದು ಬಹಳ ಮುಖ್ಯ. ಏಕೆಂದರೆ ಪ್ರೋಟೀನ್ ದೇಹಕ್ಕೆ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳಲ್ಲಿ ಒಂದಾಗಿದೆ. ಹಾರ್ಮೋನ್ ನಿಯಂತ್ರಣ ಮತ್ತು ಪ್ರತಿರಕ್ಷಣೆಯನ್ನು ಸುಧಾರಿಸಲು ದೇಹದ ಸ್ನಾಯುಗಳ ಬೆಳವಣಿಗೆಗೆ ಇದು ಅವಶ್ಯಕವಾಗಿದೆ. ಆದರೆ ಅತಿಯಾದರೆ ಯಾವುದಾದರೂ ಹಾನಿಯನ್ನುಂಟುಮಾಡುತ್ತದೆ.

ಅದೇ ರೀತಿಯಲ್ಲಿ ಹೆಚ್ಚು ಪ್ರೋಟೀನ್ ಸೇವಿಸಿದರೆ ಗಂಭೀರ ಸಮಸ್ಯೆಗೆ ಅದು ಕಾರಣವಾಗಬಹುದು. ಅನೇಕರು ಬಾಡಿ ಬಿಲ್ಡ್‌ ಮಾಡಲು ಅತಿಯಾಗಿ ಪ್ರೋಟೀನ್‌ ಸೇವನೆ ಮಾಡುತ್ತಾರೆ. ಇದು ಅಪಾಯಕಾರಿ.

ತೂಕ- ತೂಕವನ್ನು ಕಳೆದುಕೊಳ್ಳಲು ಇಚ್ಛಿಸುವವರಿಗೆ ಪ್ರೋಟೀನ್ ಸೇವಿಸಲು ಸಲಹೆ ನೀಡಲಾಗುತ್ತದೆ. ಆದರೆ ಪ್ರೋಟೀನ್‌ ಅನ್ನು ಹೆಚ್ಚು ಸೇವಿಸಿದಾಗ ಅದು ತೂಕವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಯಾವಾಗಲೂ ಪ್ರೋಟೀನ್ ಪ್ರಮಾಣದ ಬಗ್ಗೆ ಗಮನ ಕೊಡಬೇಕು. ಅಧ್ಯಯನದ ಪ್ರಕಾರ, ಹೆಚ್ಚುವರಿ ಪ್ರೋಟೀನ್ ದೇಹದಲ್ಲಿ ಕೊಬ್ಬಿನಂತೆ ಶೇಖರಣೆಯಾಗುತ್ತದೆ, ಇದು ದೇಹದಲ್ಲಿ ಅಮೈನೋ ಆಮ್ಲಗಳನ್ನು ಹೆಚ್ಚಿಸಲು ಪ್ರಾರಂಭಿಸುತ್ತದೆ.

ಆಯಾಸ- ಹೆಚ್ಚು ಪ್ರೊಟೀನ್ ಸೇವಿಸುವುದರಿಂದ ಯಾವಾಗಲೂ ಸುಸ್ತಾಗುತ್ತದೆ. ಏಕೆಂದರೆ ಇದು ನಿಮ್ಮ ಮೂತ್ರಪಿಂಡಗಳು, ಯಕೃತ್ತು ಮತ್ತು ಮೂಳೆಗಳ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ.  ಇದರಿಂದ ಸದಾ ಕಾಲ ಆಯಾಸ ಮತ್ತು ಆಲಸ್ಯವನ್ನು ಅನುಭವಿಸಬಹುದು.

ಮಲಬದ್ಧತೆ – ಹೆಚ್ಚು ಪ್ರೋಟೀನ್ ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಮಲಬದ್ಧತೆಯಿಂದ ನೀವು ತೊಂದರೆಗೊಳಗಾಗಬಹುದು. ಹೊಟ್ಟೆ ಉಬ್ಬರಿಸುವ ಸಾಧ್ಯತೆಯೂ ಇರುತ್ತದೆ.

ಕ್ಯಾಲ್ಸಿಯಂ ನಷ್ಟ – ಹೆಚ್ಚಿನ ಪ್ರಮಾಣದ ಪ್ರೋಟೀನ್ ಸೇವನೆಯು ಕ್ಯಾಲ್ಸಿಯಂ ನಷ್ಟಕ್ಕೆ ಕಾರಣವಾಗಬಹುದು. ಇದರಿಂದ ಮೂಳೆಗಳು ದುರ್ಬಲಗೊಂಡು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು. ಹೆಚ್ಚಿನ ಪ್ರೊಟೀನ್ ಆಹಾರವನ್ನು ತೆಗೆದುಕೊಳ್ಳುವ ಜನರ ಮೂಳೆಗಳು ತುಂಬಾ ದುರ್ಬಲವಾಗಿರುವುದು ಕಂಡುಬಂದಿದೆ.

ಕಿಡ್ನಿ- ಹೆಚ್ಚಿನ ಪ್ರಮಾಣದ ಪ್ರೋಟೀನ್ ಸೇವನೆಯು ಕಿಡ್ನಿ ಸಂಬಂಧಿತ ಕಾಯಿಲೆಗಳು ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು.ಇದಲ್ಲದೆ, ಬಾಯಿಯ ದುರ್ವಾಸನೆ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read