ಅಡುಗೆ ರುಚಿ ಹೆಚ್ಚಿಸಲಷ್ಟೇ ಅಲ್ಲ ಇದಕ್ಕೂ ಪರಿಹಾರ ನೀಡುತ್ತೆ ಇಂಗು

ಅಡುಗೆಯಲ್ಲಿ ಬಳಸುವ ಇಂಗು ಪರಿಮಳದ ಜೊತೆಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಆದರೆ ಅದೇ ಇಂಗು ನಮ್ಮ ಜೀವನದ ಅನೇಕ ಕಷ್ಟಗಳನ್ನು ದೂರ ಮಾಡುತ್ತದೆ. ಎಲ್ಲ ಕೆಲಸದಲ್ಲೂ ನಮಗೆ ಜಯ ಸಿಗುವಂತೆ ಮಾಡುತ್ತದೆ. ಈ ಕೆಳಗಿನ ಕೆಲವು ವಿಧಾನಗಳಲ್ಲಿ ಇಂಗನ್ನು ಬಳಸಿದರೆ ಜೀವನದ ಅನೇಕ ಕಷ್ಟಗಳು ನಿವಾರಣೆಯಾಗುತ್ತವೆ.

ಸಾಲದಿಂದ ಮುಕ್ತಿ ಸಿಗಲು ಇಂಗು ಬಹಳ ಉಪಯುಕ್ತವಾಗಿದೆ. ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ಬಯಸುವವರು ಇಂಗನ್ನು ನೀರಿನಲ್ಲಿ ಹಾಕಿ ಆ ನೀರಿನಲ್ಲಿ ಸ್ನಾನ ಮಾಡಿ. ಕೆಂಪು ಬೇಳೆ ಜೊತೆ ಇಂಗನ್ನು ಸೇರಿಸಿ ದಾನ ಮಾಡುವುದರಿಂದಲೂ ಸಾಲದಿಂದ ಮುಕ್ತಿ ಹೊಂದಬಹುದು.

ನಿಮ್ಮ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ನಿಮ್ಮ ಹಣೆ ಬರಹವನ್ನೇ ಬದಲಾಯಿಸಬಹುದು. ಹಾಗಾಗಿ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದಾದರೆ 5 ಗ್ರಾಂ ಇಂಗು, 5 ಗ್ರಾಂ ಕರ್ಪೂರ ಮತ್ತು 5 ಗ್ರಾಂ ಕಾಳುಮೆಣಸನ್ನು ಸೇರಿಸಿ ಪುಡಿ ಮಾಡಿ. ನಂತರ ಅದನ್ನು ಸಾಸಿವೆಕಾಳಿನ ಗಾತ್ರದ ಚಿಕ್ಕ ಉಂಡೆಗಳನ್ನಾಗಿ ಮಾಡಬೇಕು. ಉಂಡೆಗಳನ್ನು ಎರಡು ಸಮ ಭಾಗಗಳನ್ನಾಗಿ ಮಾಡಿಕೊಂಡು ಒಂದು ಭಾಗವನ್ನು ಬೆಳಿಗ್ಗೆ ಮತ್ತು ಒಂದು ಭಾಗವನ್ನು ಸೂರ್ಯ ಮುಳುಗುವ ಹೊತ್ತಿಗೆ ಮನೆಯಲ್ಲಿ ದೀಪದ ತರಹ ಹಚ್ಚಿ. ಮೂರು ದಿನಗಳ ಕಾಲ ಹೀಗೆ ಮಾಡಿದರೆ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಿ ಮನೆಯವರಿಗೆಲ್ಲ ಶ್ರೇಯಸ್ಸು ಉಂಟಾಗುತ್ತದೆ.

ನಿಮ್ಮ ಮನೆಯಲ್ಲಿ ಯಾವುದೋ ತಾಂತ್ರಿಕ ದೋಷ ಇದೆ ಎಂದು ನಿಮಗೆ ಅನಿಸಿದರೆ ಹುಣ್ಣಿಮೆಯ ದಿನ ರಾತ್ರಿ ಇಂಗನ್ನು ನೀರಿನಿಂದ ತೊಳೆಯಿರಿ. ಇದರ ಹೊರತಾಗಿ ಯಾವುದಾದರೂ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಒಂದು ತುಣುಕು ಇಂಗಿನ ಚೂರನ್ನು ತೆಗೆದುಕೊಂಡು ನಿಮ್ಮ ತಲೆಯ ಮೇಲಿಂದ ಉತ್ತರ ದಿಕ್ಕಿಗೆ ಎಸೆಯಬೇಕು. ಹೀಗೆ ಮಾಡುವುದರಿಂದ ಕೆಲಸದಲ್ಲಿ ಬರುವ ಅಡೆತಡೆಗಳು ದೂರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read