ಅಡುಗೆ ಮನೆ ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ….? ಇಲ್ಲಿದೆ ಸಿಂಪಲ್ ʼಟಿಪ್ಸ್ʼ

ಅಡುಗೆ ಮಾಡುವುದು ಒಂದು ಕಲೆ. ಹಾಗೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಪಾತ್ರೆಗಳ ಹೊಳಪು ಸದಾ ಇರುವಂತೆ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯ. ಇದು ಅಡುಗೆ ಮನೆ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ ಆರೋಗ್ಯ ವೃದ್ಧಿಗೆ ಸಹಕಾರಿ.

ಅಡುಗೆ ಮಾಡುವಾಗ ಪ್ಯಾನ್ ಗೆ ಆಹಾರ ಹಿಡಿದುಕೊಂಡಿರುತ್ತದೆ. ಅದನ್ನು ಸ್ವಚ್ಛಗೊಳಿಸುವುದು ಸುಲಭವಲ್ಲ. ಎಷ್ಟು ಉಜ್ಜಿದ್ರೂ ಕೆಲವೊಮ್ಮೆ ಜಿಡ್ಡು ಹೋಗುವುದಿಲ್ಲ. ಇದಕ್ಕೆ ಸುಲಭ ವಿಧಾನವೆಂದ್ರೆ ನಿಂಬೆ ರಸ ಮತ್ತು ಸ್ವಲ್ಪ ಉಪ್ಪನ್ನು ಹಾಕಿ ನೆನೆಸಿಟ್ಟು ಸ್ವಲ್ಪ ಸಮಯದ ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ  ಪ್ಯಾನ್ ಹೊಳಪು ಹೆಚ್ಚುತ್ತದೆ.

ಒಮ್ಮೆ ಬಳಸಿದ ಕಡಾಯಿ ಅಥವಾ ಪಾತ್ರೆಯನ್ನು ತೊಳೆಯದೆ ಮತ್ತೆ ಬಳಸಬೇಡಿ. ಎಷ್ಟು ಸ್ವಚ್ಚವಾಗಿದ್ದರೂ ಸಹ ಒಮ್ಮೆ ತೊಳೆದೆ ಬಳಸಿ.

ಬಳಸಿದ ಪಾತ್ರೆಯನ್ನು ತೊಳೆಯದೆ ರಾತ್ರಿ ಹಾಗೆ ಇಡಬೇಡಿ. ಮಲಗುವ ಮೊದಲು ಪಾತ್ರೆಗಳನ್ನು ಸ್ವಚ್ಚಗೊಳಿಸುವುದು ಉತ್ತಮ.

ಹಳೆಯ ತುಕ್ಕು ಹಿಡಿದಿರುವ ಅಥವಾ ಬಳಸಲು ಯೋಗ್ಯವಾಗಿರದ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಹಳೆಯ ಹಾಳಾದ ವಸ್ತುಗಳನ್ನು ಅಡಿಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read