ಅಡುಗೆ ಮನೆಯಲ್ಲಿಟ್ಟ ಆಹಾರ ದೈನಂದಿನ ಜೀವನದ ಮೇಲೆ ಬೀರುತ್ತೆ ಈ ಪ್ರಭಾವ

ದೈನಂದಿನ ಜೀವನಕ್ಕೆ ಬೇಕಾಗುವ ವಸ್ತುಗಳನ್ನು ನಾವು ಅಂಗಡಿಗಳಿಂದ ಖರೀದಿ ಮಾಡಿ ತರುತ್ತೇವೆ. ಯಾವ ಸಮಯದಲ್ಲಿ ಯಾವ ವಸ್ತುವನ್ನು ಖರೀದಿ ಮಾಡಬೇಕು. ಯಾವ ವಸ್ತುವನ್ನು ಮನೆಯ ಯಾವ ಭಾಗದಲ್ಲಿ ಇಡಬೇಕು ಎನ್ನುವ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯಲ್ಲಿ ಸಂಗ್ರಹಿಸಿಟ್ಟ ವಸ್ತು ಹಾಳಾದ್ರೆ ಇದು ಮಹಾಲಕ್ಷ್ಮಿ ಹಾಗೂ ಅನ್ನಪೂರ್ಣೆಯ ಕೋಪಕ್ಕೆ ಕಾರಣವಾಗುತ್ತದೆ. ಹಾಗಾಗಿ ಆಹಾರವನ್ನು ಕೆಡದಂತೆ ಇಡುವುದು ಬಹಳ ಮುಖ್ಯ.

ಕೆಲವರು ಒಂದು ವರ್ಷಕ್ಕೆ ಬೇಕಾಗುವ ಅಕ್ಕಿ-ಗೋಧಿಯನ್ನು ಒಂದೇ ಬಾರಿ ಖರೀದಿ ಮಾಡುತ್ತಾರೆ. ಅಂತವರು ಅದು ಹಾಳಾಗದಂತೆ ಗಮನ ನೀಡಬೇಕು. ಅಕ್ಕಿ ಹಾಳಾಗದ ರಾಸಾಯನಿಕವನ್ನು ಸಿಂಪಡಿಸಿ ಪಶ್ಚಿಮ ದಿಕ್ಕಿನ ಗೋಡೆಗೆ ಇಡಬೇಕು.

ಅಡುಗೆ ಮನೆಯಲ್ಲಿ ಅವಶ್ಯವಿರುವಷ್ಟು ಪಾತ್ರೆ, ಡಬ್ಬವನ್ನು ಮಾತ್ರವಿಡಿ. ಖಾಲಿ ಡಬ್ಬವನ್ನು ಅಡುಗೆ ಮನೆಯಲ್ಲಿಡಬೇಡಿ. ಖಾಲಿಯಾದ ಡಬ್ಬವನ್ನು ಸ್ವಚ್ಛಗೊಳಿಸಿ ನೈರುತ್ಯ ದಿಕ್ಕಿನಲ್ಲಿ ಬಿಸಿಲು ಬರುವ ಜಾಗದಲ್ಲಿಡಿ. ನೀರು ಆರಿದ ಮೇಲೆ ಅದ್ರೊಳಗೆ ಆಹಾರವನ್ನು ಹಾಕಿ. ಇದ್ರಿಂದ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆ.

ಸ್ಟೋರ್ ರೂಂನ ಆಗ್ನೇಯ ದಿಕ್ಕಿಗೆ ತುಪ್ಪ, ಎಣ್ಣೆ ಹಾಗೂ ಸಿಲಿಂಡರ್ ಇಡಿ.

ಮನೆಯಲ್ಲಿ ಹಾಳಾದ, ಒಡೆದ ಮಡಿಕೆ, ಪಾತ್ರೆ, ಹಾಸಿಗೆಯನ್ನು ಇಡಬೇಡಿ. ಇದು ಆರ್ಥಿಕ ಹಾನಿಗೆ ಕಾರಣವಾಗುತ್ತದೆ. ಮನೆಯ ಒಳಗೆ ಗಿಡವನ್ನು ಬೆಳೆಸಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read