ಅಂದು RRR ಪ್ರದರ್ಶನ ಮಾಡೋ ಚಿತ್ರ ಮಂದಿರಕ್ಕೆ ಬೆಂಕಿ ಅಂತ ಹೇಳಿದ್ದ ಸಂಸದ: ಇಂದು ಅದೇ ಚಿತ್ರತಂಡಕ್ಕೆ ಅಭಿನಂದನೆ

RRR ಸಿನೆಮಾ ನೋಡಿ ಮೆಚ್ಚದವರೇ ಯಾರೂ ಇಲ್ಲ, ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಚಿತ್ರವಿದು. ಇಂದಿಗೂ ಎಷ್ಟೊ ಚಿತ್ರಮಂದಿರಗಳಲ್ಲಿ ಈ ಸಿನೆಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಅದರಲ್ಲೂ ಈ ಸಿನೆಮಾದ ‘ನಾಟು ನಾಟು‘ ಹಾಡು ಗೋಲ್ಡನ್ ಗ್ಲೋಬ್ ಅವಾರ್ಡ್ ಗೆದ್ದುಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಆದರೆ ಇದೇ ಸಿನೆಮಾ ಕುರಿತು ತೆಲಂಗಾಣದ ಬಿಜೆಪಿ ಸಂಸದನೊಬ್ಬ ವಿಚಿತ್ರ ಹೇಳಿಕೆ ಕೊಟ್ಟಿದ್ದರು.

RRR ಈ ಸಿನೆಮಾ ಪ್ರದರ್ಶಿಸುವ ಯಾವುದೇ ಚಿತ್ರಮಂದಿರ ಆಗಲಿ ಅದಕ್ಕೆ ಬೆಂಕಿ ಹಚ್ಚುತ್ತೇನೆ ಎಂದು ಈ ಸಿನೆಮಾದ ನಿರ್ದೆಶಕ ಎಸ್ಎಸ್ ರಾಜಮೌಳಿಗೆ ಬೆದರಿಕೆ ಹಾಕಿದ್ದರು. ಇಂತಹ ಒಂದು ಹೇಳಿಕೆ ಕೊಟ್ಟಿದ್ದು ತೆಲಂಗಾಣದ ಕರೀಂ‌ ನಗರ ಸಂಸದ ಬಂಡಿ ಸಂಜಯ್‌ ಕುಮಾರ್,ಈಗ ಅದೇ ವ್ಯಕ್ತಿ 2023ರ ಗೋಲ್ಡನ್ ಗ್ಲೋಬ್ ಅವಾರ್ಡ್ ಗೆದ್ದ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

RRR ಚಿತ್ರದ ನಾಟು ನಾಟು ಹಾಡಿಗೆ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆಯೇ, ಇಡೀ ದೇಶವೇ ಕುಣಿದು ಕುಪ್ಪಳಿಸಿದೆ. ಕೋಟ್ಯಾಂತರ ಜನರು ಟ್ವಿಟ್‌ ಮಾಡಿ ಚಿತ್ರತಂಡಕ್ಕೆ ಅಭಿನಂದನೆಗಳು ಮಹಾಮಳೆಯನ್ನೇ ಸುರಿಸಿದ್ದಾರೆ. ಅದೇ ಲೀಸ್ಟ್‌ನಲ್ಲಿ ಸಂಸದ ಬಂಡಿ ಸಂಜಯ್‌ ಕುಮಾರ್‌ ಇದ್ದು ‘”ಅತ್ಯುತ್ತಮ ಗೀತೆ #Naatu Naatu ಗೆ @goldenglobes ಪ್ರಶಸ್ತಿ ಬಂದಿರುವುದಕ್ಕಾಗಿ @mmkeeravaani ಗಾರು ಮತ್ತು @RRRMovie ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಈ ಐತಿಹಾಸಿಕ ಸಾಧನೆಯಿಂದ ಭಾರತ ವಿಶ್ವ ಮಟ್ಟದಲ್ಲಿ ಹೆಮ್ಮೆಪಡುವಂತೆ ಮಾಡಿದೆ ಎಂದು ಟ್ವಿಟ್ ಮಾಡಿದ್ದಾರೆ.

ಈ ಸಿನೆಮಾದಲ್ಲಿ ನಿರ್ದೇಶಕ ರಾಜ್‌ಮೌಳಿ ಐತಿಹಾಸಿಕ ಸತ್ಯಗಳನ್ನ ತಿರುಚಿದ್ದಾರೆ ಎಂದು ಆಗ ಅವರು ಆರೋಪಿಸಿದ್ದರು. ಇದೇ ಕಾರಣಕ್ಕಾಗಿ ಥೀಯೇಟರ್ನಲ್ಲಿ ಹಿಂಸಾಚಾರ ಮಾಡುವುದಾಗಿ ಎಚ್ಚರಿಕೆಯನ್ನ ಕೂಡಾ ಕೊಟ್ಟಿದ್ದರು. “ಚಿತ್ರದಲ್ಲಿ ರಾಜಮೌಳಿ ಕೊಮರಂ ಭಿಮ್‌ನ ತಲೆಯ ಮೇಲೆ ಕ್ಯಾಪ್ ಹಾಕಿದರೆ ನಾವು ಸುಮ್ಮನಿರಬೇಕೇ” ಎಂದು ಚಿತ್ರತಂಡಕ್ಕೆ ಮರುಪ್ರಶ್ನೆ ಹಾಕಿದ್ದರು.

ಅಷ್ಟೆ ಅಲ್ಲ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್‌ ನಟಿಸುತ್ತಿದ್ದ ಕೋಮರಂ ಭೀಮ್ ಅನ್ನೊ ಪಾತ್ರ ಮುಸ್ಲಿಂ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಂಜಯ್‌ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅದೆಲ್ಲ ಮನಸ್ತಾಪವನ್ನ ಮರೆತು ಚಿತ್ರತಂಡಕ್ಕೆ ಶುಭವನ್ನ ಹಾರೈಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read