ʼಅಲರ್ಜಿʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹವಾಮಾನ ಬದಲಾದಂತೆ ಅಲರ್ಜಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಈ ಅಲರ್ಜಿ ಬೆಂಬಿಡದ ಭೂತ. ಒಮ್ಮೆ ಬೆನ್ನು ಬಿದ್ರೆ ಹೋಗೋದು ಕಷ್ಟ. ಎಷ್ಟು ಔಷಧಿ ಮಾಡಿದ್ರೂ ಅಲರ್ಜಿಯಿಂದ ಮುಕ್ತಿ ಸಿಗೋದಿಲ್ಲ. ವಾತಾವರಣ ಬದಲಾದಂತೆ ಕಾಡುವ ಅಲರ್ಜಿಗಳಲ್ಲಿ ಸ್ಕಿನ್ ಅಲರ್ಜಿ ಕೂಡ ಒಂದು.

ಅಲರ್ಜಿಗೆ ಕಾರಣ :

ಹವಾಮಾನ ಬದಲಾವಣೆ, ಮಣ್ಣು-ಧೂಳಿನ ಕಣ, ಪ್ರಾಣಿಗಳನ್ನು ಮುಟ್ಟುವುದ್ರಿಂದ, ನೋವು ನಿರೋಧಕ ಔಷಧಿ ಸೇವನೆ, ಆಹಾರದ ಕಾರಣ, ಒಣ ಚರ್ಮದಿಂದ, ಕೀಟಗಳು ಕಚ್ಚುವುದ್ರಿಂದ ಅಲರ್ಜಿ ಕಾಡುತ್ತದೆ.

ಅಲರ್ಜಿ ಲಕ್ಷಣ : ಚರ್ಮದ ಮೇಲೆ ಕೆಂಪು ಚುಕ್ಕೆ, ತುರಿಕೆ, ಉರಿ, ಚರ್ಮ ಬಿರುಕು ಬಿಟ್ಟಂತೆ ಕಾಣುವುದು.

ಸ್ಕಿನ್ ಅಲರ್ಜಿಗೆ ಮನೆ ಮದ್ದು :

ಅಲೋವೆರಾ : ಅಲೋವೆರಾ ರಸದ ಜೊತೆ ಮಾವಿನಕಾಯಿ ತಿರುಳನ್ನು ಮಿಕ್ಸ್ ಮಾಡಿ ಚರ್ಮಕ್ಕೆ ಹಚ್ಚಿ. ಈ ಲೇಪವನ್ನು ಚರ್ಮಕ್ಕೆ ಹಚ್ಚುವುದ್ರಿಂದ ಉರಿ, ತುರಿಕೆ ಮಾಯವಾಗುತ್ತದೆ.

ನೀರು : ಸ್ಕಿನ್ ಅಲರ್ಜಿಯಿಂದ ಬಳಲುವವರು ಹೆಚ್ಚಿನ ನೀರು ಸೇವನೆ ಮಾಡಬೇಕು. ದೇಹದಲ್ಲಿ ಕಡಿಮೆ ನೀರಿದ್ದರೆ ಚರ್ಮದ ಅಲರ್ಜಿ ಹೆಚ್ಚಾಗುತ್ತದೆ. ಪ್ರತಿ ದಿನ ಕನಿಷ್ಠ 10 ಗ್ಲಾಸ್ ನೀರು ಕುಡಿಯಿರಿ.

ಕರ್ಪೂರ ಮತ್ತು ತೆಂಗಿನ ಎಣ್ಣೆ: ಕರ್ಪೂರವನ್ನು ಪುಡಿ ಮಾಡಿ ತೆಂಗಿನ ಎಣ್ಣೆ ಜೊತೆ ಮಿಕ್ಸ್ ಮಾಡಿ ಹಚ್ಚಿ. ಇದು ಉರಿಯನ್ನು ಕಡಿಮೆ ಮಾಡುತ್ತದೆ.

ಕಹಿ ಬೇವು : ಚರ್ಮದ ಉರಿಯೂತಕ್ಕೆ ಇದು ಬೆಸ್ಟ್. ರಾತ್ರಿ ಕಹಿ ಬೇವಿನ ಎಲೆಗಳನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಅದನ್ನು ರುಬ್ಬಿ ಹಚ್ಚಿಕೊಳ್ಳಿ. ಇದು ಚರ್ಮದ ಅಲರ್ಜಿಯನ್ನು ಕಡಿಮೆ ಮಾಡುತ್ತದೆ.

ಅಲರ್ಜಿಯಾದಾಗ ಯಾವುದೇ ಸೋಪನ್ನು ಬಳಸಬೇಡಿ. ಚರ್ಮವನ್ನು ತುರಿಸಿಕೊಳ್ಳಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read