ಹಿಮೋಗ್ಲೋಬಿನ್ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಹಿಮೋಗ್ಲೋಬಿನ್ ಅಂಶ ಅದರಲ್ಲೂ ಗರ್ಭಿಣಿಯಾಗಿದ್ದಾಗ ಬಹಳ ಕಡಿಮೆ ಇರುತ್ತದೆ. ಇದರ ಹೆಚ್ಚಳಕ್ಕೆ ಮಾತ್ರೆಗಳ ಹೊರತಾಗಿ ಅನ್ಯ ಮಾರ್ಗವೂ ಇದೆ ಎಂಬುದನ್ನು ಬಹುತೇಕರು ಮರೆತೇ ಬಿಡುತ್ತಾರೆ. ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ಹಿಮೋಗ್ಲೋಬಿನ್ ಅಂಶ ಹೆಚ್ಚಿಸಬಹುದು. ಹೇಗೆಂದಿರಾ…?

ಕಬ್ಬಿಣಾಂಶ ಹೆಚ್ಚಿರುವ ಬೀಟ್ ರೂಟ್, ಪಾಲಕ್, ಮೊಟ್ಟೆ, ಸೇಬು, ದಾಳಿಂಬೆ, ಕಲ್ಲಂಗಡಿ, ಒಣದ್ರಾಕ್ಷಿ, ಖರ್ಜೂರ, ನೆಲ್ಲಿಕಾಯಿ, ಬೆಲ್ಲ ಮತ್ತಿತರ ವಸ್ತುಗಳನ್ನು ನಿತ್ಯ ಆಹಾರದಲ್ಲಿ ಒಂದಿಲ್ಲೊಂದು ರೂಪದಲ್ಲಿ ಬಳಸುವುದರಿಂದ ದೇಹಕ್ಕೆ ಕಬ್ಬಿಣಾಂಶ ಸಹಜವಾಗಿಯೇ ಸಿಗುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಆಗುವುದಿಲ್ಲ.

ವ್ಯಕ್ತಿಯ ವಯಸ್ಸು ಮತ್ತು ತೂಕಕ್ಕೆ ಅನುಗುಣವಾಗಿ ಕ್ಯಾಲ್ಸಿಯಂ ಸೇವಿಸಬೇಕಾದ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ವಿಟಮಿನ್ ಸಿ ದೇಹಕ್ಕೆ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಪಪ್ಪಾಯ, ಸ್ಟ್ರಾಬೆರಿ, ದ್ರಾಕ್ಷಿ ಮತ್ತು ಟೊಮೆಟೊದಂಥ ಹಣ್ಣುಗಳನ್ನು ನಿತ್ಯ ಆಹಾರದಲ್ಲಿ ಸೇವಿಸಬೇಕು.

ಸೇಬು ಮತ್ತು ದಾಳಿಂಬೆಯನ್ನು ನಿತ್ಯ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪಡೆಯಬಹುದು. ಹಸಿರು ಸೊಪ್ಪು, ತರಕಾರಿಗಳನ್ನು ನಿತ್ಯ ಸೇವಿಸುವುದರಿಂದ ಹಿಮೋಗ್ಲೋಬಿನ್ ಕೂಡಾ ಹೆಚ್ಚುತ್ತದೆ. ನಿಮ್ಮ ರೋಗ ನಿರೋಧಕ ಶಕ್ತಿ ಬಲ ಪಡೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read